ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿಗೆ ನವ್ಯ ಜಿ.ಬಿ. ಎಸ್.ಬಿ.ಎ.ಸಿಎಸ್ ನಲ್ಲಿ 578 ಅಂಕಗಳೊಂದಿಗೆ ಕಾಲೇಜಿನ ಟಾಪರ್

16 Apr 2019 8:14 AM |
581 Report

ದ್ವಿತೀಯ ಪಿಯುಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 1೦ನೇ ಸ್ಥಾನ ಫಲಿತಾಂಶದಲ್ಲಿ 3 ಸ್ಥಾನ ಜಿಗಿತ/ ಜಿಲ್ಲೆಗೆ ಶೇ.72.91 ರಷ್ಟು ಫಲಿತಾಂಶ/ಬಾಲಕಿಯರ ಮೇಲುಗೈ ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.72.91 ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ 1೦ನೇ ಸ್ಥಾನ ಪಡೆದಿದೆ. ಕಳೆದ ವರ್ಷ 13ನೇ ಸ್ಥಾನದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 68.82 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ.4.೦9 ರಷ್ಟು ಫಲಿತಾಂಶ ಹೆಚ್ಚಾಗಿದೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಪಿ.ಕುಮಾರಸ್ವಾಮಿ ತಿಳಿಸಿದರು.

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಕುರಿತು ಮಾಹಿತಿ ನೀಡಿದ ಅವರು, ಈ ಬಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 16 ಸರಕಾರಿ, 8 ಖಾಸಗಿ ಅನುದಾನಿತ ಮತ್ತು 43 ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ  ವ್ಯಾಸಂಗ ಮಾಡಿದ್ದ  ವಿದ್ಯಾರ್ಥಿಗಳು ಜಿಲ್ಲೆಯ ಒಟ್ಟು 13 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 7663 ವಿದ್ಯಾರ್ಥಿಗಳು ಮೊದಲ ಬಾರಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದವರು. ಇವರಲ್ಲಿ 5587 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.   ಕಳೆದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದ 972 ಮಂದಿ ವಿದ್ಯಾರ್ಥಿಗಳಲ್ಲಿ 266 ಮತ್ತು 258 ಮಂದಿ ಖಾಸಗಿ ವಿದ್ಯಾರ್ಥಿಗಳಲ್ಲಿ 73 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ತೇರ್ಗಡೆ ಹೊಂದಿದ್ದಾರೆ ಎಂದು ತಿಳಿಸಿದರು.

ಬಾಲಕಿಯರೇ ಮೇಲುಗೈ : ಶೇ.72.62 ರಷ್ಟು ತೇರ್ಗಡೆ ಬೆಂಗಳೂರು  ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿಯೂ ಬಾಲಕಿಯರೇ  ಮೇಲುಗೈ ಸಾಧಿಸಿದ್ದಾರೆ.  ಪರೀಕ್ಷೆ ಬರೆದಿದ್ದ 4912 ಮಂದಿ ಬಾಲಕಿಯರಲ್ಲಿ 3567 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿ, ಶೇ.72.62 ರಷ್ಟು ಫಲಿತಾಂಶ ತಂದಿದ್ದಾರೆ. 3981 ಮಂದಿ ಬಾಲಕರಲ್ಲಿ 2355 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.59.16 ರಷ್ಟು ಫಲಿತಾಂಶ ಪಡೆದಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದ 5515 ವಿದ್ಯಾರ್ಥಿಗಳಲ್ಲಿ 3911 ಮಂದಿ ತೇರ್ಗಡೆಯಾಗಿದ್ದಾರೆ.  ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದ 3378 ವಿದ್ಯಾರ್ಥಿಗಳಲ್ಲಿ 2611 ಮಂದಿ ತೇರ್ಗಡೆಯಾಗಿದ್ದಾರೆ. 

ವಾಣಿಜ್ಯ ವಿಭಾಗದಲ್ಲಿ ಶೇ.77.51 ತೇರ್ಗಡೆ: ವಿಭಾಗವಾರು ಫಲಿತಾಂಶದಲ್ಲಿ ವಾಣಿಜ್ಯ ವಿಭಾಗ ಮುಂದಿದ್ದು, ಪರೀಕ್ಷೆ ಬರೆದಿದ್ದ 4455 ವಿದ್ಯಾರ್ಥಿಗಳಲ್ಲಿ 3453 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ.77.51 ಫಲಿತಾಂಶ ದೊರೆತಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 1896 ವಿದ್ಯಾರ್ಥಿಗಳಲ್ಲಿ 1400 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.73.84 ಫಲಿತಾಂಶ ಲಭ್ಯವಾಗಿದೆ. ಅದೇ ರೀತಿ ಕಲಾ ವಿಭಾಗದಲ್ಲಿ 1312 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಆ ಪೈಕಿ 734 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೆ.55.95 ಫಲಿತಾಂಶ ದೊರೆತಿದೆ. 

ನಗರದ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ನವ್ಯ ಜಿ.ಬಿ. ಎಸ್.ಬಿ.ಎ.ಸಿಎಸ್ ನಲ್ಲಿ 578 ಅಂಕಗಳೊಂದಿಗೆ ಕಾಲೇಜಿನ ಟಾಪರ್ ಆಗಿದ್ದಾಳೆ, ಪಿ.ಸಿ.ಎಂ.ಸಿ. ಯಲ್ಲಿ ಕೃತಜ್ಞಾ 571 ಅಂಕ, ಪಿ.ಸಿ.ಎಂ.ಬಿ.ಯಲ್ಲಿ ಲಕ್ಷ್ಮಿ ಹೆಚ್.ಆರ್  565, ಸುಮನಶ್ರೀ 564 ಅಂಕ ಹಾಗೂ ಹೆಚ್.ಇ.ಪಿ.ಎಸ್.ನಲ್ಲಿ ಐಶ್ವರ್ಯ 558 ಅಂಕಗಳಿಸಿ ವಿವಿಧ ವಿಭಾಗಗಳಲ್ಲಿ ಟಾಪರ್ ಗಳಾಗಿದ್ದಾರೆ. ಇವರಿಗೆ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಹಾಗೂ ಅಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ.

 

Edited By

Ramesh

Reported By

Ramesh

Comments