ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷರಾಗಿ ಹೊನ್ನಾಘಟ್ಟ ಸುರೇಶ್ ಆಯ್ಕೆ

15 Jul 2019 9:59 AM |
994 Report

ದಿನಾಂಕ 14-7-2019 ರಂದು ನಗರದ ಅರ್ಕಾವತಿ ಕ್ಷೇತ್ರದಲ್ಲಿ 2019-21 ನೇ ಸಾಲಿಗೆ ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಹೆಚ್.ಎಸ್. ಸುರೇಶ್ ಆಯ್ಕೆಯಾಗಿದ್ದಾರೆ, ತೀವ್ರ ಸ್ಪರ್ಧೆಯಿಂದ ಕೂಡಿದ್ದ ಈ ಚುನಾವಣೆಯಲ್ಲಿ ಅಧ್ಯಕ್ಷ ಆಕಾಂಕ್ಷಿಗಳಾಗಿ ಎ.ಅಶ್ವಥ್, ಅಂಚರಹಳ್ಳಿ ಮೋಹನ್ ಮತ್ತು ಹೊನ್ನಾಘಟ್ಟ ಸುರೇಶ್ ಸ್ಪರ್ಧಿಸಿದ್ದರು, ಚಲಾವಣೆಯಾಗಿದ್ದ ಒಟ್ಟು 227 ಮತಗಳಲ್ಲಿ ಸುರೇಶ್ 94 ಮತಗಳಿಸಿ ವಿಜಯದ ನಗೆ ಬೀರಿದರು, ಮೋಹನ್ 73, ಅಶ್ವಥ್ 60 ಮತಗಳನ್ನು ಗಳಿಸಿದರು. ನಿರ್ಗಮಿತ ಅಧ್ಯಕ್ಷ ಬೀಡಿಗೆರೆ ರವಿ ಅಧ್ಯಕ್ಷತೆಯಲ್ಲಿ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಹಾಗೂ 2019-21 ನೇ ಸಾಲಿನ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆಗೆ ಸಭೆ ಕರೆಯಲಾಗಿತ್ತು.

2019-21 ನೇ ಸಾಲಿಗೆ ಆಯ್ಕೆಯಾದ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು.

