ದೇಶದ ಭವಿಷ್ಯವನ್ನು ಬದಲಾಯಿಸುವ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯ ಮತದಾನ ಮಾಡಿ: ಉಪಮುಖ್ಯಂತ್ರಿ ಡಾ.ಜಿ ಪರಮೇಶ್ವರ್

09 Apr 2019 7:35 PM |
652 Report

ಕೊರಟಗೆರೆ ಏ. 9:- ದೇಶದ ಭವಿಷ್ಯವನ್ನು ಬದಲಾಯಿಸುವ ಚುನಾವಣೆ ಇದಾಗಿದ್ದು ಯಾರು ನಿರ್ಲಕ್ಷ ವಹಿಸದೇ ಮತದಾನ ಮಾಡಬೇಕು ಎಂದು ಉಪಮುಖ್ಯಂತ್ರಿ ಡಾ. ಜಿ ಪರಮೇಶ್ವರ್ ಮನವಿ ಮಾಡಿದರು. ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಕಸಬಾ ವ್ಯಾಪ್ತಿಯ ಕಾಂಗ್ರೇಸ್-ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


      ಮೋದಿ ಸರ್ಕಾರದ ಸಾಮಾಜಿಕ ಅನ್ಯಾಯದ ವಿರುದ್ಧ , ರೈತ ವಿರೋಧ ನೀತಿ ಮತ್ತು ಸಣ್ಣ ಉದ್ಯಮಿದಾರರಿಗೆ ಕಿರುಕುಳ  ಸೇರಿದಂಥೆ ಮೋದಿ ದುರಾಡಳಿತದ ವಿರುದ್ಧ ಹೋರಾಟಬೇಕೆಂಬ ಛಲದಲ್ಲಿ ಎಲ್ಲರ ಒತ್ತಾಯದ ಮೇರೆಗೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ  ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದಿಂದ ದೇವೇಗೌಡರು ಸ್ಪರ್ಧಿಸಿದ್ದು ಇವರಿಗೆ ಎಲ್ಲರೂ ಮತ ಹಾಕಬೇಕು ಎಂದರು. 

      ದೇಶದ ರೈತರಿಗೆ ಮತ್ತು ಬಡವರಿಗೆ ಅಪಾರ ಸೇವೆ ಮಾಡಿದ್ದಾರೆ ಇವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಹೇಮಾವತಿ ನೀರನ್ನು ತಡೆದಿದ್ದರು ಎಂದು ಹೇಳುತ್ತಿರುವ ಬಿಜೆಪಿ ನೀರು ತಡೆದಿರುವ ಯಾವುದಾರೊಂದು ದಾಖಲೆ ತರಲಿ... ಇದು ಸಾಧ್ಯವಿಲ್ಲ ಹೇಮಾವತಿ ನೀರು ತುಮಕೂರಿಗೆ ಬರಲು ದೇವೇಗೌಡರ ಕೊಡುಗೆಯೂ ಇದೆ .... ತುಮಕೂರಿಗೆ 247 ಕಿ.ಮೀ ಯಿಂದ ಹೇಮಾವತಿ ನೀರು ಬರುತ್ತಿದೆ. ಒರ್ವ ಇಂಜಿನೀಯರ್ ಪರಮಶಿವಯ್ಯನನನ್ನು ಕಾರಿನಲ್ಲಿ ಕೂರಿಸಿಕೊಂಡು ನೇತ್ರಾವತಿ ನದಿಯನ್ನು ತಿರುಗಿಸುತ್ತೇವೆ.. ತುಮಕೂರಿಗೆ ನೇತ್ರಾವತಿ ನದಿಯನ್ನೇ ತರುತ್ತೇವೆ ಎಂದ ಬಸವರಾಜು ಯೋಜನೆಯ ಒಂದು ಪ್ರಾಜೆಕ್ಟ್ ನ್ನು ಅಹ ಮಾಡದಂತಹ ರಾಜಕಾರಣೆ ಎಂದು ಲೇವಡಿ ಮಾಡಿದರು.

