ಐವತ್ತು ವರ್ಷ ವೈವಾಹಿಕ ಜೀವನ ಪೂರೈಸಿದ 24 ಮಂದಿ ಸದಸ್ಯ ದಂಪತಿಗಳಿಗೆ ಸನ್ಮಾನ

11 Jun 2019 9:19 AM |
260 Report

ನಗರದ ಗಾಂಧಿನಗರದಲ್ಲಿರುವ ಟೆಕ್ಸ್ ಟೈಲ್ ಮ್ಯಾನುಪ್ಯಾಕ್ಚರ್ಸ್ ಕೋ ಆಪರೇಟೀವ್ ಬ್ಯಾಂಕ್ ವತಿಯಿಂದ ಬ್ಯಾಂಕ್ ಐವತ್ತು ವರ್ಷ ಪೂರೈಸಿರುವ ಸಂದರ್ಭದಲ್ಲಿ ಐವತ್ತು ವರ್ಷ ವೈವಾಹಿಕ ಜೀವನ ಪೂರೈಸಿದ ಸದಸ್ಯ ದಂಪತಿಗಳನ್ನು ಸನ್ಮಾನಿಸುವ ಕಾರ್ಯಕ್ರಮ,2019 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ 1೦ ನೇ ತರಗತಿಯವರೆಗಿನ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ವಾಸುದೇವ್ ಮಾತನಾಡಿದರು. ಬ್ಯಾಂಕಿನ ಏಳಿಗೆಯಲ್ಲಿ ಹಿರಿಯ ಸದಸ್ಯರ ಪಾತ್ರ ಮಹತ್ವದ್ದಾಗಿದೆ, ಈ ಹಿನ್ನಲೆಯಲ್ಲಿ ಬ್ಯಾಂಕ್ ಐವತ್ತು ವರ್ಷ ಪೂರೈಸಿರುವ ಸಂದರ್ಭದಲ್ಲಿ ಐವತ್ತು ವರ್ಷ ವೈವಾಹಿಕ ಜೀವನ ಪೂರೈಸಿರುವ ಬ್ಯಾಂಕಿನ ಹಿರಿಯ ಸದಸ್ಯ ದಂಪತಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಡಳಿತ ಮಂಡಲಿ ಹಮ್ಮಿಕೊಂಡಿದೆ.

ಬ್ಯಾಂಕ್ ಸದಸ್ಯರ ಮಕ್ಕಳಿಗೆ ಕಳೆದ ಎಂಟು ವರ್ಷಗಳಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ, ನಾಲ್ಕು ವರ್ಷಗಳಿಂದ 5 ರಿಂದ 1೦ ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸದಸ್ಯರ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಗುತ್ತಿದೆ, ಟಿ.ಎಂ.ಸಿ ಬ್ಯಾಂಕ್ ತನ್ನ ಲಾಭಾಂಶದಲ್ಲಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಗ್ರಾಹಕ ಸ್ನೇಹಿಯಾಗಿದೆ, ಇಂತಹ ಕಾರ್ಯಗಳನ್ನು ಮಾಡಬೇಕಾದರೆ ಬ್ಯಾಂಕ್ ಸದೃಢವಾಗಬೇಕು, ಸದಸ್ಯರು ಹೆಚ್ಚಿನ ವಹಿವಾಟು ನೆಡೆಸುವುದರ ಮೂಲಕ ಬ್ಯಾಂಕ್ ಏಳಿಗೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಐವತ್ತು ವರ್ಷ ವೈವಾಹಿಕ ಜೀವನ ಪೂರೈಸಿದ 24 ಮಂದಿ ಸದಸ್ಯ ದಂಪತಿಗಳನ್ನು  ಸನ್ಮಾನಿಸಲಾಯಿತು, ಸನ್ಮಾನ ಸ್ವೀಕರಿಸಿ ಮಾತನಾಡಿದ ಸದಸ್ಯ ಸುಬ್ರಮಣ್ಯಾಚಾರ್ ಬರೀ ಹಣ ಸಂಪಾದನೆಗೆ ಒತ್ತು ಕೊಟ್ಟು ಹಿರಿಯರನ್ನು ಇಂದು ಕಡೆಗಾಣಿಸುತ್ತಿದ್ದಾರೆ, ಇಂತಹ ಸಮಯದಲ್ಲಿ ಬ್ಯಾಂಕ್  ಆಡಳಿತ ಮಂಡಲಿ ಹಿರಿಯರನ್ನು ಸನ್ಮಾನಿಸುವ ಮೂಲಕ ಗುರು ಹಿರಿಯರನ್ನು ಗೌರವಿಸಬೇಕೆಂದು ಸಮಾಜಕ್ಕೆ ಸಂದೇಶ ಕೊಟ್ಟಿರುವುದು ಅಭಿನಂದನೀಯ ಎಂದು ಹೇಳಿದರು. ಹಿರಿಯ ವಕೀಲರು ಹಾಗೂ ಬ್ಯಾಂಕಿನ ಸಲಹೆಗಾರ ಎ.ಆರ್. ನಾಗರಾಜ್, ಕೆ.ಎಂ.ಕೃಷ್ಣಮೂರ್ತಿ, ಉಪಾಧ್ಯಕ್ಷ ಎ.ಎಸ್.ಕೇಶವ, ನಿರ್ದೇಶಕರಾದ ಪಿ.ಸಿ.ವೆಂಕಟೇಶ್, ಎ.ಆರ್.ಶಿವಕುಮಾರ್, ಜಿ.ಮಂಜುನಾಥ್, ಟಿ.ಆವಲಕೊಂಡಪ್ಪ, ಕೆ.ಜಿ.ಗೋಪಾಲ್, ಡಿ.ಪ್ರಶಾಂತ್, ಡಾ. ಇಂದಿರಾ, ಎ.ಆರ್.ಗಿರಿಜ, ಡಾ.ಮಂಜುಳ ಹಾಗೂ ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು.   

Edited By

Ramesh

Reported By

Ramesh

Comments