ನಗರದ ಪುರಪಿತೃವಿನ ಪ್ರತಿಮೆ ಭಗ್ನ....ಕಿಡಿಗೇಡಿಗಳ ಕೃತ್ಯ ಶಂಕೆ?

30 Sep 2019 7:51 AM |
310 Report

ದೊಡ್ಡಬಳ್ಳಾಪುರ ನಗರದ ಮುಖ್ಯ ರಸ್ತೆ, ಮಾರ್ಕೆಟ್ ಸ್ಕೂಲ್ ಬಳಿ ಇರುವ ಪುರಪಿತೃ ಲೋಕಸೇವಾನಿರತ ಶ್ರೀ ಕೊಂಗಾಡಿಯಪ್ಪನವರ ಪ್ರತಿಮೆಯನ್ನು ಶನಿವಾರ ರಾತ್ರಿ ಕಿಡಿಗೇಡಿಗಳು ವಿರೂಪಗೊಳಿಸಿರುವ ಘಟನೆ ನೆಡೆದಿದೆ, ಬಲವಾದ ಕಲ್ಲಿನಿಂದ ಬಿದ್ದ ಹೊಡೆತಕ್ಕೆ ಪ್ರತಿಮೆಯ ಮೂಗು ಮುರಿದು ಬಿದ್ದಿದೆ. ವಿಷಯ ತಿಳಿಯುತ್ತಿದ ಹಾಗೆಯೇ ದೇವಾಂಗ ಮಂಡಲಿಯ ಕಾರ್ಯಕಾರಿ ಮಂಡಲಿ ಸದಸ್ಯರು, ಜನಾಂಗದ ಹಿರಿಯ ಮುಖಂಡರು ಸ್ಥಳಕ್ಕೆ ಆಗಮಿಸಿ ಕಿಡಿಗೇಡಿಗಳು ನೆಡೆಸಿರುವ ಈ ಕೃತ್ಯವನ್ನು ಖಂಡಿಸಿದರು, ನೆರೆದಿದ್ದ ನಾಗರೀಕರು ಪ್ರತಿಭಟನೆ ನೆಡೆಸಿ ದಿಕ್ಕಾರ ಕೂಗಿದರು. ಭಿನ್ನಗೊಂಡ ಪ್ರತಿಮೆಯನ್ನು ಪುನರ್ ಸ್ಥಾಪಿಸಲು ಆಗ್ರಹಿಸಿದರು, ಸ್ಥಳಕ್ಕೆ ಆಗಮಿಸಿದ ಪಿ.ಎಸ್.ಐ. ವೆಂಕಟೇಶ್ ಪರಿಶೀಲನೆ ನೆಡೆಸಿದರು.

ದೇವಾಂಗ ಮಂಡಲಿ ಕಛೇರಿಯಲ್ಲಿ ಪೋಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತುರ್ತು ಸಭೆ ನೆಡೆಸಲಾಯಿತು, ದೇವಾಂಗ ಮಂಡಲಿಯ ಹಲವು ಮುಖಂಡರು ಮಾತನಾಡಿ ಶಾಂತಿಭಂಗಕ್ಕೆ ಅವಕಾಶ ನೀಡದೆ ಕೋಡಲೇ ಪೋಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನೆಡೆಸಿ ಅಪರಾಧಿಗಳನ್ನು ಬಂಧಿಸಬೇಕು, ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಹೇಳಿದರು. ದೂರು ಸ್ವೀಕರಿಸಿದ ನಗರ ಠಾಣೆ ಆರಕ್ಷಕ ಉಪನಿರೀಕ್ಷಕ ಕೆ.ವೆಂಕಟೇಶ್ ಮಾತನಾಡಿ ಇದೊಂದು ಸೂಕ್ಷ್ಮ ಘಟನೆಯಾಗಿದ್ದು ಪೋಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ತುರ್ತು ತನಿಖೆ ನೆಡೆಸಲಿದ್ದೇವೆ, ಆರೋಪಿಗಳ ಪತ್ತೆಗಾಗಿ ಪುತ್ಥಳಿ ಸಮೀಪದ ಸಿಸಿ ಕ್ಯಾಮರಾಗಳ ಪರಿಶೀಲನೆ ನೆಡೆಸಲಾಗುವುದು, ಶೀಘ್ರವಾಗಿ ಆರೋಪಿಗಳ ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದರು.

ದೇವಾಂಗ ಮಂಡಲಿ ಹಂಗಾಮಿ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಕೇಶವ, ಮಾಜಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್, ಮುಖಂಡರಾದ ಕೆ.ಜಿ.ಅಶೋಕ್, ನಾಗರಾಜ್, ಪತ್ರಕರ್ತರಾದ ಕೆ.ಆರ್.ರವಿಕಿರಣ್, ಶ್ರೀಕಾಂತ್ ನಿರ್ದೇಶಕಾರಾದ ಅಖಿಲೇಶ, ಶಿವರಾಂ ಪ್ರಭಾಕರ್, ಜನಾರ್ಧನ್,ರಾಘವೇಂದ್ರ, ಗೋಪಿ, ಸಹಕಾರ್ಯದರ್ಶಿ ನಟರಾಜ್, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಕಾರ್ಯದರ್ಶಿ ಆರೂಡಿ ರಮೇಶ್ ಮತ್ತಿತರರು ಭಾಗವಹಿಸಿದ್ದರು.

Edited By

Ramesh

Reported By

Ramesh

Comments