ಗಾಂಧೀಜಿ-೧೫೦, ಶಾಸ್ತ್ರೀಜಿ-೧೧೫ ನೇ ಜನ್ಮದಿನಾಚರಣೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ

03 Oct 2019 5:11 AM |
368 Report

ದಿನಾಂಕ 2/10/2019 ರಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಷ್ಟ್ರಪಿತ ಮಹಾತ್ಮಗಾಂಧಿಯವರ -150 ಜನ್ಮದಿನಾಚಾರಣೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ-115 ಜನ್ಮದಿನಾಚಾರಣೆ ಯನ್ನು ಕಛೇರಿಯ ಸಭಾಂಗಣದಲ್ಲಿ ಆಚರಿಸಲಾಯಿತು. ಕನ್ನಡಪರ ಹಿರಿಯ ಹೋರಾಟಗಾರರು, ನಗರಸಭೆಯ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಗಾಂಧೀಜಿ ಕುರಿತಾಗಿ ಮಾತನಾಡುತ್ತಾ ಸದ್ಯದ ಪರಿಸ್ಥಿತಿಯಲ್ಲಿ ಗಾಂಧೀ ವಿಚಾರಧಾರೆಗಳು ಸಮಾಜದ ಎಲ್ಲಾ ಸ್ಥರಗಳಲ್ಲಿ, ಯುವ ಜನತೆ ಅಳವಡಿಸಿಕೊಳ್ಳುವುದರಿಂದ ದೇಶವನ್ನು ಕಾಡುತ್ತಿರುವ ಪಿಡುಗುಗಳಿಂದ ಮುಕ್ತವಾಗಲು ಸಾಧ್ಯವಾಗುತ್ತದೆ, ಭವಿಷ್ಯದ ರಾಜಕಾರಣಿಗಳು ಮಾದರಿಯಾಗಿ ಕಾಣಲೇಬೇಕಾದ ನಿಸ್ಪೃಹ ರಾಜಕಾರಣಿ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಜೀ ಎಂದರು

ಕನ್ನಡ ಜಾಗೃತಿ ವೇದಿಕೆಯ (ನೊಂ) ತಾಲ್ಲೂಕು ಅಧ್ಯಕ್ಷ ಎಂ.ನಾಗರಾಜು  ಮಾತನಾಡಿ ಗಾಂಧಿಜೀ ಹಾಗೂ ಶಾಸ್ತ್ರೀಯವರ ಬದುಕು ಅವರ ಹೋರಾಟ , ಸರಳ ಜೀವನ ಇಂದಿನ ಯುವಕರಿಗೆ ಮಾದರಿ ಎಂದರು. ತಾ.ಕಸಾಪ ಅಧ್ಯಕ್ಷೆ ಪ್ರಮೀಳಮಹಾದೇವ್  ಮಾತನಾಡಿ ಗಾಂಧೀಜಿ ಹಾಗೂ ಶಾಸ್ತ್ರೀಯವರ ಬದುಕು ಮತ್ತು ಜೀವನ ನಮಗೆಲ್ಲಾ ಆದರ್ಶವಾಗಿದೆ. ಅವರ ಬಗ್ಗೆ ಕೇಳಿದ ಮಾತ್ರಕ್ಕೆ ನಾವು ಗೌರವ ಸೂಚಿಸಿದಂತೆ ಆಗೋಲ್ಲ. ನಮ್ಮ ಜೀವನದಲ್ಲಿ ಅವರ ಸರಳತೆ ಅವರ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಅದಕ್ಕೊಂದು ಅರ್ಥ ಸಿಗಲು ಸಾಧ್ಯ ಎಂದು ಹೇಳಿದರು. ಕಸಾಪ ಕಾರ್ಯಾಧ್ಯಕ್ಷ ತರಿದಾಳ್ ಶ್ರೀನಿವಾಸ್ ಕಾರ್ಯಕ್ರಮ ನಡೆಸಿಕೊಟ್ಟರು.  ವಿ.ಆರ್. ಕೃಷ್ಣಮೂರ್ತಿ ತಂಡದವರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು, ಕಸಾಪ ಗೌರವ ಕಾರ್ಯದರ್ಶಿ ಡಿ. ಈ. ಶಿವಕುಮಾರ್, ಜಿಲ್ಲಾ ಮಾಜಿ ಕೋಶಾಧ್ಯಕ್ಷ ನ.ಮಹಾದೇವ್, ಕವಿ ಪಾಲ್ ಪಾಲ್ ದಿನ್ನೆ ವೆಂಕಟೇಶ್ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುಗಳಾಗ ಶಂಕರಪ್ಪ, ಹೊನ್ನೂರಪ್ಪ, ಷಫೀರ್, ಸೂರ್ಯನಾರಾಯಣ್, ಮೀನಮ್ಮ ಅಶ್ವಥ್, ಲೀಲಾವತಿ, ಅರುಣಮೂರ್ತಿ, ಮಮತ ಲಕ್ಷ್ಮೀನಾರಾಯಣ್, ಜಾಗೃತಿ ವೇದಿಕೆಯ ಖಜಾಂಚಿ ಗಿರೀಶ್, ಮಂಜುನಾಥ್, ಕೆ. ಆರ್. ಸುಧಾಕರ್ ಹಾಗೂ ದರ್ಗಾಜೋಗಳ್ಳಿಯ ಯೋಗ ಕೃಷ್ಣಪ್ಪ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Edited By

Ramesh

Reported By

Ramesh

Comments