ಚಕ್ರವರ್ತಿಸೂಲಿಬೆಲೆ ಒಬ್ಬ ದೇಶದ್ರೋಹಿ ಅನ್ನೋದ್ರಲ್ಲಿ ಅನುಮಾನವೇ ಬೇಡ

26 Sep 2019 7:09 AM |
326 Report

ಯುವಾಬ್ರಿಗೇಡ್ ನಾಯಕ ಚಕ್ರವರ್ತಿಸೂಲಿಬೆಲೆ ಒಬ್ಬ ದೇಶದ್ರೋಹಿ ಅನ್ನೋದ್ರಲ್ಲಿ ಅನುಮಾನವೇ ಬೇಡ.... ರಮಾನಾಥ್ ರೈ ಪ್ರಕಾರ ಸೂಲಿಬೆಲೆ ಒಬ್ಬ ದೇಶದ್ರೋಹಿ...ಸಿದ್ದಣ್ಣನ ಪ್ರಕಾರ ಸೂಲಿಬೆಲೆ ಒಬ್ಬ ಕೋಮುವಾದಿ....ಹೌದು ಕಣ್ರೀ ಈ ಚಕ್ರವರ್ತಿ ಸೂಲಿಬೆಲೆ ಒಬ್ಬ ದೇಶದ್ರೋಹಿ ಮತ್ತು ಕೋಮುವಾದಿ ಅನ್ನೋದ್ರಲ್ಲಿ ಎರಡು ಮಾತಿಲ್ಲ... ಯಾಕೆ ಅಂತ ಹೇಳ್ತೀನಿ...ಬಾಲ್ಯದಲ್ಲಿ ಮಕ್ಕಳ ಜೊತೆ ಆಡುವ ಬದಲು ರಾಮಕೃಷ್ಣ ಪರಮಹಂಸರ ಮತ್ತು ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡ ಈ ಚಕ್ರವರ್ತಿ ಸೂಲಿಬೆಲೆ ಒಬ್ಬ ಕೋಮುವಾದಿನೇ..ಹುಡುಗಿಯರ ಹಿಂದೆ ಬೀಳಬೇಕಿದ್ದ ಯೌವನದಲ್ಲಿ ಹೋಗಿ ಹೋಗಿ ಸ್ವಾತಂತ್ರ್ಯ ಹೋರಾಟಗಾರ ಜೀವನ ಚರಿತ್ರೆಗಳ ಹಿಂದೆ ಬಿದ್ನಲ್ಲ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಈತ ದೇಶದ್ರೋಹಿನೇ..

ಮದುವೆ ಆಗುವ ವಯಸ್ಸಿನಲ್ಲಿ ದೇಶಸೇವೆಗಾಗಿ ಸನ್ಯಾಸತ್ವ ಸ್ವೀಕರಿಸಿದನಲ್ಲ ಈ ಚಕ್ರವರ್ತಿ ಸೂಲಿಬೆಲೆ ಒಬ್ಬ ದೇಶದ್ರೋಹಿನೇ ..ಇಂಜಿನಿಯರಿಂಗ್ ಓದಿ ಕೆಲಸಕ್ಕೆ ಹೋಗುವ ಬದಲು ಹಿಂದೂಧರ್ಮದ ರಕ್ಷಣೆಗೆ ನಿಂತನಲ್ಲ ಈ ಚಕ್ರವರ್ತಿ ಸೂಲಿಬೆಲೆ ಒಬ್ಬ ಕೋಮುವಾದಿ ಅನ್ನೋದ್ರಲ್ಲಿ ತಪ್ಪಿಲ್ಲ..ಮೊಬೈಲ್ ನಲ್ಲಿ ಬರಿ ದೇಹದ ಸುಖಕ್ಕಾಗಿ ವಿಡಿಯೋ ನೋಡುತ್ತಿದ್ದ ಯುವಪೀಳಿಗೆಯನ್ನು ದೇಶಭಕ್ತಿಯ ವಿಡಿಯೋ ನೋಡುವಂತೆ ಪ್ರೇರೆಪಿಸಿದನಲ್ಲ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ...ಸೆಲ್ಫಿ ತಗೊಂಡು ಕಾಲಹರಣ ಮಾಡುತ್ತಿದ್ದ ಯುವತಿಯರ ಮನಸಲ್ಲಿ ಸೋದರಿ ನಿವೇಧಿತಾರ ಚಿಂತನೆ ತುಂಬಿದನಲ್ಲ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗ್ಲೂ ದೇಶದ್ರೋಹಿ ಕಣ್ರೀ.  ಹುಡುಗಿಯರು ಹಾಕೋ ನಾಯಿಮರಿ ಪೋಟೋಗೆ ಲೈಕು ಕಮೆಂಟು ಕೊಡೋದಕ್ಕೆ ಹಾತೋರೆಯುತ್ತಿದ್ದ ಯುವಕರಿಗೆ ವಿವೇಕಾನಂದ,ಸಾವರ್ಕರ್,ಭಗತ,ಸಿಂಗ್, ಸುಭಾಷ್ ಚಂದ್ರ ಬೋಸ್ ರಂತಹ ಮಹನೀಯರ ಬಗ್ಗೆ ಚರ್ಚೆ ಮಾಡುವಂತೆ ತನ್ನ ಭಾಷಣದ ಮುಖಾಂತರ ಪ್ರೇರಣೆ ಕೊಟ್ನಲ್ಲಾ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ. 

