ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಹಳೆಯ ವಿದ್ಯಾರ್ಥಿಗಳಿಂದ







ಶ್ರೀ ಕೊಂಗಾಡಿಯಪ್ಪ ಪದವಿ ಕಾಲೇಜಿನ 1991-92 ನೇ ಬ್ಯಾಚ್ ಹಾಗೂ 1996-97 ನೇ ಬ್ಯಾಚ್ ವಿದ್ಯಾರ್ಥಿಗಳಾದ ಬಾಸ್ಕರ್, ಸುಧಾಕರ್, ಮನೋಜ್, ಅಶೋಕ, ನಾಗರಾಜ್, ರಾಜೇಶ್ವರಿ,ಮಮತ ಮತ್ತಿತರರು ಸೇರಿ ತಮ್ಮ ಗುರುಗಳಾದ ಕೊಂಗಾಡಿಯಪ್ಪಾ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೋಫೆಸರ್ ಬಿ.ಎನ್. ಶಶಿಧರ್ ರವರ 61 ನೇ ವರ್ಷದ ಹುಟ್ಟು ಹಬ್ಬದ ಸಲುವಾಗಿ ಇಂದು ದೊಡ್ದಬಳ್ಳಾಪುರದ ಮಾರುತಿ ನಗರದಲ್ಲಿರುವ ಸ್ವಾಮಿ ವಿವೇಕಾನಂದ ಕನ್ನಡ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಪೆನ್ಸಿಲ್ ವಿತರಣೆ ಹಾಗೂ ಮಧ್ಯಾನ್ಹದ ಊಟವನ್ನು ಎಲ್ಲಾ ಮಕ್ಕಳಿಗೂ ಏರ್ಪಡಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಉಪಾಧ್ಯಾಯ ಹುಲಿಕಲ್ ನಟರಾಜ್ ವಹಿಸಿದ್ದರು, ಸೀಬೆಯ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಭಾಸ್ಕರ್ ಮತ್ತು ಗೆಳೆಯರು ಪ್ರಾರಂಭಿಸಿದರು, ನಂತರ ಸುಧಾಕರ್ ಮಾತನಾಡಿ ಇಂದು ಊರಿನಲ್ಲಿ ನಮ್ಮದೇ ಆದಂತಹ ಕಾರ್ಯಚಟುವಟಿಕೆಗಳಿಂದ ಗುರುತಿಸುವಂತಾಗಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಗುರುಗಳಾದ ಶಶಿಧರ್, ಅವರ ಮಾರ್ಗದರ್ಶನವೇ ನಾವೆಲ್ಲ ಈ ಮಟ್ಟಕ್ಕೆ ಬೆಳೆದಿದ್ದೇವೆ, ಅವರನ್ನು ನೆನಪಿಸಿಕೊಳ್ಳಲು ನಮಗೆ ಇದೊಂದು ಅವಕಾಶ, ನೀವುಗಳೂ ಕೂಡ ಗುರುಗಳ, ತಂದೆ ತಾಯಿಗಳ ಮಾತು ಕೇಳಿ ಒಳ್ಳೆಯ ಪ್ರಜೆಗಳಾಗಿ ಬಾಳಿ ಎಂದು ಮಕ್ಕಳಿಗೆ ಹೇಳಿದರು. ಮುಖ್ಯ ಉಪಾಧ್ಯಾಯ ಹುಲಿಕಲ್ ನಟರಾಜ್ ಭಾಸ್ಕರ್ ತಂದದವರ ಕಾರ್ಯವನ್ನು ಮೆಚ್ಚಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಾಯ ಮಾಡುವ ಶಕ್ತಿ ದೊರೆಯಲಿ ಎಂದು ಹಾರೈಸಿದರು. ಶಾಲೆಯ ಸಹ ಶಿಕ್ಷಕಿ ಕಾತ್ಯಾಯಿನಿ ಸೇರಿದಂತೆ ಎಲ್ಲಾ ಶಿಕ್ಷಕರು ಹಾಜರಿದ್ದರು.
Comments