LIVE NOW
Auto Refresh

Karnataka Election LIVE: ಬಿ ಎಸ್ ಯಡ್ಯೂರಪ್ಪ ವಿಸ್ವಾಸ ಮತ ಯಾಚನೆ ಮಾಡದೇ ಹೊರ ನಡೆದರು

civicnews.in | 19 May 2018 5:27 PM

  • Share the news with -

19 May 2018 5:27 PM

ಬಿ ಎಸ್ ಯಡ್ಯೂರಪ್ಪ ವಿಸ್ವಾಸ ಮತ ಯಾಚನೆ ಮಾಡದೇ ಹೊರ ನಡೆದರು

18 May 2018 12:50 PM

ನಾಳೆ ಸಂಜೆ 4 ಗಂಟೆಗೆ ವಿಸ್ವಾಸ ಮತ ಯಾಚನೆ, ಯಡ್ಯೂರಪ್ಪ ನವರ ಭವಿಷ್ಯ ನಿರ್ಧಾರವಾಗಲಿದೆ.

18 May 2018 9:41 AM

ಈಗಲ್ ಟನ್ ನಿಂದ ಹೈದರಾಬಾದ್ ನಕಡೆ ಮುಖ ಮಡಿದ ಕೈ ಶಾಸಕರು,ಕರ್ನಾಟಕ ಮತ್ತು ಆಂಧ್ರ ಗಡಿಯಲ್ಲಿ ಶಾಸಕರ ಬಸ್ ಎಕ್ಸ್ಚೇಂಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

17 May 2018 11:05 AM

ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸುತ್ತಿರುವ ಬಿ ಎಸ್ ವೈ,

16 May 2018 9:35 AM

ಇಂದು ಬೆಳಗ್ಗೆ ಕೆಪಿಸಿಸಿ ಕೇಚೆರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು ಸಭೆಯಲ್ಲಿ ಡಿ ಸಿ ಎಂ ಹುದ್ದೆಯ ಬಗ್ಗೆ ಚೆರ್ಚೆ, ಶಾಸಕಾಂಗ ಪಕ್ಸದ ನಾಯಕನ ಆಯ್ಕೆ ಮಾಡಲಿದ್ದಾರೆ. ಸಭೆಯ ಬಳಿಕ ಶಾಸಕರ ಶಿಫ್ಟ್ ಬಗ್ಗೆ ನಿರ್ಧಾರ ಸಾಧ್ಯತೆ.

14 May 2018 2:51 PM

ಕಾಂಗ್ರೆಸ್ ಜೊತಿಗಿನ ಮೈತ್ರಿ ಬಗ್ಗೆ ಏನು ಮಾತಾಡೋದಿಲ್ಲ ನಾಳೆ ಫಲಿತಂಶ ಬಂದ ನಂತರ ಮಾತನಾಡುತ್ತೇನೆ ಒಂದೊಂದು ಸಮೀಕ್ಷೆ ಒಂದೊಂದು ರೀತಿ ಹೇಳಿತ್ತಿವೆ ಎಂದು ಎಚ್ ಡಿ ಡಿ ಹಾಸನದಲ್ಲಿ ಹೇಳಿದ್ದಾರೆ.

14 May 2018 9:47 AM

ಇಂದು ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯಲ್ಲಿ ಮರು ಮತದಾನ ನಡೆಯುತ್ತೆ. ಲೊಟ್ಟಗೊಲ್ಲಹಳ್ಳಿಯ ಮತಗಟ್ಟೆ ಸಂಖ್ಯೆ 2 ರಲ್ಲಿ ರಿವೋಟಿಂಗ್

13 May 2018 12:45 PM

ಮತ ಎಣಿಕೆಗೂ ಮುನ್ನವೇ ಬಿಜೆಪಿ ವಿಜಯೋತ್ಸವ ಆಳಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಕಾರ್ಯಕರ್ತರು ಚೆಕ್ ಪೋಸ್ಟ್ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದೆ.

11 May 2018 6:02 PM

ಬೀದರ್ ನಗರದ ರಾಂಪೂರೆ ಕಾಲೋನಿಯಲ್ಲಿರುವ ಖೇಣಿ ನಿವಾಸದ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ, ಜಿಲ್ಲಾಪಂಚಾಯತ್ ಸಿ ಇ ಓ ಸಾಥ್.