ಬರಿ ಭಾಷಣದಿಂದ ಬದಲಾವಣೆ ಸಾಧ್ಯವಿಲ್ಲ ಅಂತ ಯುವಕರನ್ನು ಸಂಘಟಿಸಿ ಕಲ್ಯಾಣಿಗಳನ್ನು ಸ್ವಚ್ಛಗೊಳಿಸುತ್ತ ಮೋದಿಯ ಸ್ವಚಭಾರತಕ್ಕೆ ಒಂದು ಅರ್ಥ ಕೊಟ್ನಲ್ಲಾ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ. ಸ್ವಾತಂತ್ರ್ಯ ಅಂದ್ರೆ ಗಾಂಧೀಜಿ ಅನ್ಕೊಂಡಿದ್ದ ಸಮಾಜಕ್ಕೆ ಗಾಂಧೀಜಿಗಿಂತ ಮುಂಚೆಯೇ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಸಾವಿರಾರು ಹೋರಾಟಗಾರರ ಜೀವನವನ್ನು ಇದೇ ಸಮಾಜದ ಮುಂದೆ ಅನಾವರಣಗೊಳಿಸಿದ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ. ಎಲ್ಲೂ ಕೆಲಸ ಸಿಗದೇ ಬಡತನಕ್ಕೆ ಸೈನ್ಯ ಸೇರುತ್ತಾರೆ ಅಂತ ಹೇಳಿಕೆ ಕೊಡುವ ನಾಯಿಗಳ ನಡುವೆ ಸೈನಿಕರನ್ನು ಕಣ್ಮುಂದೆ ಇರುವ ದೇವರು ಅಂತ ಬಣ್ಣಿಸಿ ಸೈನಿಕರ ಮೇಲೆ ಭಾರತೀಯರ ಪ್ರೀತಿ ಹೆಚ್ಚುವಂತೆ ಮಾಡಿದ್ನಲ್ಲ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ಕೋಮುವಾದಿ.

