ಚಿತ್ರಕಲಾ ತರಬೇತಿ ಕಾರ್ಯಾಗಾರ…

29 Apr 2019 5:50 AM |
220 Report

ದೊಡ್ಡಬಳ್ಳಾಪುರ ನಗರದ ಪರಿಸರ ಕ್ಷೇಮಾಭಿವೃದ್ಧಿ ಸಂಘ, ಸುಚೇತನಾ ಎಜುಕೇಷನಲ್ ಟ್ರಸ್ಟ್, ಮುದ್ದಳೆ ಶಾಮಣ್ಣ ಟ್ರಸ್ಟ್ ಮತ್ತು ಅರಳೇಪೇಟೆ ಹುಡುಗರ ಸಾಂಸ್ಕೃತಿಕ ಸ್ನೇಹಕೂಟ ಇವರ ಸಹಯೋಗದೊಂದಿಗೆ ದಿನಾಂಕ 28-04-2019 ಭಾನುವಾರ ಬೆಳಿಗ್ಗೆ 8-30 ರಿಂದ ಸಂಜೆ 4-30 ರವರೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲದೆ ಚಿತ್ರಕಲಾ ಕಾರ್ಯಾಗಾರವನ್ನು ಬೆಸೆಂಟ್ ಪಾರ್ಕ್ ನಲ್ಲಿ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ಎಂ.ಜಿ ಚಂದ್ರಶೇಕರ್, ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್.ಪ್ರಭಾ, ಇತಿಹಾಸಕಾರ ಡಾ.ಎಸ್.ವೆಂಕಟೇಶ್ ಭಾಗವಹಿಸಿದ್ದರು.

ಚಿತ್ರಕಾಲಾವಿದರಾದ ಶ್ರೀಮತಿ ಯುಗಶ್ರೀ ಬೆಂಗಳೂರು, ಮೌನೇಶ್ ಉಪ್ಪಾರ್ ಕೊಪ್ಪಳ ಇವರು ಕಾರ್ಯಾಗಾರವನ್ನು ನೆಡೆಸಿಕೊಟ್ಟರು. ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ ಹಾಗೂ ಇತರರಿಗೆ ರೂ 1೦೦/- ಶುಲ್ಕದೊಂದಿಗೆ ಮೊದಲು ಬಂದ ನೂರು ವಿದ್ಯಾರ್ಥಿಗಳನ್ನು ಮಾತ್ರ ಪರಿಗಣಿಸಲಾಗಿದ್ದರೂ, ಒಟ್ಟು 156 ಮಂದಿ ಚಿತ್ರಾಸಕ್ತರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲರಿಗೂ ಮಧ್ಯಾನ್ಹ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು, ಕಾರ್ಯಾಗಾರದಲ್ಲಿ ಪಾಲ್ಗೋಂಡವರಿಗೆ ಪ್ರಮಾಣ ಪತ್ರ ನೀಡಲಾಯಿತು. ಮಂಜುನಾಥ್ ರೆಡ್ಡಿ, ಶ್ರೀಕಾಂತ್, ಗಂಗಾಧರ್, ಮಂಜುನಾಥ್ ನಾಗ್, ನವೀನ್, ಹೋಟೆಲ್ ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು.

Edited By

Ramesh

Reported By

Ramesh

Comments