10 May 2018 9:58 AM

ಇಂದು ಚುನಾವಣಾ ಭಹಿರಂಗ ಪ್ರಚಾರ ಅಂತ್ಯ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯ ವ್ಯಾಪ್ತಿ 39 ಕಡೆ ಭರ್ಜರಿ ರೋಡ್ ಶೋ ಆಯೋಜನೆ ಮಾಡಲಿದ್ದಾರೆ. 3 ರಾಜ್ಯಗಳ ಸಿ ಎಂ 19 ಕೇಂದ್ರ ಸಚಿವರು, ಬಾದಾಮಿಯಲ್ಲಿ ಅಮಿತ್ ಶಾ, ಬಿ ಎಸ್ ವೈ, ಮೈಸೂರಿನಲ್ಲಿ ಮಧ್ಯಪ್ರದೇಶದ ಸಿ ಎಂ ಶಿವರಾಜ್ ಸಿಂಗ್ ಚೌಹಾಣ್ , ಬೆಂಗಳೂರಿನಲ್ಲಿ ಛತ್ತೀಸ್ ಗಢದ ಮುಖ್ಯಮಂತ್ರಿ ರಮಣಸಿಂಗ್. ರೋಡ್ ಶೋ ನಡೆಸಲಿದ್ದಾರೆ.

09 May 2018 3:13 PM

ಅಸಲಿ ವೋಟರ್ ಐ ಡಿ ಹಗರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕಾಶ್ ಜಾವ್ಡೇಕರ್ ಸುಳ್ಳು ಹೇಳ್ತಿದ್ದಾರೆ ಎಂದು ಮಂಜುಳಾ ನಂಜಾಮರಿ ಮಗ ಶ್ರೀಧರ್ ಹೇಳಿಕೆ ನೀಡಿದ್ದಾರೆ .

09 May 2018 1:52 PM

ಬಹಿರಂಗ ಪ್ರಚಾರಕ್ಕೆ ಇನ್ನೊಂದೇ ದಿನ ಬಾಕಿ ಇರುವ ಹಿನ್ನಲೆ, ಬೆಳ್ಳಂಬೆಳಗ್ಗೆ ಭರ್ಜರಿ ಮಾತಬೇಟೆ ಮಾಡಿದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ.

09 May 2018 9:54 AM

ಮಧ್ಯಾಹ್ನ 2 ಕ್ಕೆ ಬಿ ಟಿ ಎಂ ಲೇಔಟ್ ಕ್ಷೇತ್ರದಲ್ಲಿ ಎಚ್ ಡಿ ಕೆ ಕ್ಯಾ೦ಪೆನ್ ಕೋರಮಂಗಲ ಸ್ಟೇಷನ್ ಬಳಿಯಿಂದ ಪ್ರಚಾರ ಆರಂಭ ಮಾಡಿ ನಂತ್ರ ಚಿಕ್ಕಪೇಟೆ, ಶಾಂತಿನಗರ, ಪುಲಕೇಶಿನಗರ, ಹೆಬ್ಬಾಳ, ಯಲಹಂಕ, ದಾಸರಹಳ್ಳಿ, ಆರ್ ಆರ್ ನಗರ, ರಾಜಾಜಿನಗರದಲ್ಲಿ ಮತಯಾಚನೆ.

08 May 2018 10:38 AM

ಸೊರಬ ಕ್ಷೇತ್ರದಲ್ಲಿ ಬಂಗಾರಪ್ಪ ಬ್ರದರ್ಸ್ ಕಠಿಣ ಹೋರಾಟ

07 May 2018 3:18 PM

ಸಿ ಎಂ ಸಿದ್ದರಾಮಯ್ಯ ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಯವರು ಅವರದೇ ಶೈಲಿಯಲ್ಲಿ ಅವರ ಅಪ್ಪನಾಣೆಗೂ ಎಂ ಎಲ್ ಎ ಆಗಲ್ಲ ಎಂದು ಟಾಂಗ್ ಕೊಟ್ಟಿದಾರೆ.

07 May 2018 9:59 AM

ಅಕ್ರಮವಾಗಿ ಸಾಗಿಸುತ್ತಿದ್ದ ಮಧ್ಯ ಹಾಗೂ ಟೀ ಶರ್ಟ್ ವಶ, ಬೆಂಗಳೂರು ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಆರೋಪ ರಾಜರಾಜೇಶ್ವರಿನಗರ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೇಳಿಬಂದಿದೆ.

