ಅರ್ಕಾವತಿ ತೀರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ 13 ನೇ ವಾರ್ಷಿಕೋತ್ಸವದ ಕುಂಭಾಭಿಷೇಕ

10 May 2019 3:43 PM |
248 Report

ದೊಡ್ಡಬಳ್ಳಾಪುರ ತಾಲ್ಲೂಕಿನ ಶಿವಪುರ ಗ್ರಾಮ ಅರ್ಕಾವತಿ ತೀರದಲ್ಲಿ ವಿರಾಜಮಾನವಾಗಿ ನೆಲೆಸಿರುವ ಇತಿಹಾಸ ಪ್ರಸಿದ್ಧವಾದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಜಯಂತೋತ್ಸವ, 13ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕುಂಭಾಭಿಷೇಕವು ದಿನಾಂಕ 17-5-2019 ಶುಕ್ರವಾರ ಮತ್ತು 18-5-2019 ರ ಶನಿವಾರದಂದು ದೇವಾಲಯದಲ್ಲಿ ನೆಡೆಯಲಿದೆ, ದಿನಾಂಕ 17-5-2019 ರ ಶುಕ್ರವಾರ ಸ್ವಾಮಿಯವರಿಗೆ ಪಂಚಾಂಮೃತಾಭಿಷೇಕ, ಮೂಲಸ್ವಾಮಿಯವರಿಗೆ ಕುಂಭಪ್ರೋಕ್ಷಣೆಯೊಂದಿಗೆ ವಿವಿಧ ಸೇವೆಗಳು ನೆಡೆಯಲಿವೆ, ಮಧ್ಯಾನ್ಹ ೧೨ ಘಂಟೆಗೆ ಪ್ರಾಕಾರೋತ್ಸವ ಹಾಗೂ ತಿರುವೀದಿ ಉತ್ಸವ ನೆಡೆಯಲಿದೆ. ಸಂಜೆ ವಿಷ್ಣು ಸಹಸ್ರನಾಮ ಪಾರಾಯಣ, ದಿವ್ಯ ಪ್ರಭಂದ ಪಾರಾಯಣ ಹಾಗೂ ತಿರುವಾರಾಧನೆ, ಸಹಸ್ರನಾಮಾರ್ಚನೆಯೊಂದಿಗೆ ಪ್ರಸಾದವಿನಿಯೋಗ ನೆಡೆಯಲಿದೆ. ದಿನಾಂಕ 18-5-2019 ಶನಿವಾರ ಬೆಳಿಗ್ಗೆ ಸೇವಾಕಾಲ, ತಿರುವಾರಾಧನೆ, ತೀರ್ಥಗೋಷ್ಠಿ ಹಾಗೂ ಶ್ರೀ ರಮಾಸಹಿತ ವೀರವೆಂಕಟ ಸತ್ಯನಾರಾಯಣಸ್ವಾಮಿ ವ್ರತ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಇರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾದಿಗಳು ಭಾಗವಹಿಸಲು ಕೋರಲಾಗಿದೆ.

Edited By

Ramesh

Reported By

Ramesh

Comments