ನಗರದ ವಿವಿಧ ಕಡೆ ಅದ್ದೂರಿ 73 ನೇ ಸ್ವಾತಂತ್ರ್ಯ ದಿನಾಚರಣೆ

15 Aug 2019 5:36 PM |
358 Report

ದೊಡ್ಡಬಳ್ಳಾಪುರ ನಗರದ ವಿವಿಧ ಕಡೆಗಳಲ್ಲಿ ಅದ್ದೂರಿಯಾಗಿ ಎಪ್ಪತ್ತಮೂರನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು, ಬೆಳಿಗ್ಗೆ 7-3೦ ಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಳೇ ಬಸ್ ನಿಲ್ದಾಣದಲ್ಲಿರುವ ಡಾ.ರಾಜ್ ಕುಮಾರ್ ಕಲಾಮಂದಿರ ಮುಂಭಾಗದಲ್ಲಿ ವೀರ ಯೋಧ ಶಾಂತಮೂರ್ತಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಹುಲಿಕಲ್ ನಟರಾಜ್, ಭಾಷಣಕಾರರಾಗಿ ಪ್ರೊ.ಕೆ.ಆರ್.ರವಿಕಿರಣ್ ಆಗಮಿಸಿದ್ದರು. ಕಸಾಪ ಅಧ್ಯಕ್ಷೆ ಪ್ರಮೀಳಾ ಮಹದೇವ್, ಬಿ.ಜಿ.ಅಮರನಾಥ್, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳೂ ಸದಸ್ಯರೂ ಆಗಮಿಸಿದ್ದರು.

ಟ್ಯಾಂಕ್ ರಸ್ತೆಯಲ್ಲಿರುವ ನವಚೇತನಾ ಟ್ರಸ್ಟ್ ಪದಾಧಿಕಾರಿಗಳು, ಆಸ್ಪತ್ರೆ ಸರ್ಕಲ್ ಬಳಿ ಇರುವ ತಿಗಳರಪೇಟೆ ಶಾಲೆಯಲ್ಲಿ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಿಸುವುದರ ಮೂಲಕ 73 ನೇ ಸ್ವಾತಂತ್ರ್ಯೋತ್ಸವ ಆಚರಿಸಿದರು, ಟ್ರಸ್ಟ್ ಹಿರಿಯ ಸದಸ್ಯ ಸುಧಾಕರ್ ರಾಷ್ಟ್ರಧ್ವಜ ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡೀದರು,  ಕಾರ್ಯಕ್ರಮದಲ್ಲಿ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ಬೆಂಗಳೂರು ಗ್ರಾ.ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ರಾಷ್ಟ್ರ ಧ್ವಜ ಹಾರಿಸುವುದರ ಮೂಲಕ 73 ನೇ ಸ್ವತಂತ್ರ ದಿನಾಚರಣೆ ಮತ್ತು ರಕ್ಷಾಭಂದನ ಕಾರ್ಯಕ್ರಮ ಆಚರಿಸಿದರು. ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ನಗರ ಅಧ್ಯಕ್ಷ ಮುದ್ದಪ್ಪ, ಯುವ ಮೋರ್ಚಾ ಅಧ್ಯಕ್ಷ ಶಿವಶಂಕರ್ ಹಾಜರಿದ್ದು ಕಾರ್ಯಕ್ರಮ ನೆಡೆಸಿಕೊಟ್ಟರು, ಮಹಿಳಾ ಪದಾಧಿಕಾರಿಗಳಾದ ಪುಷ್ಪ ಶಿವಶಂಕರ್, ವತ್ಸಲಾ, ಉಮಾ ಮಹೇಶ್ವರಿ ಮತ್ತಿತರರು ಹಾಜರಿದ್ದರು.

73 ನೇ ಸ್ವತಂತ್ರ ದಿನಾಚರಣೆ ಅಂಗವಾಗಿ ನಗರದ ಎಂ.ಎ.ಬಿ.ಎಲ್. ಶಾಲೆಯಲ್ಲಿ ಅಭಿಷೇಕ್ ನೇತ್ರಧಾಮ ಮತ್ತು ಡಾ|| ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರದ ವತಿಯಿಂದ ನೇತ್ರದಾನಿಗಳಿಗೆ  ಸನ್ಮಾನ ಏರ್ಪಡಿಸಿದ್ದರು.  ತಮ್ಮ ಕುಟುಂಬದ ನೋವಿನಲ್ಲೂ ಅಂಧರ ಬಾಳಿಗೆ ಬೆಳಕಾಗುವಂತ ಈ ಕಾರ್ಯದಲ್ಲಿ ಸಹಕರಿಸಿದ ನೇತ್ರದಾನಿಗಳ ಕಾರ್ಯವನ್ನು ಶಾಲೆ ಮುಖ್ಯಸ್ಥ ಎಂ.ಬಿ.ಗುರುದೇವ್ ಮೆಚ್ಚಿಕೊಂಡು ಮುಂದಿನ ದಿನಗಳಲ್ಲಿ ಈ ಕಾರ್ಯದಿಂದಾಗಿ ಇನ್ನಷ್ಟು ದಾನಿಗಳು ಹೆಚ್ಚಲಿ ಎಂದು ಅಭಿಪ್ರಾಯಪಟ್ಟರು.

Edited By

Ramesh

Reported By

Ramesh

Comments