05 May 2018 6:49 PM

ಚಾಮರಾಜ ಕ್ಷೇತ್ರದ ಪ್ರೊ. ರಂಗಪ್ಪ ಪರವಾಗಿ ದೊಡ್ಡಗೌಡರ ಪುತ್ರಿ ಅನುಸೂಯಯಿಂದ ಅಬ್ಬರದ ಪ್ರಚಾರಕ್ಕೂ ಮುನ್ನ ಕೊತ್ವಾಲ್ ರಾಮಯ್ಯ ಬೀದಿಯಲ್ಲಿ ಮಹಿಳೆಯರಿಂದ ಆರತಿ ಮಾಡಿ ಸ್ವಾಗತಿಸಲಾಯಿತು.

05 May 2018 4:28 PM

ಸುರಪುರ ಕ್ಷೇತ್ರದ ಕಕ್ಕೇರದಲ್ಲಿ ನಟ ಸುದೀಪ್ ಭಾಷಣ ಮಾಡಿ ನನಗೆ ರಾಜಕೀಯ ಗೊತ್ತಿಲ್ಲ ನಾನು ನನ್ನ ಸ್ನೇಹಿತನಿಗೋಸ್ಕರ ಬಂದಿದ್ದೇನೆ ನಾನು ಯಾವ ಪಕ್ಷಕ್ಕೂ ಸೀಮಿತನಲ್ಲ ಎಂದು ಹೇಳಿದ್ದಾರೆ.

05 May 2018 4:13 PM

ಮೋದಿಯಿಂದ ಮತ್ತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಟಾರ್ಗೆಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ, ಕಾಂಗ್ರೆಸ್ ಉಳಿದಿರುವುದೇ ಜೆಡಿಎಸ್ ನಿಂದ, ಕಾಂಗ್ರೆಸ್ ಮತ್ತು ಜೆಡಿಎಸ್ ತೆರೆಮರೆಯಲ್ಲಿ ಹೊಂದಾಣಿಕ್ಕೆ ಮಾಡಿಕೊಂಡಿವೆ ಎಂದು ಹೇಳಿದ್ದಾರೆ.

05 May 2018 12:49 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಇಂದು ಪ್ರಚಾರಕ್ಕೆ ಆಗಮಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ದರ್ಶನ್ ನಾಗನಹಳ್ಳಿಗೆ ಕಾಲಿಡುತ್ತಿದ್ದಂತೆ ಅಲ್ಲಿನ ಕೆಲ ಗ್ರಾಮಸ್ಥರು ಹಾಗೂ ಜೆಡಿಎಸ್ ಕಾರ್ಯಕರ್ತರು ವಾಹನ ತಡೆದು ಗ್ರಾಮ ಪ್ರವೇಶಿಸದಂತೆ ಘೇರಾವ್ ಹಾಕಿದರು.

04 May 2018 6:23 PM

ಸಿ ಎಂ ಪರ ಸುದೀಪ್ ಪ್ರಚಾರ ವಿಚಾರಕ್ಕೆ ಶ್ರೀರಾಮುಲು ಚಾಮರಾಜನಗರದ ಕೊಳ್ಳೇಗಾಲದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

04 May 2018 3:22 PM

ಸಿಲಿಕಾನ್ ಸಿಟಿಯಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಪರ ಮತಯಾಚನೆ ಮಾಡಿದ ರಾಕಿಂಗ್ ಸ್ಟಾರ್ ಯಾಶ್ .

04 May 2018 12:51 PM

ಬಳ್ಳಾರಿಯಲ್ಲಿ ಮೋದಿ ಭಾಷಣಕ್ಕೆ ಜನತೆ ಫಿದಾ. "ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಸಿ" ಎಂದು ಕನ್ನಡದಲ್ಲೇ ಅಬ್ಬರಿಸಿದ ಪ್ರಧಾನಿ ನರೇಂದ್ರ ಮೋದಿ.

