ಕರ್ನಾಟಕ ಮಹಿಳಾ ಮಕ್ಕಳ ಮಾನವ ಹಕ್ಕುಗಳ ರಕ್ಷಣಾ ವೇದಿಕೆ ವತಿಯಿಂದ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಕರ್ನಾಟಕ ಮಹಿಳಾ ಮಕ್ಕಳ ಮಾನವ ಹಕ್ಕುಗಳ ರಕ್ಷಣಾ ವೇದಿಕೆ ವತಿಯಿಂದ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಸಂಘದ ಕಾರ್ಯಾಲಯದಲ್ಲಿ ಆಚರಿಸಲಾಯಿತು, ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ನಾಗರಾಜ್ ಮಾತನಾಡಿ ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ ಮಹಾನ್ ವ್ಯಕ್ತಿ ಹಾಗೂ ಭಾರತ ಸಂವಿಧಾನದ ಪಿತಾಮಹ, ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ, ಆರ್ಥಿಕ,ಶೈಕ್ಷಣಿಕ ಕಾನೂನಿನ ಬಗ್ಗೆ ಹೆಚ್ಚಿನ ರೀತಿಯಲ್ಲಿ ತಿಳಿಸಿದ್ದಾರೆ, ಸಂವಿಧಾನದ ಪುಟಗಳಲ್ಲಿ ಸಮಾನತೆಯ ಹಕ್ಕು ,ಅಸ್ಪೃಶ್ಯ ಅಸ್ಪೃಶ್ಯತೆ ನಿಷೇಧ ಜಾತಿ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯ ಸಂಘ ಸಂಸ್ಥೆಗಳನ್ನು ಕಟ್ಟುವ ಹಕ್ಕು, ಕಡ್ಡಾಯ ಶಿಕ್ಷಣದ ಹಕ್ಕು, ಕಡ್ಡಾಯವಾಗಿ ಮತ ಚಲಿಸುವ ಹಕ್ಕು ಸೇರಿದಂತೆ ಅನೇಕ ವಿಷಯಗಳನ್ನು ತಿಳಿಸಿದ್ದಾರೆ, ಇವರು ಬರೆದಂತ ಸಂವಿಧಾನವು ಒಂದೇ ಜಾತಿಗೆ ಸೀಮಿತವಲ್ಲ ಸಮಾಜದ ಎಲ್ಲಾ ವರ್ಗದವರಿಗೂ ಅನ್ವಯಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮಹಿಳಾ ಮಕ್ಕಳ ಮಾನವ ಹಕ್ಕುಗಳ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷೆ ರಾಜೇಶ್ವರಿ ವಹಿಸಿದ್ದರು, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಎಂ. ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಡಿ.ಸಿ. ಲಕ್ಷ್ಮೀನಾರಾಯಣ್, ಜಿಲ್ಲಾ ಕಾರ್ಯದರ್ಶಿ ರಾಕೇಶ್, ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಅಧ್ಯಕ್ಷ ಎಚ್.ಎಂ. ಕೃಷ್ಣ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಟಿ. ಗಿರೀಶ್, ಮಹಾದೇವ್, ಕರ್ನಾಟಕ ನವಚೇತನ ಯುವಕರ ಸಂಘದ ಅಧ್ಯಕ್ಷ ಶಿವರಾಜ್, ಯುವ ಮುಖಂಡ ಬಾನು, ರಾಜ್ಯ ಮಾನವ ಹಕ್ಕುಗಳ ಜನಪರ ಸಂಘದ ಅಧ್ಯಕ್ಷ ಟಿ.ಡಿ .ಶಶಿಕುಮಾರ್, ಜಿಲ್ಲಾಧ್ಯಕ್ಷ ಶ್ರೀನಿವಾಸ್. ಎಲ್, ಲಕ್ಷ್ಮೀ ನಾರಾಯಣ ಕುರುಬರ ಸಂಘ ರಾಜಣ್ಣ, ಕಾಂಗ್ರೆಸ್ ನ ಮಹಿಳಾ ಉಪಾಧ್ಯಕ್ಷೆ ಮಹೇಶ್ವರಿ, ಖಜಾಂಚಿ ಗೌರಮ್ಮ, ಪತ್ರಕರ್ತ ಹಾಗೂ ಸಾಹಿತಿ ರವಿಕಿರಣ್ ಮತ್ತು ಮಾಧ್ಯಮದ ಶಿವಕುಮಾರ್ ಭಾಗವಹಿಸಿದ್ದರು.
Comments