ಮತಯಾಚನೆಗೆ ಕುಟುಕು:-

      ಮಾಜಿ ಸಂಸದ ಜಿ.ಎಸ್.ಬಸವರಾಜು ಕಾಂಗ್ರೆಸ್ ಪಕ್ಷದಲ್ಲೆ 3 ಭಾರಿ ಸಂಸದರಾಗಿದ್ದರು, ನಂತರ ಕೆಜೆಪಿ ಪಕ್ಷಕ್ಕೆ ಹೋಗಿ ಕಾಂಗ್ರೆಸ್ ಪಕ್ಷ  ಸೇರದಲು ಕದ ತಟ್ಟುದಿದ್ದರು  ಅದು ಸಾಧ್ಯವಾಗುವುದಿಲ್ಲ  ಎಂದು ಅರಿವಿಗೆ ಬಂದ ತಕ್ಞಣದಲ್ಲೇ  ಮತ್ತೆ  ಬಿಜೆಪಿ ಹಾರಿದ್ತದಾರೆ ತಮ್ಮ ವೈಯಕ್ತಿದ ಸಾಧನೆಯನ್ನು ಹೇಳಿ ಮತ ಕೇಳದೇ ಮತದಾರರನ್ನು ನಿಮ್ಮ ಮತ ಮೋದಿಗೆ ಎಂದು ಮತಯಾಚನೆ ಮಾಡುತ್ತಿದ್ದಾರೆ ಸುಳ್ಳುಗಾರ ಮೋದಿ ಮತ್ತು ಬಸವರಾಜುಗೆ ಜನರು ಮತ ಹಾಕುತ್ತಾರೆಯೇ ಎಂದರು.

 
ನಮ್ಮದು 10 % ಸರ್ಕಾರ  ಅಲ್ಲ...!!

