ನವೋದಯ ವಿದ್ಯಾಶಾಲೆ ಫಲಿತಾಂಶ ಪ್ರಕಟ

17 Jun 2019 10:29 AM |
356 Report

2019-20 ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ನವೋದಯ ವಿದ್ಯಾಶಾಲೆಗೆ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳಿಂದ ತಲಾ ಇಪ್ಪತ್ತು ಮಂದಿಯಂತೆ ಒಟ್ಟು ಎಂಬತ್ತು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ, ದೊಡ್ಡಬಳ್ಳಾಪುರ ನಗರದಲ್ಲಿರುವ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಕಳೆದ 7 ವರ್ಷಗಳಿಂದ ನವೋದಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ತರಬೇತಿಯನ್ನು ನುರಿತ ಅಧ್ಯಾಪಕರಿಂದ ನೀಡುತ್ತಾ ಬಂದಿದೆ, ಈ ವರ್ಷ ತರಬೇತಿ ಪಡೆದಿದ್ದ ಒಟ್ಟು 72 ಮಕ್ಕಳಲ್ಲಿ ಹೆಚ್.ಬಿ.ರಮಣ [ಮಾರುತಿನಗರ] ಎನ್.ಅರ್ಚನ [ ದರ್ಗಾ ಜೋಗಳ್ಳಿ ] ಎ.ಹೇಮಂತ [ಸಕ್ಕರೆಹೊಲ್ಲಹಳ್ಳಿ ] ವಿ.ಹೇಮ [ಎಳ್ಳುಪುರ] ಎನ್.ಜೀವನ್ [ ನಾಗದೇನಹಳ್ಳಿ ] ಎಂ.ಮನಸ್ವಿನಿ [ಕುರುವಿಗೆರೆ] ಆರು ಮಂದಿ ಪ್ರತಿಭಾವಂತ ಮಕ್ಕಳು ಯಶಸ್ವಿಯಾಗಿ ನವೋದಯ ಶಾಲೆಗೆ ಪ್ರವೇಶ ಪಡೆದಿದ್ದಾರೆ.

ವಸತಿ ಶಾಲೆಗೆ ಆಯ್ಕೆಯಾದ ಎಲ್ಲಾ ಮಕ್ಕಳಿಗೆ ಟ್ರಸ್ಟ್ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ಆರೂಡಿ ರಮೇಶ್, ಖಜಾಂಚಿ ದೇರಾನಾ ಟ್ರಸ್ಟೀ ಗಳಾದ ಕೃಷ್ಣಮೂರ್ತಿ, ಶಿವಾನಂದ್, ಸುಧಾಕರ್, ನಾರಾಯಣಪ್ಪ, ಹೆಚ್.ಎಸ್.ಶಿವಶಂಕರ್, ಮತ್ತು ಶಿಕ್ಷಕರು ಅಭಿನಂದನೆ ತಿಳಿಸಿದ್ದಾರೆ.

Edited By

Ramesh

Reported By

Ramesh

Comments