ಮತದಾನದ ಅರಿವು ಮೂಡಿಸಲು ಸೈಕಲ್ ಜಾಥ

15 Apr 2019 7:01 AM |
199 Report

ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘ, ಸುಚೇತನ ಎಜುಕೇಶನಲ್ & ಚಾರಿಟಬಲ್ ಟ್ರಸ್ಟ್ ಹಾಗೂ ಅರಳೇ ಪೇಟೆ ಹುಡುಗರ ಸಾಂಸ್ಕೃತಿಕ ಸ್ನೇಹ ಕೂಟ ದೊಡ್ಡಬಳ್ಳಾಪುರ ಇವರ ವತಿಯಿಂದ ದಿನಾಂಕ 14 ಏಪ್ರಿಲ್ 2019 ಭಾನುವಾರ ಬೆಳಿಗ್ಗೆ ಆರು ಘಂಟೆಗೆ M.A.ಪ್ರಕಾಶ ಲೇಔಟ್ ಪಾರ್ಕ್, ದೊಡ್ಡಬಳ್ಳಾಪುರ ದಿಂದ ಪ್ರತಿಯೊಬ್ಬರಲ್ಲೂ ಮತದಾನ ಮಾಡುವುದಕ್ಕೆ ಜಾಗೃತಿ ಮೂಡಿಸುವ, ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸುವ ಹಾಗೂ ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು..ಎಂದು ತಿಳಿಸುವ ಸಲುವಾಗಿ ಸೈಕಲ್ ಜಾಥಾಗೆ ಪರಿಸರ ಸಿರಿ ಸಂಘದ ಹೋಟೆಲ್ ಕೃಷ್ಣಮೂರ್ತಿ ಚಾಲನೆ ನೀಡಿದರು,

ಪ್ರಕಾಶ್ ಲೇಔಟ್ ನಿಂದ ಹೊರಟ ಜಾಥ ರೈಲ್ವೆ ಸ್ಟೇಷನ್, ಮುತ್ತೂರು, ಡಿಕ್ರಾಸ್, ಆರ್.ಎಂ.ಸಿ.ಯಾರ್ಡ್, ತಾಲ್ಲೂಕು ಆಫೀಸ್ ಸರ್ಕಲ್, ಕೊಂಗಾಡಿಯಪ್ಪ ಕಾಲೇಜು ರಸ್ತೆ, ಬಸವಣ್ಣ ದೇವಸ್ಥಾನ, ಅರಳುಮಲ್ಲಿಗೆ ವೃತ್ತ, ಮಾರ್ಕೆಟ್ ಶಾಲೆ, ಹಳೇ ಬಸ್ ನಿಲ್ದಾಣ, ರಂಗಪ್ಪ ಸರ್ಕಲ್ ಮೂಲಕ ವಾಪಾಸ್ ಪ್ರಕಾಶ್ ಲೇಔಟಿಗೆ ಬರಲಾಯಿತು. ದಾರಿಯುದ್ದಕ್ಕೂ ಮತದಾನದ ಜಾಗೃತಿ ಮೂಡಿಸುವ ಚಿಕ್ಕ ಭಾಷಣಗಳನ್ನು ಎಲ್ಲಾ ವೃತ್ತಗಳಲ್ಲೂ ಮಂಜುನಾಥ್ ರೆಡ್ಡಿ, ಮಂಜುನಾಥ್ ನಾಗ್ ಮತ್ತು ಬದ್ರಿ ಮಾಡಿದರು. ಜಾಥಾದಲ್ಲಿ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು.

Edited By

Ramesh

Reported By

Ramesh

Comments