ಗೌರವ ಅಧ್ಯಕ್ಷ- ಬಸವರಾಜಯ್ಯ, ಚೈತ್ರ ಡಿಜಿಟಲ್ ಸ್ಟುಡಿಯೋ

ಅಧ್ಯಕ್ಷ- ಹೆಚ್.ಆರ್.ಸುರೇಶ್, ಸಂದೀಪ್ ಡಿಜಿಟಲ್ ಸ್ಟುಡಿಯೋ

ಉಪಾಧ್ಯಕ್ಷರು-

ಬಿ.ಎನ್.ಉಮಾಶಂಕರ್, ಅಕ್ಷತಾ ಫೋಟೋಸ್

ಬಿ.ಎಸ್. ನಿರಂಜನ್, ಭಾಸ್ಕರ್ ಡಿಜಿಟಲ್ ಸ್ಟುಡಿಯೋ

ಪ್ರಧಾನ ಕಾರ್ಯದರ್ಶಿ- ಜಿ.ಅರುಣ್ ಕುಮಾರ್, ಶ್ರೀ ಮಾರುತಿ ಡಿಜಿಟಲ್ ಸ್ಟುಡಿಯೋ

ಸಹ ಕಾರ್ಯದರ್ಶಿ 

ಶಿವಕುಮಾರ್, ಶಿವ ಸ್ಟುಡಿಯೋ

ಪಿ.ರಾಜು, ಸುಬ್ರಮಣ್ಯ ಡಿಜಿಟಲ್ ಸ್ಟುಡಿಯೋ

ಖಜಾಂಚಿ- ಸಿ.ಎಸ್.ಗುರುಶಂಕರ್, ಮಹೇಶ್ ಡಿಜಿಟಲ್ ಸ್ಟುಡಿಯೋ

ಸಂಘಟನಾ ಕಾರ್ಯದರ್ಶಿ-

ಕೆ.ಸಿ.ಲೋಕೇಶ್, ಕೆ.ಸಿ.ಎಲ್. ಸ್ಟುಡಿಯೋ

ಆನಂದ, ಆನಂದ್ ಡಿಜಿಟಲ್ ಸ್ಟುಡಿಯೋ

ಕಾರ್ಯನಿರ್ವಹಣಾಧಿಕಾರಿ- ಎಸ್.ರವಿಕುಮಾರ್, ಚೇತನಾ ಡಿಜಿಟಲ್ ಸ್ಟುಡಿಯೋ

ನಿರ್ದೇಶಕರು - ಎ.ಎಸ್.ರಾಮು, ಮಯೂರಿ ಫೋಟೋಸ್

ನಾರಾಯಣ್, ವಿಷ್ಣು ಡಿಜಿಟಲ್ ಸ್ಟುಡಿಯೋ

ಗೋಪಾಲಕೃಷ್ಣಾಚಾರಿ, ಎಸ್.ಎಲ್.ಎನ್.ಸ್ಟೂಡಿಯೋ

ರಘು, ಪೂರ್ಣಿಮಾ ಡಿಜಿಟಲ್ ಸ್ಟುಡಿಯೋ, ಗುಂಡುಮಗೆರೆ

ಜಿ.ರಾಮಲಿಂಗಮೂರ್ತಿ, ಚೈತ್ರ ಡಿಜಿಟಲ್ ಸ್ಟುಡಿಯೋ, ಮದುರೆ

ಮಂಜುನಾಥ್, ಯಶೋಧ ಡಿಜಿಟಲ್ ಸ್ಟುಡಿಯೋ, ದೊಡ್ಡಬೆಳವಂಗಲ

ಮುರಳಿ[ಬಾಬು] ಮುರಳಿ ಫೋಟೋಸ್, ಬೊಮ್ಮನಹಳ್ಳಿ

ಮುರಳಿ, ನೇತ್ರ ಫೋಟೋಸ್, ಶ್ರವಣೂರು

ಶಿವಪ್ರಸಾದ್, ಜೈರಾಜ್ ಡಿಜಿಟಲ್ ಸ್ಟುಡಿಯೋ,

ಸುನಿಲ್, ಗೌರಿ ಡಿಜಿಟಲ್ ಸ್ಟುಡಿಯೋ, ಕಂಟನಕುಂಟೆ

ಕೃಷ್ಣ, ಸ್ಪೂರ್ತಿ ಡಿಜಿಟಲ್ ಸ್ಟುಡಿಯೋ, ಬೀಡಿಕೆರೆ

ಮನು, ಮನು ಡಿಜಿಟಲ್ ಸ್ಟುಡಿಯೋ,

ಜೆ.ಜಗ್ಗೇಶ್, ಮುತ್ತು ಡಿಜಿಟಲ್ ಸ್ಟುಡಿಯೋ, ಅರಳುಮಲ್ಲಿಗೆ

ರಾಮು, ರಾಮು ಡಿಜಿಟಲ್ ಸ್ಟುಡಿಯೋ, ಸಾಸಲು

ಸಲಹೆಗಾರರು- ಹೆಚ್.ಎಸ್.ನಾಗೇಶ್, ಕೆ.ಸಂಪತ್ ಕುಮಾರ್

ಕ್ರೀಡಾ ನಿರ್ವಹಣೆ- ಜಿ.ರಾಜು, ಶ್ರೀ ಮಂಜುನಾಥ ಹೈಟೆಕ್ ಸ್ಟುಡಿಯೋ, ಬಾಶೆಟ್ಟಿಹಳ್ಳಿ

ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಮಾಜಿ ಅಧ್ಯಕ್ಷರುಗಳಾದ ಪಿಳ್ಳವೆಂಕಟಪ್ಪ, ವಿರೂಪಾಕ್ಷ, ಶಿವರಾಂ, ವಿ.ಎಸ್.ರವಿಕುಮಾರ್, ಸಂಪತ್ ಕುಮಾರ್, ನಾಗೇಶ್, ಜಿ.ರಾಜು, ಬೀಡಿಕೆರೆ ರವಿ ಮತ್ತಿತರರು ಅಭಿನಂದಿಸಿದ್ದಾರೆ.

                          

Edited By

Ramesh

Reported By

Ramesh

Comments