ಆರ್ಟಿಕಲ್ 35A ಹಾಗೂ 370 ರದ್ದು ಬಾಜಪ ಕಾರ್ಯಕರ್ತರ ಸಂಭಮಾಚರಣೆ

06 Aug 2019 7:59 AM |
472 Report

ಇಂದು ಸಂಜೆ ನಗರದ ಹಳೇ ಬಸ್ ನಿಲ್ದಾಣದಲ್ಲಿ ಬಾಜಪ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಆರ್ಟಿಕಲ್ 35A ಹಾಗೂ 370 ರದ್ದು ಮಾಡಿದ್ದಕ್ಕಾಗಿ ಪಟಾಕಿ ಸಿಡಿಸಿ ನಾಗರೀಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನೆಡೆಸಿದರು. ರಾಷ್ಟ್ರದ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಾಡಿದ ಐತಿಹಾಸಿಕ ಭಾಷಣ ರಾಷ್ಟ್ರದ ಜನರ ಕುತೂಹಲಕ್ಕೆ ತೆರೆ ಬೀಳುವಂತೆ ಮಾಡಿದೆ. ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕಾಶ್ಮೀರದ ವಿಚಾರದಲ್ಲಿ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ. ಇವರಿಗೆ ದೇಶ ಮೊದಲ ಪ್ರಾಮುಖ್ಯತೆ, ತದನಂತರ ಉಳಿದೆಲ್ಲವೂ.... ನಿಜವಾದ ಸ್ವಾತಂತ್ರ್ಯ ನಮ್ಮ ದೇಶಕ್ಕೆ ಇಂದು ಸಿಕ್ಕಿದೆ, ಆರ್ಟಿಕಲ್ 35A ಹಾಗೂ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ ರದ್ದುಪಡಿಸುವಂತಹ ಕಠಿಣ ನಿರ್ಧಾರವನ್ನು, ಕಾಶ್ಮೀರ ವಿಷಯದಲ್ಲಿ ತೆಗೆದುಕೊಂಡ, ನೆಚ್ಚಿನ ಮೋದಿ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ನಮನಗಳು ಎಂದು ಬೆಂ.ಗ್ರಾ.ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹೆಚ್.ಎಸ್.ಶಿವಶಂಕರ್ ಹೇಳಿದರು.

ರಾಜ್ಯಸಭೆಯಲ್ಲಿ ವಿಪಕ್ಷಗಳ ತೀವ್ರ ಗದ್ದಲದ ನಡುವೆ ಕಾಶ್ಮೀರಕ್ಕೆ ನೀಡಿದ್ದಂತಹ ವಿಶೇಷ ಸ್ಥಾನಮಾನ, ವಿಶೇಷ ಮೀಸಲಾತಿಯನ್ನು ಕೂಡ ರದ್ದು ಮಾಡುವುದಾಗಿ ಹೇಳಿದ್ದಾರೆ.  ಜೊತೆಗೆ ಕಾಶ್ಮೀರವನ್ನು ಎರಡು ಭಾಗವಾಗಿ ವಿಂಗಡಿಸುವುದಾಗಿ ಘೋಷಣೆ ಮಾಡಿ, ರಾಷ್ಟ್ರಪತಿಗಳ ಅಂಕಿತದೊಂದಿಗೆ ಕಾಶ್ಮೀರದ ವಿಶೇಷ ಸ್ಥಾನಮಾನ ಹಾಗೂ ಅಧಿಕಾರ ಎರಡನ್ನೂ ರದ್ದು ಮಾಡಿದ್ದಾರೆ. ಇಂತಹ ಕಠಿಣ ನಿರ್ಧಾರವನ್ನು ಕಾಶ್ಮೀರ ವಿಷಯದಲ್ಲಿ ತೆಗೆದುಕೊಂಡ ನೆಚ್ಚಿನ ಮೋದಿ ಸರ್ಕಾರಕ್ಕೆ ಅಭಿನಂದನೆಗಳು ಎಂದು ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಬಾಜಪ ನಗರ ಅಧ್ಯಕ್ಷ ಕೆ.ಬಿ.ಮುದ್ದಪ್ಪ ಹೇಳಿದರು.

