ಜವಾಹರ್ ನವೋದಯ ವಿದ್ಯಾಶಾಲೆಯ 2020-21 ನೇ ಸಾಲಿನ ಆರನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿಗಳ ಆಹ್ವಾನ

12 Jul 2019 8:51 AM |
2859 Report

ಜವಾಹರ್ ನವೋದಯ ವಿದ್ಯಾಶಾಲೆ, ದೊಡ್ಡಬಳ್ಳಾಪುರ. 2020-21 ನೇ ಸಾಲಿನ ಆರನೇ ತರಗತಿಯ ಪ್ರವೇಶ ಪರೀಕ್ಷೆಗೆ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಪ್ರವೇಶ ಪರೀಕ್ಷೆಯು 2020 ರ ಏಪ್ರಿಲ್ ತಿಂಗಳಲ್ಲಿ ನೆಡೆಯಲಿದೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ನೇ ಸೆಪ್ಟಂಬರ್ 2019. ಅರ್ಜಿಸಲ್ಲಿಸಲು ವ್ಯಾಸಂಗದ ದೃಡೀಕರಣ ಪತ್ರ, ವಿದ್ಯಾರ್ಥಿಯ ಪಾಸ್ ಪೋರ್ಟ್ ಭಾವಚಿತ್ರ ಹಾಗೂ ತಂದೆ / ತಾಯಿ ಮತ್ತು ಮಗುವಿನ ಸಹಿ. ಈ ದಾಖಲಾತಿಯೊಂದಿಗೆ ಅರ್ಜಿಗಳ ವಿತರಣೆ ಮತ್ತು ಸಲ್ಲಿಸಲು ದೊಡ್ಡಬಳ್ಳಾಪುರದ ಸಿನೆಮಾ ರಸ್ತೆಯಲ್ಲಿರುವ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಕಾರ್ಯಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆಸಕ್ತ ಪೋಷಕರು ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ರಿಂದ 7 ಘಂಟೆಯವರೆಗೆ ಕಾರ್ಯಾಲಯದಲ್ಲಿ ಸಂಪರ್ಕಿಸುವುದು.

ಹೆಚ್ಚಿನ ಮಾಹಿತಿಗೆ ಕರೆ ಮಾಡಿ, ಟ್ರಸ್ಟ್ ಕಾರ್ಯದರ್ಶಿ ಆರೂಡಿ ರಮೇಶ್, ಮೊಬೈಲ್ ನಂ. 9448242282

Edited By

Ramesh

Reported By

Ramesh

Comments