ಶ್ರೀರಾಮ ಶೋಭಾಯಾತ್ರೆ ಹಾಗೂ ಬೃಹತ್ ಹಿಂದೂ ಸಮಾಜೋತ್ಸವ

10 May 2019 4:06 PM |
411 Report

ದೊಡ್ಡಬಳ್ಳಾಪುರ ನಗರದ ವಿಶ್ವ ದಿಂದೂ ಪರಿಷತ್, ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡ ಇವರ ವತಿಯಿಂದ ಊರ ಹಬ್ಬ ಶ್ರೀರಾಮ ಶೋಭಾಯಾತ್ರೆಯು ದಿನಾಂಕ 26-5-2019 ರ ಭಾನುವಾರ ಬೆಳಿಗ್ಗೆ 10 ಘಂಟೆಗೆ ನೆಡೆಯಲಿದೆ, ಇದರ ಅಂಗವಾಗಿ ಇಂದು ನಗರ ದೇವತೆ ಶ್ರೀ ಮುತ್ಯಾಲಮ್ಮತಾಯಿ ಸನ್ನಿಧಿಯಲ್ಲಿ ಅಭಿಷೇಕ ಪೂಜಾ ಕಾರ್ಯ ನೆರವೇರಿಸಿ ಶೋಭಾಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಬಜರಂಗದಳದ ಜಿಲ್ಲಾ ಪ್ರಮುಖ್ ಮಧು ಬೇಗಲಿ, ತಾಲ್ಲೂಕು ಪ್ರಮುಖ್ ಮಹೇಶ್ ಮಧು, ಭಾಸ್ಕರ್, ಅರ್ಜುನ್, ದೀಪಕ್, ಶಿವು, ಹೇಮಂತ್, ಪುರುಶೋತ್ತಮ್, ರಾಕೇಶ್, ಶಶಿ, ನವೀನ್, ಕುಮಾರ್, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಕಾರ್ಯದರ್ಶಿ ಆರೂಡಿ ರಮೇಶ್, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ನಾಗರಾಜ್, ಖಜಾಂಚಿ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

ಶೋಭಾಯಾತ್ರೆಯು ದಿನಾಂಕ 26-5-2019 ಭಾನುವಾರ ಬೆಳಿಗ್ಗೆ ಹತ್ತು ಘಂಟೆಗೆ ತಾಲ್ಲೂಕು ಆಫೀಸ್ ಮುಂಭಾಗದಿಂದ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಭಾರತಮಾತೆ, ಗೋಮಾತೆ, ಶ್ರೀರಾಮ, ಹನುಮ ಹಾಗೂ ಶಿವಾಜಿ ಮಹಾರಾಜರ ಪ್ರತಿಮೆಗಳೊಂದಿಗೆ ಶೋಭಾಯಾತ್ರೆ ನೆಡೆಯುತ್ತದೆ.  ಹಾಗೂ ಸಂಜೆ 6 ಘಂಟೆಗೆ  ಪಿ.ಎಲ್.ಡಿ. ಬ್ಯಾಂಕ್ ಎದುರು ಇರುವ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ನಮ್ಮ ಸನಾತನ ಧರ್ಮದ ಶ್ರದ್ಧಾ ಬಿಂದುವಾದ ಶ್ರೀರಾಮಚಂದ್ರ ಪ್ರಭುಗಳ ಈ ಬೃಹತ್ ಕಾರ್ಯಕ್ರಮಕ್ಕೆ ತಾಲ್ಲೂಕಿನ ಸಮಸ್ತ ಹಿಂದೂ ಬಾಂಧವರು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.

Edited By

Ramesh

Reported By

Ramesh

Comments