ದೊಡ್ಡಬಳ್ಳಾಪುರ ಹಸಿ ಕರಗ ಮಹೋತ್ಸವ







ನಗರದ ವನ್ಹಿಗರಪೇಟೆಯಲ್ಲಿರುವ ಶ್ರೀ ಸಪ್ತ ಮಾತೃಕ ಮಾರಿಯಮ್ಮ ದೇವಸ್ಥಾನದಲ್ಲಿ ಕರಗ ಮಹೋತ್ಸವವನ್ನು ದಿನಾಂಕ 10-5-2019 ಶುಕ್ರವಾರದಿಂದ 21-5-2019 ಮಂಗಳವಾರದವರೆಗೆ ಆಚರಿಸಲಾಗುತ್ತದೆ, ಇದರ ಅಂಗವಾಗಿ ಇಂದು ಬೆಳಿಗಿನ ಜಾವ 5-30 ಕ್ಕೆ ಹಸಿ ಕರಗವನ್ನು ಆಂದ್ರಪ್ರದೇಶದ ಕುಪ್ಪಂ ನಿಂದ ಆಗಮಿಸಿರುವ ಮುನಿರತ್ನಂ ಬಾಲಾಜಿ ರವರು ಕರಗ ಹೊತ್ತು ಸದ್ಗುರು ಶ್ರೀ ಗಗನಾರ್ಯರ ಸನ್ನಿಧಿಯಿಂದ ಹೊರಟು ಹೊಸ ಕರಗದಗುಡಿ, ಆಸ್ಪತ್ರೆ ವೃತ್ತದ ಮೂಲಕ ಕೆರೆಬಾಗಿಲು ಏಳು ಸುತ್ತಿನ ಕೋಟೆ ಹತ್ತಿರ ಆಗಮಿಸಿ ನೂತನವಾಗಿ ನಿರ್ಮಿಸುತ್ತಿರುವ ನಾರಾಯಣ ಮಂದಿರ ದೇವಾಲಯಕ್ಕೆ ಆಗಮಿಸಿದರು. ದೇವಾಲಯದಲ್ಲಿ ಮಾತೆಯರು ಹಸಿ ಕರಗಕ್ಕೆ ಮಲ್ಲಿಗೆ ಹೂಗಳನ್ನು ಹಾಕಿ ಆರತಿ ಬೆಳಗಿದರು. ಸಾವಿರಾರು ಭಕ್ತಾದಿಗಳು ಹಾಗೂ ಸಾರ್ವಜನಿಕರು ಮುಂಜಾನೆಯೇ ಆಗಮಿಸಿ ದರ್ಶನ ಪಡೆದುಕೊಂಡರು.
ವಿಶೇಷ ಪ್ರಕಟಣೆ:- ದಿನಾಂಕ 18-5-2019 ಶನಿವಾರ ರಾತ್ರಿ 11-50 ಕ್ಕೆ ಹೂವಿನ ಕರಗ ಮಹೋತ್ಸವ ಇರುತ್ತದೆ, ಸಪ್ತಮಾತೃಕಾ ದೇವಸ್ಥಾನದಿಂದ ಹೊರಟ ಕರಗವು ಊರಿನ ಪ್ರಮುಖ ಬೀದಿಗಳಲ್ಲಿ ಮಾತ್ರ ಸಂಚರಿಸುತ್ತದೆ, ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ 40 ನಿಮಿಷಗಳ ಕಾಲ ನಾಟ್ಯ ವ್ಯವಸ್ಥೆ ಇರುತ್ತದೆ. ನಂತರ ರಂಗಪ್ಪ ಸರ್ಕಲ್ ನಲ್ಲಿ 10 ನಿಮಿಷಗಳ ಕಾಲ ನಾಟ್ಯ ವ್ಯವಸ್ಥೆ ಇರುವುದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶ್ರೀ ಸಪ್ತಮಾತೃಕಾ ಮಾರಿಯಮ್ಮ ಸೇವಾಭಿವೃದ್ಧಿ ಮತ್ತು ವನ್ಹಿಕುಲ ಕ್ಷತ್ರಿಯ ತಿಗಳರ ಸಂಘದ ಪದಾಧಿಕಾರಿಗಳು ಕೋರಿದ್ದಾರೆ.
Comments