ಮನೆ ಮನೆಗೂ ಮಣ್ಣಿನ ಗಣಪ.....ಪರಿಸರ ಸ್ನೇಹಿ ಗಣೇಶ ತಯಾರಿ ಕಾರ್ಯಾಗಾರ

04 Aug 2019 8:10 AM |
1205 Report

ನಮ್ಮೆಲ್ಲರ ಪರಿಸರ ಪ್ರೇಮ, ಜಗತ್ತಿಗೆ ಕ್ಷೇಮ.....ರಾಸಾಯನಿಕ ಬಣ್ಣದ ಗಣೇಶ ಪರಿಸರ ನಷ್ಟ! ಸಾಧಾರಣ ಮಣ್ಣಿನ ಗಣೇಶ ಸರ್ವ ಶ್ರೇಷ್ಠ!! ಪರಿಸರ-ಸ್ನೇಹಿ ಗಣೇಶ ಎಲ್ಲರಿಗೂ ಇಷ್ಟ!!! ಮನೆ ಮನೆಗೂ ಮಣ್ಣಿನ ಗಣಪ ಎಂಬ ಅಭಿಯಾನದ ಅಡಿ ಮಣ್ಣಿನ ಗಣೇಶನ ಜಾಗೃತಿಯ ಕುರಿತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲು ನಿಮ್ಮ ಸಹಾಯದ ಅವಶ್ಯಕತೆ ಇದೆ. ಅಭಿಯಾನಕ್ಕೆ ಕೈ ಜೋಡಿಸಲಿಚ್ಛಿಸುವವರು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ನಿಮ್ಮ ಸುತ್ತಮುತ್ತಿನ ಜನರಿಗೆ ಅರಿವು ಮೂಡಿಸಬೇಕಾಗಿ ವಿನಂತಿ.

ಇತ್ತೀಚಿನ ವರ್ಷಗಳಲ್ಲಿ ಗಣೇಶ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಸಿಗುವ ವಿಷಪೂರಿತ ರಾಸಾಯನಿಕ ಬಣ್ಣಗಳಿಂದ ಕೂಡಿದ ಗಣಪನ ಮೂರ್ತಿಗಳನ್ನು ತಂದು ಪೂಜಿಸುತ್ತಿರುವುದು ಸರಿಯಷ್ಟೇ, ಇದರಿಂದ ಪರಿಸರಕ್ಕಾಗುವ ಹಾನಿಯನ್ನು ತಪ್ಪಿಸುವ ಸಲುವಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ನೀವೇ ನಿಮ್ಮ ಕೈಯ್ಯಾರೆ ನಿರ್ಮಿಸಿ ಸಾಧ್ಯವಾದಷ್ಟೂ ಪ್ರತೀ ಮನೆಯಲ್ಲೂ ಮಣ್ಣಿನ ಗಣಪನನ್ನು ಮನೆಯಲ್ಲಿ ಪೂಜಿಸಲು ಅನುವಾಗುವಂತೆ ಪರಿಸರ ಸ್ನೇಹಿ ಗಣಪನನ್ನು ತಯಾರಿಸುವ ಕಾರ್ಯಾಗಾರವನ್ನು ದಿನಾಂಕ 18-8-2019 ಭಾನುವಾರದಂದು ಬೆಳಿಗ್ಗೆ 9 ರಿಂದ ಮಧ್ಯಾನ್ಹ ಮೂರರವರೆಗೆ ಸುಚೇತನಾ ಎಜುಕೇಷನಲ್ ಟ್ರಸ್ಟ್ ಮತ್ತು ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ದೊಡ್ಡಬಳ್ಳಾಪುರ ನಗರದ ಹೊರ ವಲಯದಲ್ಲಿರುವ ಅನಿ ಬೆಸೆಂಟ್ ಪಾರ್ಕ್ ನಲ್ಲಿ [ಸ್ಕೌಟ್ ಕ್ಯಾಂಪ್] ಆಯೋಜಿಸಲಾಗುತ್ತಿದೆ, ರೂ 1೦೦/- ಪಾವತಿಸಿ ಈ ಕಾರ್ಯಕ್ಕೆ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಬೇಕು, ಗಣಪನ ಮೂರ್ತಿ ಮಾಡುವ ಮಣ್ಣು ಹಾಗೂ ಮಧ್ಯಾನ್ಹದ ಊಟದ ವ್ಯವಸ್ಥೆಯನ್ನೂ ಆಯೋಜಕರೇ ಒದಗಿಸುತ್ತಾರೆ. ಕಾರ್ಯಾಗಾರದಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:-

ಭರತ್ : 9900916589

ಮಂಜುನಾಥ್ ನಾಗ್ 9060759008

ಸುನಿಲ್ : 8971295960

Edited By

Ramesh

Reported By

Ramesh

Comments