       ರಫೇಲ್ ವಿಮಾನ ಅಗರಣ ಮೋದಿ ಸರ್ಕಾರದ ದೊಡ್ಡ ಹಗರಣಗಳಲ್ಲಿ ಒಂದು ಇದನ್ನು ಮರೆ ಮಾಚಲು ನಮ್ಮ ರಾಜ್ಯದಲ್ಲಿ ಮುಖ್ಕುಮಂತ್ರಿ ಹೆಚ್.ಡಿ ಕುಮಾರಸ್ವಾಮಿ  ನೇತೃತ್ವದಲ್ಲಿನಲ್ಲಿ ನಡೆಯುತ್ತಿರುವ ಸರ್ಕಾರವನ್ನು 10 % ಸರ್ಕಾರ  ಎನ್ನುವ ಮೋದಿ  ರಾಜ್ಯದಲ್ಲಿ  ಯಡ್ಯೂರಪ್ಪ ಸರ್ಕಾರ  ಇದ್ದಾಗ ಪ್ರತಿಯೊಂದಕ್ಕೂ ಪರ್ಸೆಂಟ್ ಇಟ್ಟುಕೊಂಡಿದ್ದರೇನೋ  ಅದೇ  ರೀತಿ ನಮ್ಮನ್ನು ಅವರಂತೆಯೇ ಅಂದುಕೊಂಡಿದ್ದಾರೆ ಎಂದು ಗುಡುಗಿದರು.
     ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಮಾತನಾಡಿ, ದೇವೇಗೌಡರು ದೇಶ ಕಂಡ ಮಹಾನ್ ನಾಯಕರು ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವುದು ನಮ್ಮೆಲ್ಲ ಪುಣ್ಯ ಜಿಲ್ಲೆಗೆ ಸಾಕಷ್ಟು ನೀರಾವರಿ ಯೋಜನೆಯ ಅನುಕೂಲಗಳನ್ನು ಮಾಡಿದ್ದರು ಅವರ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ದೇಶದಲ್ಲಿ ಬದಲಾವಣೆಯಾಗಬೇಕಾದರೆ ದೇವೇಗೌಡರು ದೆಹಲಿಯಲ್ಲಿ ಸಂಸದರಾಗಿ ಹೋಗಲೇಬೇಕು ಎಂದರು.
      ಜೆಡಿಎಸ್ ಎಸ್.ಟಿ  ಘಟಕದ ರಾಜ್ಯಾಧ್ಯಕ್ಷ ರಮೆಶ್ ಬಾಬು ಮಾತನಾಡಿ, ನಾಯಕ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಲು ದೆವೇಗೌಡರ ಪರಿಶ್ರಮ ಸಾಕಷು ಅವರಿಗೆ ಮತ ಹಾಕುವ ಸೌಭಾಗ್ಯ ನಾಯಕ ಜನಾಂಗಕ್ಕೆ ಒದಗಿದ್ದು, ಎಲ್ಲರೂಅವರಿಗೆ ಮತಚಲಾಯಿಸಿ ಅವರ ಋಣ ವನ್ನು ತೀರಿಸಬೇಕಿದೆ, ಬಿಜೆಪಿಯ ಶ್ರೀರಾಮುಲು ನಾಯಕ ಜನಾಂಗಕ್ಕೆ ಯಾವ ಕೊಡುಗೆಯನ್ನು ನೀಡದೆ ಕೇವಲ ಜನಾಂಗದ ನಾಯಕ ಎಂದು ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಹರಿಹಾಯ್ದರು.
      ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ ಮಹಲಿಂಗಪ್ಪ, ತಾಲ್ಲೂಕು ಕಾರ್ಯಾಧ್ಯಕ್ಷ ಜೆ.ಎನ್ ನರಸಿಂಹರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವಥ್ ನಾರಾಯಣ್, ಅರಕೆರೆ ಶಂಕರ್,ಸೋಮಶೇಖರ್,ಜಿಲ್ಲಾ ಮಹಿಳಾ ಕಾರ್ಯದರ್ಶಿ ಕವಿತಾ, ತಾಲ್ಲೂಕು ಅಧ್ಯಕ್ಷೆ ಜಯಮ್ಮ, ಜಿ.ಪಂ ಸದಸ್ಯರಾದ ಶಿವರಾಮಯ್ಯ, ಪ್ರೇಮಾ, ಮಾಜಿ ಅಧ್ಯಕ್ಷ ಜಾಲಗಿರಿ ಕೃಷ್ಣಮೂರ್ತಿ, ತುಮುಲ್ ನಿದೇರ್ಶಕರುಗಳಾದ ಕೊಂಡವಾಡಿ ಚಂದ್ರಶೇಖರ್, ಈಶ್ವರಯ್ಯ, ಮಾಜಿ ನಗರಸಭಾ ಸದಸ್ಯ ವಾಲೇಚಂದ್ರಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾಜರ್ುನಯ್ಯ, ಪ.ಪಂ ಸದಸ್ಯರುಗಳಾದ ಕೆ.ಆರ್.ಓಬಳರಾಜು, ಎ.ಡಿ.ಬಲರಾಮಯ್ಯ, ನರಸಿಂಹಪ್ಪ, ಪುಟ್ಟನರಸಯ್ಯ, ಕೆ.ಎನ್ ಲಕ್ಷ್ಮಿನಾರಾಯಣ್ ಮುಖಂಡರಾದ  ಚಂದ್ರಶೇಖರಗೌಡ, ಮುಖಂಡರಾದ ಸೈಯದ್ ಸೈಪುಲ್ಲಾ, ಗಣೇಶ್, ಕೆ.ಎಂ ಸುರೇಶ್, ಸೈಯದ್ ಸೈಪುಲ್ಲಾ, ತುಂಗಾ ಮಂಜುನಾಥ್, ಹನುಮಂತರಾಜು, ಮಯೂರ ಗೋವಿಂದರಾಜು, ತುಂಬಾಡಿ ರಾಮಚಂದ್ರಪ್ಪ, ಸೇರಿದಂತೆ ನೂರಾರು ಜೆಡಿಎಸ್ ಮತ್ತು ಕಾಂಗ್ರೇಸ್ ಕಾರ್ಯಕರ್ತರು ಇದ್ದರು.( ಚಿತ್ರಗಳು ಇವೆ)

Edited By

Raghavendra D.M

Reported By

Raghavendra D.M

Comments