ಪರಿಸರ ಜಾಗೃತಿ ಮೊಬೈಲ್ ಫೋಟೊ ಶೀರ್ಷಿಕೆ ಸ್ಪರ್ಧೆ

ಪ್ರಥಮ ತಾಲೂಕು ಪರಿಸರ ಸಮ್ಮೇಳನದ ಪ್ರಯುಕ್ತ ದೊಡ್ಡಬಳ್ಳಾಪುರದ ನಾಗರೀಕರಿಗಾಗಿ "ಪರಿಸರ ಜಾಗೃತಿ ಮೊಬೈಲ್ ಫೋಟೊ ಶೀರ್ಷಿಕೆ" ಸ್ಪರ್ಧೆಯನ್ನು ಆಯೋಜಿಸಲಾಗಿದೆ. ತಮ್ಮ ಮೊಬೈಲಲ್ಲಿ ಸೆರೆಹಿಡಿದ ತಾಲೂಕಿನ ಪರಿಸರದ ಛಾಯಾಚಿತ್ರವನ್ನು ಸೂಕ್ತ ಶೀರ್ಷಿಕೆ ನೀಡಿ ವಾಟ್ಸಪ್ ಸಂಖ್ಯೆ 98868 61288 ಕ್ಕೆ 25-05-2019 ರೊಳಗೆ ಕಳುಹಿಸಿಕೊಡಬಹುದು.
ಸ್ಪರ್ಧೆಯ ನಿಬಂಧನೆಗಳು:-
ಮೊಬೈಲ್ ಛಾಯಾಗ್ರಾಹಕರು ದೊಡ್ಡಬಳ್ಳಾಪುರ ತಾಲೂಕಿನವರಾಗಿದ್ದು ಫೋಟೊ ತೆಗೆದ ಸ್ಥಳ ತಾಲೂಕು ವ್ಯಾಪ್ತಿಯಲ್ಲಿ ಇರಬೇಕು. ಒಬ್ಬರು ತಾವು ತಮ್ಮದೇ ಮೊಬೈಲಲ್ಲಿ ಸೆರೆಹಿಡಿದಿರುವ ಒಂದು ಫೋಟೊ ಮಾತ್ರ ಕಳುಹಿಸಬಹುದು. ಫೋಟೋಗೆ ಚಿಕ್ಕದಾಗಲಿ ದೊಡ್ಡದಾಗಲಿ ಶೀರ್ಷಿಕೆ ನೀಡುವುದು ಕಡ್ಡಾಯ. ಗ್ರಾಫಿಕ್ಸ್ / ತಿದ್ದುಪಡಿ ಮಾಡಿರುವ ಫೋಟೊಗಳಿಗೆ ಈ ಸ್ಪರ್ಧೆಯಲ್ಲಿ ಅವಕಾಶವಿಲ್ಲ. ಕೇವಲ ಸಹಜ ಫೋಟೋಗಳಿಗಷ್ಟೇ ಅವಕಾಶ. ಸ್ಪರ್ಧೆಯು ಪರಿಸರ ಸಂರಕ್ಷಣಾ / ಜಾಗೃತಿ ಉದ್ದೇಶ ಇರುವುದರಿಂದ ಪೋಟೊ ಸ್ಪಷ್ಟತೆಗೂ ಮಿಗಿಲಾಗಿ ನೀವು ಸಮಯೋಚಿತವಾಗಿ ತೆಗೆದ ಚಿತ್ರ, ಶೀರ್ಷಿಕೆ ಮೂಲಕ ನೀಡುವ ಸಂದೇಶ ಮಹತ್ವದ್ದಾಗಿರುತ್ತದೆ. ಸ್ಪರ್ಧೆಗೆ ಸಂಬಂಧಿಸಿದಂತೆ ಪತ್ರವ್ಯವಹಾರ ಅಥವಾ ಕರೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ನೀವು ಫೋಟೊ ಕಳುಹಿಸಿದಿರೆಂದರೆ ಮೇಲ್ಕಂಡ ನಿಬಂಧನೆಗಳಿಗೆ ಬದ್ಧರಾಗಿದ್ದೀರೆಂದು ಪರಿಗಣಿಸಲಾಗುತ್ತದೆ. ಯಾವುದೇ ಸುಳ್ಳು ಮಾಹಿತಿ ನೀಡಿದ್ದರೆ ಅದಕ್ಕೆ ನೀವೇ ಹೊಣೆಗಾರರಾಗಿರುತ್ತೀರ. ತೀರ್ಪುಗಾರರ ತೀರ್ಪು ಅಂತಿಮ.
ನೀವು ಕಳುಹಿಸಬೇಕಾಗಿರುವುದು:
- ದೊಡ್ಡಬಳ್ಳಾಪುರ ಪರಿಸರದಲ್ಲಿ ನಿಮ್ಮದೇ ಮೊಬೈಲ್ ನಲ್ಲಿ ತೆಗೆದ ಫೋಟೊ.
- ಫೋಟೊ ಗೆ ಒಂದು ಸೂಕ್ತ ಶೀರ್ಷಿಕೆ.
- ನಿಮ್ಮ ಹೆಸರು, ವಯಸ್ಸು, ವೃತ್ತಿ, ವಿಳಾಸ, ಮೊಬೈಲ್ ಸಂಖ್ಯೆ, ಇ ಮೈಲ್ ಐಡಿ. ವೃತ್ತಿ ಮಾಹಿತಿ.
- ಫೋಟೊ ತೆಗೆದ ಸ್ಥಳ, ಕ್ಯಾಮರಾ ಮೊಬೈಲ್ ಮಾಡೆಲ್, ಚಿತ್ರ ತೆಗೆದ ದಿನಾಂಕ.
- ಸಾಧ್ಯವಾದರೆ ಊರಿನ ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರ ಜವಾಬ್ದಾರಿ ವಿಷಯಕ್ಕೆ ಸಂಬಂಧಿಸಿದಂತೆ ಒಂದೆರಡು ಸಾಲು ಬರೆದು ಕಳುಹಿಸಬಹುದು.
Comments