ದಸರಾ ಜಿಲ್ಲಾ ಕವಿ ಗೋಷ್ಠಿ




ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ದಿ.4/10 /2019 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಿದ ದಸರಾ ಜಿಲ್ಲಾ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು, ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಗ್ರಾಮಾಂತರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಚಿ.ಮಾ. ಸುಧಾಕರ್ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ರಾಮಚಂದ್ರ ವಹಿಸಿದ್ದರು.
ದೊಡ್ಡಬಳ್ಳಾಪುರ ಕಸಪ ತಾಲ್ಲೂಕು ಅಧ್ಯಕ್ಷರಾದ ಪ್ರಮೀಳಮಹಾದೇವ್ ದಸರ ಜಿಲ್ಲಾ ಕವಿಗೋಷ್ಠಿಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ಆರಾಧ್ಯ ,ಹಿರಿಯ ಕವಿಗಳಾದ ಡಾ.ಟಿ. ಗೋವಿಂದರಾಜು, ಅಧ್ಯಕ್ಷತೆಯನ್ನು ರಾಮಚಂದ್ರ ವಹಿಸಿದ್ದರು, ಅವರೊಂದಿಗೆ ಕಸಾಪ ಜಿ.ಉಪಾಧ್ಯಕ್ಷರಾದ ನಾಗರಾಜು, ಹಿರಿಯ ಕವಿ ಗವಿಸಿದ್ದಯ್ಯ, ದೇವನಹಳ್ಳಿ ಅಧ್ಯಕ್ಷರಾದ ರಾಮಕೃಷ್ಣ ಹೆಗಡೆ, ಕಾರ್ಯದರ್ಶಿ ವಿ.ಸಿ. ಜ್ಯೋತಿಕುಮಾರ್ ಮತ್ತಿತರರು ಹಾಜರಿದ್ದರು. ಕವಿಗೋಷ್ಠಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ನೆಲಮಂಗಲ ಮತ್ತು ದೊಡ್ಡಬಳ್ಳಾಪುರದ ಕವಿಗಳು ಭಾಗವಹಿಸಿದ್ದರು.
Comments