ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳಿಂದ 1040ನೇ ದೇವರ ದಾಸಿಮಯ್ಯ ಜಯಂತ್ಯುತ್ಸವ ಆಚರಣೆ

11 Apr 2019 6:44 AM |
254 Report

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ತಾಲ್ಲೂಕು ಕಛೇರಿಯಲ್ಲಿ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ನವರ 1040ನೇ ಜಯಂತಿಯನ್ನು ಆಚರಿಸಲಾಯಿತು, ತಹಸೀಲ್ದಾರ್ ರಮೇಶ್ ಮತ್ತು ಇತರ ಅಧಿಕಾರಿಗಳು, ಊರಿನ ಪ್ರಮುಖ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು. ಚೌಡೇಶ್ವರಿ ಗುಡಿ ಬೀದಿಯಲ್ಲಿರುವ ಶ್ರೀ ರಾಮಲಿಂಗ ಚಂದ್ರ ಚೌಡೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ಅಭಿಷೇಕ ಮತ್ತು ಹೋಮ, ಅಮ್ಮನವರಿಗೆ ಆರತಿಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಗಳು ಸಂಜೆ ಶ್ರೀ ದಾಸಿಮಯ್ಯನವರ ರಾಜಬೀದಿ ಉತ್ಸವದೊಂದಿಗೆ ಮುಖ್ತಾಯವಾಯಿತು, ಕಾರ್ಯಕ್ರಮದಲ್ಲಿ ಮಂಡಲಿಯ ಎಲ್ಲಾ ಪದಾಧಿಕಾರಿಗಳು, ಊರಿನ ನೇಕಾರ ಕುಲಬಾಂಧಾರು ಭಾಗವಹಿಸಿದ್ದರು. ಮೆರವಣಿಗೆ ದಾರಿಯಲ್ಲಿ ಮುಖ್ಯರಸ್ತೆಯಲ್ಲಿರುವ ಮಹಾಸಭಾ ಗೆಳೆಯರು ಹಾಗೂ ಕೋಟೆ ರಸ್ತೆಯಲ್ಲಿರುವ ನವಚೇತನಾ ಸಂಸ್ಥೆ ಅರವಂಟಿಕೆಗಳನ್ನು ಏರ್ಪಡಿಸಿ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದರು.

ನಗರದ ಮುಖ್ಯ ರಸ್ತೆಯಲ್ಲಿರುವ ಶ್ರೀ ದೇವಾಂಗದ ಸಂಕಣ್ಣನವರ ಚಾರಿಟಬಲ್ ಟ್ರಸ್ಟ್ ವತಿಯಿಂದ ಮದ್ಯಾನ್ಹ 11 ಘಂಟೆಗೆ ಶ್ರೀ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿಯನ್ನು  ಎಲ್ಲಾ ಕುಲಬಾಂಧವರ ಸಮ್ಮುಕದಲ್ಲಿ ಆಚರಣೆಮಾಡಲಾಯಿತು, ಕಾರ್ಯಕ್ರಮದಲ್ಲಿ  ಅಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ನಾಗರಾಜ್, ಖಜಾಂಚಿ ವಿಜಯೇಂದ್ರ ಪ್ರಸಾದ್ ಮತ್ತು ಪದಾಧಿಕಾರಿಗಳು ಹಾಜರಿದ್ದರು, ಮಧ್ಯಾನ್ಹ 12 ಕ್ಕೆ ನಗರದ ಶಾಂತಿನಗರದಲ್ಲಿ ಶ್ರೀ ದಾಸಿಮಯ್ಯ ಮಿತ್ರಮಂಡಲಿ ವತಿಯಿಂದ ಹತ್ತನೇ ವರ್ಷದ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು, ಕಾರ್ಯಕ್ರಮಕ್ಕೆ ದರ್ಗಾ ಜೋಗಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರೂ, ಸ್ಥಳೀಯ ನಾಗರೀಕರೂ, ಊರಿನ ಎಲ್ಲಾ ಪ್ರಮುಖ ಸಂಘ ಸಂಸ್ಥೆಗಳ ಪದಾಧಿಕಾರಿಗಳೂ ಭಾಗವಹಿಸಿದ್ದರು, ಪತ್ರಕರ್ತ ರವಿಕಿರಣ್ ಕಾರ್ಯಕ್ರಮ ನೆಡೆಸಿಕೊಟ್ಟರು, ಅಧ್ಯಕ್ಷ ರಾಮಮೂರ್ತಿ ಮತ್ತು ಮಿತ್ರಮಂಡಲಿಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು. ಕನಕದಾಸ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ನೇಕಾರರ ಸ್ವಸಹಾಯ ಸಂಘದಿಂದ ದಾಸಿಮಯ್ಯ ಜಯಂತ್ಯುತ್ಸವವನ್ನು ಆಚರಿಸಿ ಮಜ್ಜಿಗೆ ಕೋಸಂಬರಿ ವಿತರಿಸಲಾಯಿತು, ಕಾರ್ಯಕ್ರಮದಲ್ಲಿ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು.

ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ದೊಡ್ಡಬಳ್ಳಾಪುರ ಘಟಕದ ವತಿಯಿಂದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ 1040 ನೇ ಜಯಂತಿಯನ್ನು ವತ್ಸಲಾ ಸತ್ಯನಾರಾಯಣ್ ರವರ ಸ್ವಗೃಹದಲ್ಲಿ ಆಚರಣೆ ಮಾಡಲಾಯಿತು. ಕರ್ನಾಟಕ ನೇಕಾರರ ರಕ್ಷಣಾ ವೇದಿಕೆಯ ಅಧ್ಯಕ್ಷ ಎಚ್ ವಿ ಕೃಷ್ಣಕುಮಾರ್, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಲಕ್ಷ್ಮೀ ನಾರಾಯಣ್, ಸಂಘಟನಾ ಕಾರ್ಯದರ್ಶಿ ಎಲ್ ಎಸ್ ವಿಶ್ವನಾಥ್, ಗಿರೀಶ್, ಲಕ್ಷ್ಮೀಕಾಂತ್, ಶಂಕರ್ ಮತ್ತು ಸುಧಾಕರ್, ಮಹಿಳಾ ಘಟಕದ ಅಧ್ಯಕ್ಷೆ ವತ್ಸಲಾ ಸತ್ಯನಾರಾಯಣ್, ಕಾರ್ಯದರ್ಶಿ ಪೂರ್ಣಿಮಾ, ಸಂಘಟನಾ ಕಾರ್ಯದರ್ಶಿ ವಿಶಾಲು ಗಂಗಾಧರ್, ಕಾನೂನು ಸಲಹೆಗಾರರಾದ ಬಿಎಂ ದಾಕ್ಷಾಯಿಣಿ ಅವರು ಭಾಗವಹಿಸಿದ್ದರು.

Edited By

Ramesh

Reported By

Ramesh

Comments