ದೊಡ್ಡಬಳ್ಳಾಪುರದಲ್ಲಿ ವಿಜೃಂಭಣೆಯ ಹೂವಿನ ಕರಗ ಮಹೋತ್ಸವ

19 May 2019 4:02 PM |
252 Report

ನಗರದ ವನ್ಹಿಗರಪೇಟೆಯಲ್ಲಿರುವ ಶ್ರೀ ಸಪ್ತ ಮಾತೃಕ ಮಾರಿಯಮ್ಮ ದೇವಸ್ಥಾನದಲ್ಲಿ ಕರಗ ಮಹೋತ್ಸವವನ್ನು ದಿನಾಂಕ 10-5-2019 ಶುಕ್ರವಾರದಿಂದ 21-5-2019 ಮಂಗಳವಾರದವರೆಗೆ ಆಚರಿಸಲಾಗುತ್ತದೆ, ಇದರ ಅಂಗವಾಗಿ ದಿನಾಂಕ 18-5-2019 ಶನಿವಾರ ರಾತ್ರಿ 11 ಕ್ಕೆ ಹೂವಿನ ಕರಗವನ್ನು ಹೊತ್ತು ಪೂಜಾರಿ ಮುನಿರತ್ನಂ ಬಾಲಾಜಿ ರವರು ಶ್ರೀ ಸಪ್ತ ಮಾತೃಕ ಮಾರಿಯಮ್ಮ ದೇವಸ್ಥಾನದಲ್ಲಿ ಪೂಜಾ ವಿದಿವಿಧಾನಗಳನ್ನು ಪೂರೈಸಿ ದೇವಾಲಯದ ಆವರಣಕ್ಕೆ ಆಗಮಿಸಿ ವಾದ್ಯವೃಂದದವರ ತಾಳಕ್ಕೆ ಹೆಜ್ಜೆ ಹಾಕಿ ನೆರೆದಿದ್ದ ಭಕ್ತಾದಿಗಳಲ್ಲಿ ಭಕ್ತಿಭಾವ ಮೂಡಿಸಿದರು, ಅಲ್ಲಿಂದ ಹೊರಟು ಕೆರೆಬಾಗಿಲು ಏಳು ಸುತ್ತಿನ ಕೋಟೆ ಆವರಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ನಾರಾಯಣ ಮಂದಿರ ದೇವಾಲಯಕ್ಕೆ ಆಗಮಿಸಿ ಸಾಂಪ್ರದಾಯಕ ವಿದಿವಿಧಾನಗಳನ್ನು ಪೂರೈಸಿದರು. ಸಾವಿರಾರು ಭಕ್ತಾದಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಮಲ್ಲಿಗೆ ಹೂ ಅರ್ಪಿಸಿ ದರ್ಶನ ಪಡೆದುಕೊಂಡರು.

ನಗರದ ಎಲ್ಲಾ ದೇವಸ್ಥಾನಗಳಿಂದ ದೇವರುಗಳ ರಥೋತ್ಸವವನ್ನು ಹೊರಡಿಸಲಾಗಿತ್ತು.  ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ 40 ನಿಮಿಷಗಳ ಕಾಲ ಹಾಗೂ ರಂಗಪ್ಪ ಸರ್ಕಲ್ ನಲ್ಲಿ 10 ನಿಮಿಷಗಳ ಕಾಲ ನಾಟ್ಯ ವ್ಯವಸ್ಥೆ ಮಾಡಲಾಗಿತ್ತು.  ಹಳೇ ಬಸ್ ನಿಲ್ದಾಣದ ಬಸ್ ಮಾಲೀಕರು ಕಾರ್ಮಿಕರು, ಬೆಸ್ತರ ಪೇಟೆಯ ವಿವೇಕಾನಂದ ಯುವಕ ಸಂಘ, ಬೆಳ್ಳಿ ಗಣಪತಿ ಸೇವಾ ಟ್ರಸ್ಟ್, ಶ್ರೀ ಸಪ್ತಮಾತೃಕಾ ಮಾರಿಯಮ್ಮ ಸೇವಾಭಿವೃದ್ಧಿ ಮತ್ತು ವನ್ಹಿಕುಲ ಕ್ಷತ್ರಿಯ ತಿಗಳರ ಸಂಘ, ಕೋಟೆ ಗರಡಿ ವ್ಯಾಯಾಮಶಾಲೆ ಸೇರಿದಂತೆ ನಗರದ ವಿವಿಧ ಸಂಘಟನೆಗಳು ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.  ಶ್ರೀ ಸಪ್ತಮಾತೃಕಾ ಮಾರಿಯಮ್ಮ ಸೇವಾಭಿವೃದ್ಧಿ ಮತ್ತು ವನ್ಹಿಕುಲ ಕ್ಷತ್ರಿಯ ತಿಗಳರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Edited By

Ramesh

Reported By

Ramesh

Comments