ಪುರಾತನ ಇತಿಹಾಸವುಳ್ಳ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಕರಿಸಿ

05 Oct 2019 7:16 AM |
249 Report

ದೊಡ್ಡಬಳ್ಳಾಪುರ ಗಾಂಧೀನಗರದಲ್ಲಿರುವ ಪುರಾತನವಾದ ಶ್ರೀ ಆದಿನಾರಾಯಣಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಈ ಪುರಾತನ ಇತಿಹಾಸ ಹಿನ್ನಲೆಯುಳ್ಳ ದೇವಾಲಯದ ಮರು ನಿರ್ಮಾಣದ ಗುದ್ದಲಿ ಪೂಜೆಯನ್ನು 3 ನೇ ಅಕ್ಟೋಬರ್ 2019 ರ ಗುರುವಾರ ಬೆಳಿಗ್ಗೆ 9 ಘಂಟೆಗೆ ದೇವಾಂಗ ಮಂಡಲಿ ಮಾಜಿ ಅಧ್ಯಕ್ಷ ವಿ.ತಿಮ್ಮಶೆಟ್ಟಪ್ಪ ನೆರವೇರಿಸಿದರು. ದೇವಸ್ಥಾನದ ಜೀರ್ನೋದ್ಧಾರಕ್ಕೆ ಸಹಾಯ ಮಾಡುವವರು ಕಾರ್ಯಕಾರಿ ಸಮಿತಿಯ ಬಿ.ಜಿ.ಶ್ರೀನಿವಾಸ್-9036666994 ರಾಜಶೇಖರ್-9886836185 ಮಂಜುನಾಥ್-9060759008 ಸುನೀಲ್-8971295960 ಪ್ರವೀಣ್-9844737676 ರವರನ್ನು ಸಂಪರ್ಕಿಸಿ.

ಕ್ರಿಸ್ತ ಶಕ 1226 ರಲ್ಲಿ ಈ ಪ್ರದೇಶ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿತ್ತು ಎಂಬುದಕ್ಕೆ ಇತಿಹಾಸದಲ್ಲಿ ಉಲ್ಲೇಕವಿದೆ, ಒಂದನೇ ದೊಡ್ಡಬಲ್ಲಾಳನು ದೊಡ್ಡಬಳ್ಳಾಪುರವನ್ನು ಸ್ಥಾಪಿಸಿ ಈ ಪ್ರದೇಶದಲ್ಲಿ ಕೋಟೆಯನ್ನು ನಿರ್ಮಿಸಿರುತ್ತಾರೆ, ದೊಡ್ಡಬಳ್ಳಾಪುರದ ಕುಲದೇವರಾಗಿದ್ದ ಶ್ರೀ ಆದಿನಾರಾಯಣಸ್ವಾಮಿ ವಿಗ್ರಹವನ್ನು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಪೂಜೆ ಮತ್ತು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗುತ್ತಿತ್ತು. ಹೊಯ್ಸಳ ಸಾಮ್ರಾಜ್ಯ ನಾಶವಾದ ನಂತರ, ಆವತಿ ಸಂಸ್ಥಾನ ಸ್ಥಾಪಕ ಬೈರೇಗೌಡ ವಂಶಸ್ಥ ಮಲ್ಲ ಬೈರೇಗೌಡ ಈ ಕೋಟೆಯ ಮೂಲಕ ಆಳ್ವಿಕೆ ನೆಡೆಸುತ್ತಿದ್ದ.  ವಿಜಯನಗರ ಅರಸರ ಸಹಕಾರದಿಂದ ಗೌರೀಬಿದನೂರು, ಪೆನುಕೊಂಡವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡು,ಕೆರೆ ಕುಂಟೆಗಳನ್ನು ನಿರ್ಮಿಸಿ ವ್ಯವಸಾಯಕ್ಕೆ ಪ್ರೋತ್ಸಾಹಿಸುತ್ತಿದ್ದರು, ನಮ್ಮ ಊರಿನ ನಾಗರ ಕೆರೆ ನಿರ್ಮಾಣಗೊಂಡಿರುವುದು ಈ ಕೋಟೆಯ ಕಲ್ಲುಗಳಿಂದಲೇ ಎಂದು ಇತಿಹಾಸ ಹೇಳುತ್ತದೆ, ಈ ದೇವಾಲಯದಲ್ಲಿದ್ದ ಶ್ರೀ ಆದಿನಾರಾಯಣಸ್ವಾಮಿ ವಿಗ್ರಹವನ್ನು ತೇರಿನಬೀದಿಯಲ್ಲಿರುವ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿಟ್ಟು ಇಂದಿಗೂ ಪೂಜಾ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ. ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಆದಿನಾರಾಯಣ ವಿಗ್ರಹವನ್ನು ಪುನರ್ ಪ್ರತಿಸ್ಠಾಪಿಸಿ.ಹಿಂದಿನ ಗತ ವೈಭವವನ್ನು ಮರುಕಳಿಸುವಂತೆ ಹಾಗೂ ಜಾತಿ ಭೇದವಿಲ್ಲದೆ ನಗರದ ಸಮಸ್ತ ನಾಗರೀಕರ ಕುಲದೇವರನ್ನು ಮೂಲ ಸ್ಥಾನಕ್ಕೆ ಸೇರುವಂತೆ ಮಾಡುವುದರಿಂದ ಮಾತ್ರ ನಗರದ ಏಳಿಗೆಗೆ ಸಹಕಾರಿಯಾಗುತ್ತದೆ.

ಕಾರ್ಯಕ್ರಮದಲ್ಲಿ ಶ್ರೀ ಆದಿನಾರಾಯಣಸ್ವಾಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎಸ್.ಕೇಶವ. ಉಪಾಧ್ಯಕ್ಷ ಎಂ.ಜಿ. ಚಂದ್ರಶೇಖರಯ್ಯ, ಕಾರ್ಯದರ್ಶಿ ಬಿ.ಜಿ.ಶ್ರೀನಿವಾಸ್, ಸಹಕಾರ್ಯದರ್ಶಿ ಎಸ್.ವೆಂಕಟೇಶ್, ಖಜಾಂಚಿ ಜಿ.ರಾಜಶೇಖರ್, ನಿರ್ದೇಶಕರಾದ ಡಿ.ಎಲ್.ಶ್ರೀನಿವಾಸಮೂರ್ತಿ. ಆಂಜಿನಪ್ಪ, ವಿ.ಸುನೀಲ್, ಕೆ.ಎನ್.ಮಂಜುನಾಥ್, ಎಂ.ಶಿವಕುಮಾರ್, ವಿ.ಅನಿಲ್, ಎಂ.ಲೋಕೇಶ್ ಕುಮಾರ್, ಎ.ಪ್ರವೀಣ್, ಆಶಿಷ್ ಗಾದಿಯಾ ಜೈನ್, ಸುಚೇತನಾ ಎಜುಕೇಷನಲ್ ಟ್ರಸ್ಟ್ ಸದಸ್ಯರು, ಪರಿಸರಸಿರಿ ಸಂಸ್ಥೆಯ ಮಂಜುನಾಥ್ ರೆಡ್ಡಿ, ರಾಜಶೇಕರ್, ಪಿ.ಸಿ.ವಿ.ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಿ.ಸಿ.ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.

Edited By

Ramesh

Reported By

Ramesh

Comments