ಉತ್ತರ ಕರ್ನಾಟಕದ ನೆರೆ ಹಾವಳಿಗೆ ಸಹಾಯಕ್ಕಾಗಿ ಮನವಿ

08 Aug 2019 8:10 PM |
508 Report

ಕಳೆದ ಒಂದು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕಾರ್ನಾಟಕದ 32 ತಾಲ್ಲೂಕುಗಳ 230 ಕ್ಕೂ ಹೆಚ್ಚು ಹಳ್ಳಿಗಳು ಹಾನಿಗೀಡಾಗಿದೆ, ಬಹುತೇಕ ಕಡೆ ಜಲಪ್ರಳಯ ಉಂಟಾಗಿದ್ದು ಜನರು ನಿರಾಶ್ರಿತರಾಗಿದ್ದಾರೆ, ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ, ಬಹಳಷ್ಟು ಮಂದಿ ವಸತಿ ಕಳೆದುಕೊಂಡು ಆಹಾರವಿಲ್ಲದೆ ಪರದಾಡುತ್ತಿದ್ದಾರೆ, ಸಾವಿರಾರು ಕೋಟಿ ಆಸ್ತಿ ಹಾನಿಗೊಳಗಾಗಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ನಾಡಿನ ಹಲವಾರು ಮಂದಿ ಸಹೃದಯರು ಸ್ವಯಂಪ್ರೇರಿತರಾಗಿ ಉತ್ತರ ಕರ್ನಾಟಕದ ಜನರ ನೆರವಿಗೆ ಧಾವಿಸಿದ್ದು ಅಗತ್ಯವಿರುವ ವಸ್ತುಗಳನ್ನು ಪೂರೈಸುವಲ್ಲಿ ನಿರತರಾಗಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ದೊಡ್ಡಬಳ್ಳಾಪುರದ ಸುಚೇತನ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಮತ್ತು ಶ್ರೀ ಪ್ರಯುಕ್ತಿ ಸೇವಾ ಟ್ರಸ್ಟ್ ನೆರವು ನೀಡಲು ಮುಂದಾಗಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ಸಹೃದಯೀ ನಾಗರೀಕರು ಸಂಕಷ್ಟಕ್ಕೀಡಾದ ನಮ್ಮ ನಾಡಿನ ಜನರಿಗೆ ನೆರವಾಗಲು ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಕೇಂದ್ರಗಳನ್ನು ತೆರೆದಿದ್ದಾರೆ.

#SaveUttarKarnataka ಎಂಬ ಹೆಸರಿನಲ್ಲಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ, ಸೇವಾಕೇಂದ್ರ ಮತ್ತು ನೆರೆ ಹಾವಳಿಗೆ ತುತ್ತಾದ ಗ್ರಾಮಗಳಿಗೆ ಪೂರೈಸಲು ನಿರ್ಧರಿಸಿದ್ದಾರೆ, ಇದಕ್ಕಾಗಿ ನಿಮ್ಮೆಲ್ಲರ ಸಹಾಯ ಅತ್ಯವಶ್ಯಕ.

ಅಗತ್ಯ ವಸ್ತುಗಳು;- ಹೊಸ ಬಟ್ಟೆಗಳು,ಹೊದಿಕೆ, ಕಂಬಳಿ, ಚಾಪೆಗಳು,ಅಕ್ಕಿ, ಬೇಳೆ, ದವಸ ಧಾನ್ಯಗಳು,ಬಿಸ್ಕತ್ ಮತ್ತು ಇತರ ಸಂರಕ್ಷಿತ ಒಣ ಆಹಾರಗಳು.ಚಪ್ಪಲಿಗಳು,ರೈನ್ ಕೋಟ್ ಮತ್ತು ಸ್ವೆಟ್ಟರ್,ಜನರಲ್ ಮೆಡಿಸಿನ್ಸ್,ಟೂತ್ ಬ್ರಶ್, ಪೇಸ್ಟ್, ಸೋಪ್,ಟೆಟ್ರಾ ಪ್ಯಾಕ್ ಹಾಲು ಮತ್ತು ಜ್ಯೂಸ್,ಟಾರ್ಪಾಲಿನ್. ದಯಮಾಡಿ ನಮ್ಮೊಂದಿಗೆ ಕೈಜೋಡಿಸಿ ನೆರವು ನೀಡಿ. 

ಸುಚೇತನ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಆಗಸ್ಟ್ 12 ನೇ ತಾರೀಖಿನವರೆಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಿದೆ, ವಸ್ತುಗಳನ್ನು ತಲುಪಿಸಬೇಕಾದ ವಿಳಾಸ:- ಅರಾಮೆಕ್ಸ್ ಆಫೀಸ್, ರೈಲ್ವೈ ಸ್ಟೇಷನ್, ದೊಡ್ಡಬಳ್ಳಾಪುರ. ಮಾಹಿತಿಗೆ- ಅನಿಲ್ : 8971434747 ಭರತ್ : 9900916589

ಶ್ರೀ ಪ್ರಯುಕ್ತಿ ಸೇವಾ ಟ್ರಸ್ಟ್ ಆಗಸ್ಟ್ 16 ನೇ ತಾರೀಖಿನವರೆಗೆ ವಸ್ತುಗಳನ್ನು ಸಂಗ್ರಹಿಸಲಿದೆ, ತಲುಪಿಸಬೇಕಾದ ವಿಳಾಸ:- ಶ್ರೀ ವಿಜಯ ಡೆಂಟಲ್ ಕ್ಲೀನಿಕ್, ಕೊಂಗಾಡಿಯಪ್ಪ ಮುಖ್ಯ ರಸ್ತೆ, ದೊಡ್ಡಬಳ್ಳಾಪುರ. ಮಾಹಿತಿಗೆ:- +91 7892385280  +91 9964600200

Edited By

Ramesh

Reported By

Ramesh

Comments