ಆರ್ಟಿಕಲ್ 35A ಹಾಗೂ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ ರದ್ದುಮಾಡುವ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಭಾರತೀಯ ಜನತಾ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿತ್ತು. ಇದೀಗ ಐತಿಹಾಸಿಕ ನಿರ್ಧಾರ ಅಧಿಕೃತವಾಗಿ ಪ್ರಕಟಣೆಗೊಂಡಿದೆ. ಮಸೂದೆ ಸಂಸತ್ತಿನಲ್ಲಿ ಪಾಸ್ ಆಗಬೇಕಿದೆ, ಆಗುತ್ತದೆ ಕೂಡಾ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದನ್ನ ಜಗತ್ತಿನೆದುರು ಮೋದಿ ಸರ್ಕಾರ ಸಾರಿ ಹೇಳಿದೆ ಎಂದು ರಾಮಕೃಷ್ಣ ತಿಳಿಸಿದರು.

ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಎಂ.ಕೆ.ವತ್ಸಲಾ ಮಾತನಾಡಿ ಕೊನೆಗೂ ಮೋದಿ ಸರ್ಕಾರ ಐತಿಹಾಸಿಕ ನಿರ್ಣಯವೊಂದರ ಮೂಲಕ ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಜಮ್ಮು ಕಾಶ್ಮೀರ ಹಾಗೂ ಲಡಾಕ್​ ಇನ್ನು ಮುಂದೇ ಕೇಂದ್ರಾಡಳಿತ ಪ್ರದೇಶವಾಗಲಿದೆ. 1954 ರಲ್ಲಿ ಅಂದಿನ ಹಿಂದೂ ದ್ವೇಷಿ ಪ್ರಧಾನಮಂತ್ರಿ ಪಂಡಿತ್ ಜವಾಹರ್​ ಲಾಲ್ ನೆಹರೂ ಸೂಚನೆಯಂತೆ ರಾಷ್ಟ್ರಪತಿಗಳ ವಿಶೇಷ ಆದೇಶದ ಮೂಲಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ ತೀವ್ರ ವಿರೋಧದ ನಡುವೆಯೂ ಇದನ್ನು ಜಾರಿಗೆ ತರಲಾಯಿತು.  ಅಂದು ಇದನ್ನು ವಿರೋಧಿಸಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ಇಂದು ಇದನ್ನು ಕಸದ ಬುಟ್ಟಿಗೆ ಎಸೆದು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸಲ್ಲಿಸಿದ್ದಾರೆ ಎಂದು ಹೇಳಿದರು.

ಆರ್ಟಿಕಲ್ 370 ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುತ್ತ ಬಂದಿದ್ದು, ಇದರ ಅನ್ವಯ ಜಮ್ಮುಕಾಶ್ಮೀರ ಸ್ವಂತ ಸಂವಿಧಾನ, ಸ್ವಂತ ಧ್ವಜ ಹೊಂದುವ ಅವಕಾಶ ಕಲ್ಪಿಸಿತ್ತು.  ಅಲ್ಲದೇ ರಾಷ್ಟ್ರೀಯ  ಭದ್ರತೆಗೆ ಸಂಬಂಧಿಸಿದ ವಿಷಯ ಹೊರತುಪಡಿಸಿ ಇನ್ಯಾವುದೇ ರೀತಿಯ ಕಾನೂನಾತ್ಮಕ ತೀರ್ಮಾನಗಳನ್ನು ಸ್ವತಂತ್ರವಾಗಿ ನಿರ್ಧರಿಸುವ ಹಕ್ಕು ಅಧಿಕಾರ ಹೊಂದಿತ್ತು.  ಕೇಂದ್ರ ಸರ್ಕಾರ ಈ ಎಲ್ಲ ವಿಶೇಷಾಧಿಕಾರಗಳನ್ನು ಮೊಟಕುಗೊಳಿಸಿದ್ದು, ಇನ್ಮುಂದೆ ಜಮ್ಮು ಕಾಶ್ಮೀರ ಕೇಂದ್ರದ ಅಧೀನಕ್ಕೆ ಒಳಪಡುವ ವಿಧಾಸಸಭೆಯನ್ನು ಹೊಂದಲಿದ್ದು, ಲಡಾಕ್ ಸಂಪೂರ್ಣ ಕೇಂದ್ರಾಢಳಿತ  ಪ್ರದೇಶವಾಗಲಿದೆ. ಒಟ್ಟಿನಲ್ಲಿ ಮೋದಿ ಸರ್ಕಾರ ಕಾಶ್ಮೀರದ ಮೂಲನಿವಾಸಿಗಳಿಗೆ ಸಖತ್ ಶಾಕ್ ನೀಡಿದೆ ಎಂದು ಗೋಪಿ ತಿಳಿಸಿದರು.

ಸಂಭ್ರಮಾಚರಣೆಯಲ್ಲಿ ಎಲ್ಲಾ ಪದಾಧಿಕಾರಿಗಳೂ, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

 

Edited By

Ramesh

Reported By

Ramesh

Comments