ಸುಳ್ಳು ಇತಿಹಾಸ ಓದಿ ದೇಶದ್ರೋಹಿಗಳನ್ನೇ ದೇಶಭಕ್ತರು ಅಂತ ಅನ್ಕೊಂಡಿದ್ದ ನಮಗೆ ನೈಜ ಇತಿಹಾಸದ ದರ್ಶನವನ್ನು ದಾಖಲೆ ಸಮೇತ ಸ್ಪಷ್ಟಪಡಿಸಿ ನಮ್ಮ ದೇಶಭಕ್ತಿ ಜಾಗೃತಗೊಳಿಸಿದ ಈ ಚಕ್ರವರ್ತಿ ಸೂಲಿಬೆಲೆ ಒಬ್ಬ ದೇಶದ್ರೋಹಿ ಕಣ್ರೀ. ಶ್ರೀರಾಮ ಗಂಡಸಲ್ಲ ಅಂತ ಹೇಳಿಕೆ ಕೊಡುವವರ ನಡುವೆ ಶ್ರೀರಾಮ ಹಿಂದೂಗಳ ಅಂತರಾತ್ಮ ಅಂತ ಹೆಮ್ಮೆಯಿಂದ ಹೇಳಿದ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ಕೋಮುವಾದಿ.  ಭಗವದ್ಗೀತೆ ಸುಡ್ತೀನಿ ಅಂದ ಮೂರ್ಖನಿಗೆ ತನ್ನ ಮಾತಲ್ಲೆ ಅವನ ಸದ್ದಡಗಿಸಿ ಭಗವದ್ಗೀತೆಯ ಮಹತ್ವವನ್ನು ಸಮಾಜದ ಮುಂದೆ ತೆರೆದಿಟ್ಟ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ಕೋಮುವಾದಿ. ತನ್ನನ್ನು ಲಕ್ಷಾಂತರ ಜನ ಹಿಂಬಾಲಿಸುತ್ತರೆ ಅನ್ನುವ ಅರಿವಿಟ್ಟುಕೊಂಡು ತನ್ನ ಭಾಷಣದಲ್ಲಿ ಇವತ್ತಿಗೂ ಸಹ ಒಂದೇ ಒಂದು ಅವ್ಯಾಚ ಶಬ್ಧವನ್ನು ಉಪಯೋಗಿಸದ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ. ಇಪ್ಪತ್ತೈದು ಜನ ಹಿಂಬಾಲಕರನ್ನು ಇಟ್ಕೊಂಡು ದುರಹಂಕರಾದಿಂದ ಮೆರೆಯುವ ನಾಯಕರ ನಡುವೆ ಲಕ್ಷಾಂತರ ಹಿಂಬಾಲಕರು ಇದ್ದರೂ ಸರಳತೆಯ ಮೂರ್ತಿಯಂತಿರುವ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ. ದಿನಪೂರ್ತಿ ಭಾರತ,ಭಾರತ ಅಂತ ಕನವರಿಸುವ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ ಅಲ್ಲದೇ ಮತ್ತೇನೂ? ಹಣ ಮಾಡಿ ಬದುಕುವುದೇ ಜೀವನ ಅನ್ಕೊಂಡಿದ್ದ ಲಕ್ಷಾಂತರ ಯುವಕರ ಎದೆಯಲ್ಲಿ ದೇಶಪ್ರೇಮದ ಜ್ವಾಲೆ ಹಚ್ಚಿದ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ... 

ಕೊನೆಯದಾಗಿ -ಸಿದ್ದಣ್ಣ ರಮಾನಾಥ ರೈ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ತಮ್ಮ ಹೊಲಸು ನಾಲಿಗೆಯಿಂದ ಕೊಳಕು ಮಾತುಗಳನ್ನು ಆಡಿ ಜನರ ಮುಂದೆ ಬೆತ್ತಲಾಗಿದ್ದಾರೆ ಅನ್ನೋದು ಅಕ್ಷರಶಃ ಸತ್ಯ....ಚಕ್ರವರ್ತಿ ಸೂಲಿಬೆಲೆ ಎಂಬ ಅಪ್ಪಟ ಹಿಂದೂ ಮತ್ತು ಶ್ರೇಷ್ಠ ದೇಶಭಕ್ತನ ಬಗ್ಗೆ ಬರೆಯೋದಿಕ್ಕೆ ದಿನಗಳೇ ಸಾಕಾಗುವುದಿಲ್ಲ.... ಈ ಮೇಲಿನ ಲೇಖನದಲ್ಲಿ ಚಕ್ರವರ್ತಿ ಸೂಲಿಬೆಲೆ ಕೆಲವೊಮ್ಮೆ ಏಕವಚನದಲ್ಲಿ ಸಂಬೋಧಿಸಿರುವುದು ಅವರ ಮೇಲಿನ ಪ್ರೀತಿ ಗೌರವದಿಂದ ಮತ್ತು ಸಂದರ್ಭಕ್ಕೆ ತಕ್ಕಂತೆ ಅಂತ ಧೃಡಿಕರಿಸುತ್ತೇನೆ...ಹೇಗೆ ಮತ್ತೊಬ್ಬ ವಿವೇಕಾನಂದರು ಹುಟ್ಟುವುದಕ್ಕೆ ಸಾದ್ಯವಿಲ್ಲವೋ ಹಾಗೆ ಮತ್ತೊಬ್ಬ ಚಕ್ರವರ್ತಿ ಹುಟ್ಟಲು ಸಾಧ್ಯವಿಲ್ಲ ಅಂದರೆ ಅತಿಶಯೋಕ್ತಿಯೇನಲ್ಲ...

From- face book

 

Edited By

Ramesh

Reported By

Ramesh

Comments