ಯಾದವ ಸಮುದಾಯದ ಪರವಾಗಿಯೇ ನಾನಿದ್ದೇನೆ: ಹೆಚ್.ಡಿ ದೇವೇಗೌಡ

16 Apr 2019 6:49 PM |
1412 Report

ಕೊರಟಗೆರೆ ಏ.16:- ಎಲ್ಲಾ ಹಿಂದುಳಿದ ವರ್ಗಗಳ ಏಳ್ಗೆಗೆ ನಾನು ಶ್ರಮಿಸಿದ್ದೇನೆ ರಾಜ್ಯದಲ್ಲಿ ಕೇವಲ ವಕ್ಕಲಿಗರು-ಲಿಂಗಾಯಿತರೇ ರಾಜಕೀಯ ಮಾಡುವುದಲ್ಲ ಎಲ್ಲಾ ವರ್ಗದರಿಗೂ ಅಧಿಕಾರ ಸಿಕ್ಕಬೇಕು ಎಂದು ಮೀಸಲಾತಿ ಕಲ್ಪಿಸಿದ್ದು ನಾನು ಎಂದು ಹೆಚ್.ಡಿ ದೇವೇಗೌಡ ಹೇಳಿದರು. ಪಟ್ಟಣದ ಹೊರ ವಲಯದಲ್ಲಿ ಹಮ್ಮಿಕೊಂಡಿದ್ದ ಯಾದವ ಸಮಾಜದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

      ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಹಿಂದುಳಿದ ವರ್ಗದವರಿಗೂ ಜಿ.ಪಂ, ತಾ.ಪಂ, ಗ್ರಾ.ಪಂ, ಸೇರಿದಂತೆ ಇತರೆ ಕಡೆ ಮೀಸಲಾತಿ ಕಲ್ಪಿಸಲು ಹೋರಾಟ ಮಾಡಿ ಅದನ್ನು ಅನುಷ್ಠಾನಕ್ಕೆ ಶ್ರಮಿಸಿದ್ದೇನೆ... ಕೃಷ್ಣಪ್ಪರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದೇನೆ... ಪಕ್ಷದ ಜವಬ್ದಾರಿಯೇ ಅವರಿಗೆ ನೀಡಿದ್ದ ನನನ್ನು ಅವರ ಸಾವಿಗೆ ಹೊಣೆ ಮಾಡುವ ಬಿಜೆಪಿಯವರಿಗೆ ಏನೆನ್ನಬೇಕು ಎಂದು ಪ್ರಶ್ನಿಸಿದರು.
    ಪ್ರತಿಯೊಂದು ಕೆಳ ಸಮುದಾಯದ ಅಭಿವೃದ್ಧಿಗೆ ದೇವೇಗೌಡರಿಗೆ ಮತಹಾಕಬೇಕು... ಬಿಜೆಪಿಯ ಬಸವರಾಜು ಅಥವಾ ಮೋದಿ ನಿಮ್ಮನ್ನಾಗಿ... ನಿಮ್ಮ ಸಮುದಾಯವನ್ನಾಗಲಿ ಮುನ್ನಡಿಸುವುದಿಲ್ಲ ಎಂದು ಉಪಮುಖ್ಯಂತ್ರಿ ಡಾ. ಜಿ ಪರಮೇಶ್ವರ್ ಹೇಳಿದರು.
     ಯಾದವ ಸಮಾಜದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಮಾತನಾಡಿ ನಮಗೆ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.. ಅದೇ ರೀತಿ ಎಸ್.ಟಿ ಗೆ ಗೊಲ್ಲರನ್ನು ಸೇರಿಸಬೇಕು ರಾಜಕೀಯಾಗಿ, ಸಾಮಾಜಕ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
    ಮಾಜಿ ಸಚಿವ ಎಂ.ಆರ್ ಸೀತಾರಾಂ ಮಾತನಾಡಿ ದೇವೇಗೌಡರು ಸೂಕ್ತ ಸ್ಥಾನಮಾನವನ್ನು ಕಲ್ಪಿಸುವಲ್ಲಿ ಮುಂಚೂಣೆಯಲ್ಲಿದ್ದಾರೆ ಟೊಳ್ಳು ಆರೋಪಗಳಿಗೆ ಕಿವಿಗೊಡಬೇಡಿ ಹಿಂದುಳಿದ ವರ್ಗಗಳು.. ಅಲ್ಪಸಂಖ್ಯಾತರು.. ಎಸ್ಸಿ/ಎಸ್ಟಿ ಗಳ ಸಮಾಜದಲ್ಲಿ ತಲೆ ಎತ್ತಿ ನಡೆಯಬೇಕೆಂದರೆ  ದೇವೇಗೌಡರನ್ನು ಬೆಂಬಲಿಸಿ ಎಂದರು.
    ತಾಲೂಕು ಯಾದವ ಸಂಘದ ಕಾರ್ಯದರ್ಶಿ  ಹೆಚ್.ಕೆ ಮಹಾಲಿಂಗಪ್ಪ ಮಾತನಾಡಿ ಯಾದವ ಸಮುದಾಯ ಎಂ. ಕೃಷ್ಣಪ್ಪರ ಸಾವಿಗೆ ದೇವೇಗೌಡರನ್ನು ಹೊಣೆಗಾರರನ್ನಾಗಿ ಮಾಡಿ ಸಮುದಾಯಕ್ಕೆ ತಪ್ಪು ಸಂದೇಶವನ್ನು ಬಿಜೆಪಿಯವರು ನೀಡುತ್ತಿದ್ದು ಇದು ಸತ್ಯಕ್ಕೆ ದೂರವಾದ್ದು   ಬಿಜೆಪಿಯವರು ಬಾಯಿ ಚಪಲಕ್ಕೆ ಏನೇನೋ ಹೇಲಿ ಒಂದು ಸಮುದಾಯದ ದಾರಿ ತಪ್ಪಿಸುವ ಕೆಲಸವನ್ನು ಮಾಡಬಾರದು ಎಂದು  ಹೇಳಿದರು.
    ಸಭೆಯಲ್ಲಿ ಎಂಎಲ್ಸಿ ವೇಣುಗೋಪಾಲ್, ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್, ತಾಲೂಕು ಯಾದವ ಸಂಘದ ಅಧ್ಯಕ್ಷ ರಂಗನಾಥಪ್ಪ, ಜಿ.ಪಂ ಸದಸ್ಯ ಶಿವರಾಮಯ್ಯ, ಪ್ರೇಮಾ, ತಾ.ಪಂ ಸದಸ್ಯ ಈರಣ್ಣ,  ಮುಖಂಡರಾದ ಮೈಲಪ್ಪ, ಗಂಗಾಧರಪ್ಪ, ರಾಮಕೃಷ್ಣ, ಅಮರನಾಥ್,  ಲಕ್ಕಣ್ಣ,  ಇತರರು ಇದ್ದರು. (ಚಿತ್ರಗಳು ಇವೆ)

Edited By

Raghavendra D.M

Reported By

Raghavendra D.M

Comments