02 May 2018 12:16 PM

ಜಿ ಟಿ ದೇವೇಗೌಡರ ನಿವಾಸದಲ್ಲಿ ಸಾಹುಕಾರಹುಂಡಿ ಗ್ರಾಮ ಪಂಚಾಯಿತಿ ಸದಸ್ಯ ಡಿ. ಶ್ರೀರಾಮ್, ಪುಟ್ಟಸ್ವಾಮಿ, ಹರೀಶ್, ಪ್ರಮೋದ್ ಮತ್ತು ಬೆಂಬಲಿಗರು ಜೆಡಿಎಸ್ ಸೇರ್ಪಡೆ ಗೊಂಡರು.

02 May 2018 12:05 PM

ಮತಯಾಚನೆಗೆ ಹೋದ ಮಂಜೇಗೌಡರಿಗೆ ಊರಿನ ಗ್ರಾಮಸ್ಥರು ಬಹಿಷ್ಕಾರ ಹಾಕಿದರೆ. ಹಾಸನ ಜಿಲ್ಲೆಯ ದೇವಿಹಳ್ಳಿ, ದುದ್ದ ಗ್ರಾಮದಲ್ಲಿ ಈ ಘಟನೆ ನಡೆದಿದೆ.

02 May 2018 11:49 AM

ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆಗೆ ಮುಂದಾದ ಯಶ್, ಮೈಸೂರಿನ ಕೃಷ್ಣರಾಜದಲ್ಲಿ ಬಿಜೆಪಿಯ ರಾಮದಾಸ್, ಕೆ ಆರ್ ನಗರದಲ್ಲಿ ಜೆಡಿಎಸ್ ನ ಸಾ.ರಾ. ಮಹೇಶ್ ಪರ ಪ್ರಚಾರ.

28 Apr 2018 4:49 PM

ಬಾಲಕೃಷ್ಣರವರ ಕ್ಯಾಸೆಟ್ ಬಿಡುಗಡೆ ಹೇಳಿಕೆಗೆ ತಿರುಗೇಟು ಕೊಟ್ಟ ನಿಖಿಲ್ ಸ್ವಾಮಿ ತಾಕತ್ ಇದ್ದಾರೆ ಬಿಡುಗಡೆ ಮಾಡಲಿ ಎಂದು ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ

28 Apr 2018 2:59 PM

ಸಿ ಎಂ ಸಿದ್ದರಾಮಯ್ಯನವರ ಸಂಬಂದಿ ಉಮೇಶ್ ರವರ ಚಾಮರಾಜನಗರದ ಕೋರ್ಟ್ ರಸ್ತೆ ಯಲ್ಲಿರುವ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಧಾಖಲೆಗಳ ಪರಿಶೀಲನೆ ಮಾಡುತ್ತಿದ್ದರೆ.

28 Apr 2018 2:52 PM

ಅರ್ ಟಿ ಓ ಅಧಿಕಾರಿಗಳು ಮನೆಗೆ, ಎಚ್ ಡಿ ರೇವಣ್ಣ ನವರು ಕಾಂಗ್ರೆಸ್ ನ ಪರವಾಗಿ ಸಿ ಎಂ ಕೃಷ್ಣೇಗೌಡ, ವಿ ಪಿ ರಮೇಶ್ ರವರು ಹಣ ಹಂಚಿಕೆ ಮಾಡಿದ್ದರು ಎಂದು ಆರೋಪಿಸಿದ್ದರು. ಸಾರಿಗೆ ಆಯುಕ್ತರು ಇಬ್ಬರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದಾರೆ.

28 Apr 2018 11:42 AM

ಇಂದು ವಿಶ್ವನಾಥ್ ಪರ ಪ್ರಚಾರ ನಡೆಸಲಿರುವ ಎಚ್ ಡಿ ದೇವೇಗೌಡರು ಮಧ್ಯಾಹ್ನ 2 ಗಂಟೆಗೆ ಪ್ರಚಾರ ನಡೆಸಲಿರುವ ಎಚ್ ಡಿ ಡಿ ಬಿಳಿಕೆರೆ, ಕೆಂಡಗಣ್ಣ ಸ್ವಾಮಿ ಗದ್ದಿಗೆ, ಹುಣಸೂರು,ಕಟ್ಟೆಮಳಲವಾಡಿ, ಹಿರಿಕ್ಯಾತನಹಳ್ಳಿ ಯಲ್ಲಿ ಪ್ರಚಾರಕ್ಕೆ ಹಿಳಿಯಲ್ಲಿದ್ದರೆ.