ಗಾಂಧೀಜಿಯವರ ಆದರ್ಶ ಮತ್ತು ತತ್ವಗಳನ್ನು ಪಾಲಿಸಿ, ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಎಂ. ನಾಗರಾಜ್ ಕರೆ

03 Oct 2019 5:17 AM |
438 Report

ದೊಡ್ದಬಳ್ಳಾಪುರ ನಗರದಲ್ಲಿರುವ ಕರ್ನಾಟಕ ಮಹಿಳಾ ಮಕ್ಕಳ ಮಾನವ ಹಕ್ಕುಗಳ ರಕ್ಷಣಾ ವೇದಿಕೆ ವತಿಯಿಂದ ಮಹಾತ್ಮ ಗಾಂಧೀಜಿ ಯವರ 15೦ನೇ ಹುಟ್ಟುಹಬ್ಬ ಮತ್ತು ಲಾಲ್ ಬಹುದು ಶಾಸ್ತ್ರಿಯವರ 115 ನೇ ಹುಟ್ಟುಹಬ್ಬವನ್ನು ವೇದಿಕೆಯ ಕಾರ್ಯಾಲಯದಲ್ಲಿ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ R.L. ಜಾಲಪ್ಪ ಕಾಲೇಜಿನ ಪ್ರಾಂಶುಪಾಲರಾದ ಕೆ.ಆರ್. ರವಿಕಿರಣ್, ಕನ್ನಡ ಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಎಂ .ನಾಗರಾಜ್, ಕಾರ್ಯದರ್ಶಿ ಸುಧಾಕರ್, ಖಜಾಂಚಿ ಗಿರೀಶ್ ಮತ್ತು ಮಹಿಳಾ ಮತ್ತು ಮಾನವ ಹಕ್ಕುಗಳ ಸಂಘಟನೆಯ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕೆ.ಆರ್. ರವಿಕಿರಣ್ ಗಾಂಧೀಜಿಯವರ ಇತಿಹಾಸ ಮತ್ತು ಅವರ ಆದರ್ಶಗಳ ಬಗ್ಗೆ ವಿವರವಾಗಿ ತಿಳಿಸಿದರು. ಹಾಗೂ ಇದೇ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಎಂ. ನಾಗರಾಜ್ ಅವರು ಗಾಂಧೀಜಿಯವರ ಆದರ್ಶಗಳು ಮತ್ತು ತತ್ವಗಳನ್ನು ನಾವು ಪಾಲಿಸಲೇಬೇಕು. ಮತ್ತು ಅವರ ಸರಳತೆ ಮತ್ತು ತಾಳ್ಮೆ ಸಹನೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರವಿಕಿರಣ್ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಜಾಗೃತ ವೇದಿಕೆಯ ಮಹೇಶ್ವರಿ, ರಾಜೇಶ್, ಹೇಮಂತ, ವಾಸು,ಶ್ಯಾಮಲಾ ಮತ್ತು ಮಹಿಳಾ ಸಂಘದ ಅಧ್ಯಕ್ಷೆ ಸುಗುಣ,ಗೌರಮ್ಮ ಮತ್ತಿತರರು ಭಾಗವಹಿಸಿದ್ದರು.

Edited By

Ramesh

Reported By

Ramesh

Comments