ಗೆದ್ದಿದ್ದು ಬಿಜೆಪಿಯಲ್ಲ, ಹಿಂದೂ ಧರ್ಮ.....ಹಿಂದೂವಾದಿ ವಕೀಲೆ ಚೇತನಾ






ಮೋದಿಯವರನ್ನು ಎರಡನೇ ಬಾರಿಗೆ ಪ್ರಧಾನಿಯನ್ನಾಗಿಸಲು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಯಾವುದೇ ರೀತಿಯ ಸಹಾಯಕ್ಕೂ ಕೈಚಾಚದೆ ಸ್ವಂತ ಖರ್ಚಿನಲ್ಲಿ ಪ್ರಚಾರ ನೆಡೆಸಿದ ಅಭಿಮಾನಿಗಳನ್ನು ನಮೋ ಸೇನೆ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಲಾಗಿತ್ತು. ದೇಶ ಕಂಡ ಧೀಮಂತ ನಾಯಕ, ದಿಟ್ಟ ನೆಡೆಯ ನೇರ ನುಡಿಯ, ಭಯೋತ್ಪಾದಕರ ಪಾಲಿನ ಸಿಂಹಸ್ವಪ್ನ, ಭಾರತ ಮಾತೆಯ ಹೆಮ್ಮೆಯ ಪುತ್ರ ನರೇಂದ್ರ ಮೋದಿ ಮತ್ತೊಂಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಖುಷಿ ಎಲ್ಲಾ ಅಭಿಮಾನಿಗಳಲ್ಲಿತ್ತು.
ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಹಾಗೇ ತಮ್ಮ ಕೆಲಸಗಳಿಗೆ ರಜೆ ಹಾಕಿ ಕಾಯಾ ವಾಚಾ ಮನಸಾ ದುಡಿದ ರಘುನಂದನ್ ಮತ್ತು ಪತ್ನಿ ನಯನ, ಶಾಂತಿನಗರದ ಗೋಪಾಲ್ ದಿವ್ಯಾಂಗನಾಗಿದ್ದರೂ ಮೋದಿಗಾಗಿ ಹಗಲೂ ರಾತ್ರಿ ಪ್ರಚಾರ ನೆಡೆಸಿದ್ದಾರೆ, ಪ್ರಚಾರ ನೆಡೆಸಿದ ಅನಾಮಧೇಯರು ಈ ಕ್ಷೇತ್ರದಲ್ಲಿ ಬಹಳಷ್ಟಿದ್ದರೂ ಮುಖ್ಯವಾಗಿ ನಮೋಸೇನೆ ಗಮನಕ್ಕೆ ಬಂದತ ಹಲವರನ್ನು ಗುರುತಿಸಿ ಅಭಿನಂದಿಸುವ ಸಲುವಾಗಿ ನಮೋಸೇನೆ ಸಂಸ್ಥಾಪಕ ಕೆಂಪೇಗೌಡ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ವಿಶೇಷವಾಗಿ ರಾಮನಗರದ ಉಮೇಶ್ ಫೇಸ್ ಬುಕ್ಕಿನಲ್ಲಿ ಪರಿಚಿತನಾದವ, ದಿವ್ಯಾಂಗನಾಗಿದ್ದರೂ ಮೋದಿಗಾಗಿ ರಾಮನಗರದಲ್ಲೇ ನಮೋ ಸೇನೆ ತಂಡ ಕಟ್ಟಿ ತನ್ನ ತ್ರಿಚಕ್ರವಾಹನದಲ್ಲಿ ಊರೂರು ಸುತ್ತಿ ಪ್ರಚಾರನೆಡೆಸಿದ್ದಾನೆ. ಇಂತ ವ್ಯಕ್ತಿಗಳನ್ನು ಗುರುತಿಸುವ ಹಾಗೂ ಅಭಿನಂದಿಸುವ ಕಾರ್ಯ ಮೆಚ್ಚುವಂತದ್ದು. ವರ್ಷದ ಹಿಂದೆ ಇಲ್ಲಿದ್ದವರ್ಯಾರೂ ಒಬ್ಬರಿಗೊಬ್ಬರು ತಿಳಿದಿರಲಿಲ್ಲ, ಎಲ್ಲಾ ಫೇಸ್ ಬುಕ್ ಪರಿಚಿತರು, ಹಾಗೇ ಒಬ್ಬರಿಂದೊಬ್ಬರಿಗೆ ಪರಿಚಯವಾಗಿ ನಮೋಸೇನೆ ರೂಪದಲ್ಲಿ ಬೆಳೆದು ನಿಂತಿತು. ಮೋದಿಜಿಯವರಿಗಾಗಿ ಇವರನ್ನೆಲ್ಲಾ ಒಗ್ಗೂಡಿಸಿದ ಶ್ರೇಯ ನಮೋಸೇನೆ ಸಂಸ್ಥಾಪಕ ಕೆಂಪೇಗೌಡರಿಗೆ ಸಲ್ಲಬೇಕು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಮೋ ಬ್ರಿಗೇಡ್ ವಕ್ತಾರ ಸುರೇಶ್ ರೆಡ್ಡಿ, ಸಿ.ಆರ್.ಪಿ.ಎಫ್. ರಮೇಶ್. ಹಿಂದೂವಾದಿ ವಕೀಲೆ ಚೇತನಾ, ಬಿ.ಆರ್. ರಮೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾಸ್ತಾವಿಕ ನುಡಿಗಳನ್ನು ನಮೋಸೇನೆ ಸಂಸ್ಥಾಪಕ ನುಡಿದರು, ಜನಶಕ್ತಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಸಿ.ಆರ್.ಪಿ.ಎಫ್. ರಮೇಶ್ ಕಾಶ್ಮೀರದಲ್ಲಿನ ತಮ್ಮ ಅನುಭವ ಹಂಚಿಕೊಂಡರು, ಅಲ್ಲಿನ ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳ ಸಹಕಾರ ಇಲ್ಲದಂತ ಸ್ಥಿತಿಯಲ್ಲಿ ಆಗ ಇದ್ದೆವು, ಈಗ ಬದಲಾಗಿದೆ, ಸೈನಿಕರಿಗೆಲ್ಲಾ ಮನೋಸ್ಥೈರ್ಯಬಂದಿದೆ ಎಂದರು. ಹಿಂದೂವಾದಿ ಬಿ.ಆರ್.ರಮೇಶ್ ಮೋದಿಯವರನ್ನಲ್ಲ ದೇಶವನ್ನು ಗೆಲ್ಲಿಸಲು ನಾನು ಹಗಲು ರಾತ್ರಿ ಕೆಲಸ ಮಾಡಿದ್ದೇನೆ, ಮೊದಲು ಮೋದಿಯವರ ತಾಯಿ ಹೀರಾಬೆನ್ ರವರಿಗೆ ನಮಿಸುವೆ, ಮೋದಿಯಂತಹ ಮಗನನ್ನು ತಾಯಿ ಭಾರತಾಂಬೆಗೆ ಕೊಟ್ಟಿದ್ದಕ್ಕೆ ಎಂದರು. ನಮೋಸೇನೆಯ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
Comments