ದೊಡ್ಡಬಳ್ಳಾಪುರದಲ್ಲಿ ಇನ್ನೂ ಐವರು ಉಗ್ರರು ಅಡಗಿರುವ ಶಂಕೆ?

26 Jun 2019 7:29 AM |
77 Report

ಬಾಂಗ್ಲಾದೇಶದ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಹಬೀಬುರ್ ರೆಹಮಾನ್ ಶೇಕ್ ಅಲಿಯಾಸ್ ಶೇಖ್ ಬಂಧಿತ. ಈತ ಕಳೆದ ವರ್ಷ ರಾಮನಗರದಲ್ಲಿ ಬಂಧಿತನಾಗಿದ್ದ ಜೆಎಂಬಿ ಸಂಘಟನೆಯ ಕೌಸರ್ ನ ಹತ್ತಿರದ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ. 2014ರಲ್ಲಿ ಪಶ್ಚಿಮ ಬಂಗಾಲದ ಬುರ್ದ್ವಾನ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಹಬೀಬುರ್ ರೆಹಮಾನ್, ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ. ಕಳೆದ ಕೆಲವು ವರ್ಷಗಳಿಂದ ರಾಜ್ಯ ದಲ್ಲಿದ್ದ ಹಬೀಬುರ್ ದೊಡ್ಡಬಳ್ಳಾಪುರದ ಚಿಕ್ಕಪೇಟೆಯ ಮಸೀದಿಯಲ್ಲಿ ಆಶ್ರಯ ಪಡೆದುಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೂ ಐವರು ಉಗ್ರರು ದೊಡ್ಡಬಳ್ಳಾಪುರದಲ್ಲಿ ಅಡಗಿರುವ ಶಂಕೆಯನ್ನು ಎನ್ ಐ ಎ ಅಧಿಕಾರಿಗಳು ವ್ಯಕ್ತಪಡಿಸಿದ್ದು, ಉಳಿದವರಿಗಾಗಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.

ದೊಡ್ಡಬಳ್ಳಾಪುರದ  ಚಿಕ್ಕಪೇಟೆಯ ಮಸೀದಿಯಲ್ಲಿ ಆಶ್ರಯ ಪಡೆದಿದ್ದ ಜೆಎಂಎ ಉಗ್ರ ಪಾನೀಪೂರಿ ವ್ಯಾಪಾರಿ ಸೋಗಿನಲ್ಲಿ ಜೀವನ ನಡೆಸಲು ಪ್ಲಾನ್ ಮಾಡುತ್ತಿದ್ದ ಎಂಬುದು ಬೆಳಕಿಗೆ  ಬಂದಿದೆ. ಚಿಕ್ಕಪೇಟೆಯಲ್ಲಿ ಮುಸ್ಲಿಮರು ಹೆಚ್ಚಾಗಿರುವ ಜಾಗದಲ್ಲಿ ಪಾನಿಪೂರಿ ಅಂಗಡಿ ಇಟ್ಟುಕೊಳ್ಳಲು ಮುಂದಾಗಿದ್ದು ಇದಕ್ಕಾಗಿ ಜಾಗದ ಹುಡುಕಾಟ ನೆಡೆಸುತ್ತಿದ್ದ ಎನ್ನಲಾಗಿದೆ.  ಕೆ.ಆರ್.ಪುರದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಹಬೀಬುರ್ ದೊಡ್ಡಬಳ್ಳಾಪುರಕ್ಕೆ ಬಂದು ಮಸೀದಿಯಲ್ಲಿ ಆಶ್ರಯ ಪಡೆದಿದ್ದ, ಇಲ್ಲಿನ ಅಸ್ಸಾಂ ಮೂಲದ ಅನ್ವರ್ ಹುಸೇನ್ ಜೊತೆ ಸ್ನೇಹ ಬೆಳೆಸಿ ಇತ್ತೀಚೆಗೆ ದರ್ಗಾ ಜೋಗಳ್ಳಿಯಲ್ಲಿ ಬಾಡಿಗೆ ಮನೆ ನೋಡಿ ಮುಂಗಡ ಹಣ ಪಾವತಿದಿದ್ದ.  ಒಂದೂವರೆ ವರ್ಷದ ಹಿಂದೆಯೇ  ದೊಡ್ಡಬಳ್ಳಾಪುರಕ್ಕೆ ಬಂದು ಮಸೀದಿಯಲ್ಲಿ ಮೌಜಾನ್ ಆಗಿ ಮಾಸಿಕ ಆರುಸಾವಿರ ಸಂಬಳ ಪಡೆಯುತ್ತಿದ್ದ.  ರಾಯಚೂರಿನ ಯುವತಿಯನ್ನು ವಿವಾಹವಾಗಿದ್ದು ಕೆ.ಆರ್.ಪುರದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಿದ್ದ, ದೊಡ್ಡಬಳ್ಳಾಪುರಕ್ಕೆ ಒಬ್ಬನೇ ಬಂದಿದ್ದು ಮನೆ ಬಾಡಿಗೆ ಪಡೆದ ಬಳಿಕ ಕುಟುಂಬವನ್ನು ಕರೆತರಲು ಚಿಂತಿಸಿದ್ದ, ಉರ್ದು, ಅರೆಬಿಕ್, ಅಸ್ಸಾಮಿ ನಿರರ್ಗಳವಾಗಿ ಮಾತನಾಡುತ್ತಿದ್ದ ಎನ್ನಲಾಗಿದೆ.  

ಬುಧವಾರ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದು ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯಲಾಗುತ್ತದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಹಬೀಬುರ್‌ಗೆ ಆಶ್ರಯ ನೀಡಿದ್ದ ಮೌಲ್ವಿ ಅನ್ವರ್‌ ಹುಸೇನ್‌ನನ್ನು ಸ್ಥಳೀಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೌಲ್ವಿ ಹಾಗೂ ಹಬೀಬುರ್‌ ಸಂಪರ್ಕ, ಇನ್ನಿತರ ವಿಚಾರಗಳ ಬಗ್ಗೆ ತನಿಖೆ ನೆಡೆಸಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. 

Edited By

Ramesh

Reported By

Ramesh

Comments