ಮಹಾಘಟಬಂಧನದಲ್ಲಿರೋ ಇಪ್ಪತ್ತೊಂದು ಪಕ್ಷಗಳ ನಾಯಕರುಗಳೇ ದೊಡ್ಡ ಬಾಂಬುಗಳು...ಬಚ್ಚೇಗೌಡ

09 Apr 2019 3:19 PM |
283 Report

ದಿನಾಂಕ 09-04-2019 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ದೊಡ್ಡಬಳ್ಳಾಪುರ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಚಾಲಕರು ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್, ಲೋಕಸಭಾ ಕ್ಷೇತ್ರದ ಉಸ್ತುವಾರಿ ಸಚ್ಚಿದಾನಂದ ನೇತೃತ್ವದಲ್ಲಿ ನಗರದ ಮುತ್ಯಾಲಮ್ಮ ದೇವಸ್ಥಾನದಿಂದ ಹೊರಟು ನಗರದ ಹಳೆ ಸಾರ್ವಜನಿಕ ಆಸ್ಪತ್ರೆಯ ಸರ್ಕಲ್ ವರೆಗೆ ಬೃಹತ್ ರೋಡ್ ಶೋ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,

ಬಾಜಪ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡಿ ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ನಿಂತಿರುವ ಬಚ್ಚೇಗೌಡರು ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದಾರೆ, ಮುಂದಿನ ಬಾರಿಯೂ ಮೋದಿಯೇ ಪ್ರಧಾನಮಂತ್ರಿಯಾಗಲು ಈ ಬಾರಿ ಅವರನ್ನು ಎರಡೂವರೆ ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ದೆಹಲಿಗೆ ಕಳುಹಿಸಬೇಕು, ನೇಕಾರರ ಕಷ್ಟ ನನಗೆ ತಿಳಿದಿದೆ ಹಿಂದೆ ನಮ್ಮ ಸರ್ಕಾರ ಇದ್ದಾಗ ನೇಕಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದೇನೆ, ಕೇಂದ್ರದಿಂದ ನೇಕಾರರಿಗೆ ಬರುವ ಎಲ್ಲ ಸವಲತ್ತುಗಳನ್ನೂ ಬಚ್ಚೇಗೌಡರ ಮುಖಾಂತರ ನಿಮಗೆ ತಲುಪುವಂತೆ ಮಾಡುತ್ತೇನೆ ಎಂದರು.

ನಂತರ ಮಾತನಾಡಿದ ಅಭ್ಯರ್ಥಿ ಬಚ್ಚೇಗೌಡ ನಮಗೆ ದೇಶ ಮೊದಲು,ನಂತರ ಪಕ್ಷ,  ಆಮೇಲೆ ನಾವು, ಈ ದೇಶಕ್ಕೆ ರೈತರು ಎಷ್ಟು ಮುಖ್ಯವೋ ನೇಕಾರರೂ ಅಷ್ಟೇ ಮುಖ್ಯ, ಈ ಊರಿಗೆ ಸದಾನಂದಗೌಡರು ಬಂದಿದ್ದಾಗ ಮನವಿ ನೀಡಿ ಎರಡು ಪ್ರಮುಖ ಮೇಲ್ಸೇತುವೆಗಳನ್ನು ನಿರ್ಮಿಸಿದ್ದೇವೆ, ಆದರೆ ಈಗಿನ ಶಾಸಕರು ಮತ್ತು ಲೋಕಸಭಾ ಸದಸ್ಯರು ಆಯೋಜನೆ ತಮ್ಮದೆಂದು ಫೋಟೋ ಹಾಕಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ, ಇಎಸೈ ಆಸ್ಪತ್ರೆ ಮಂಜೂರು ಮಾಡಿಸಿದ್ದೆವು ಆದರೆ ಕಾಂಗ್ರೆಸ್ ಸರ್ಕಾರ ಆ ಯೋಜನೆಯನ್ನು ಮೂಲೆಗುಂಪು ಮಾಡಿದೆ, ನಿಮಗೆಲ್ಲಾ ತಿಳಿದಿರುವಂತೆ ಈ ದೇಶದ ಮೇಲೆ ಬಾಂಬ್ ಯಾರು ಹಾಕುತ್ತಾರೆ ಅಂತಾ ಗೊತ್ತು, ಆದರೆ ಮಹಾಘಟಬಂಧನದಲ್ಲಿರೋ ಇಪ್ಪತ್ತೊಂದು ಪಕ್ಷಗಳ ನಾಯಕರುಗಳೇ ದೊಡ್ಡ ಬಾಂಬುಗಳು, ಅವರನ್ನೆಲ್ಲಾ ಸೋಲಿಸಿ ಮನೆಗೆ ಕಳುಹಿಸಬೇಕಿದೆ, ದೇಶ ಯಾರ ಕೈಯ್ಯಲ್ಲಿದ್ದರೆ ಸುಭಿಕ್ಷಿತವಾಗಿರುತ್ತದೆ ಎಂದು ನಿಮಗೆ ಗೊತ್ತು, ಅವರ ಕೈ ಲೋಕಸಭೆಯಲ್ಲಿ ಬಲ ಪಡಿಸಲು ನನ್ನನ್ನು ಗೆಲ್ಲಿಸಿ, ನೀರಾವರಿಯೇ ನನ್ನ ಮೊದಲ ಆದ್ಯತೆಯಾಗಿರುತ್ತದೆ ಎಂದರು.   

ಕಾರ್ಯಕ್ರಮದಲ್ಲಿ  ಮಾಜಿ ಶಾಸಕಜೆ.ನರಸಿಂಹಸ್ವಾಮಿ, ಕೆ.ಎಂ.ಹನುಮಂತರಾಯಪ್ಪ, ಮುಖಂಡರಾದಂತ ಬಿ.ಸಿ.ನಾರಾಯಣಸ್ವಾಮಿ, ಅಶ್ವಥ್ ನಾರಾಯಣ್, ಸತ್ಯನಾರಾಯಣ ಗೌಡ, ರಂಗರಾಜು, ಯುವ ಮೋರ್ಚ ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷ ಶಿವು, ಮಹಿಳಾ ಮೋರ್ಚ ಅಧ್ಯಕ್ಷೆ ವತ್ಸಲ, ಪುಷ್ಪಾ ಶಿವಶಂಕರ್, ಗಿರಿಜ, ಉಮಾ ಮಹೇಶ್ವರಿ, ಕಮಲಾ ಶ್ರೀನಿವಾಸ್, ದಾಕ್ಷಾಯಿಣಿ, ವಾಣೀ, ವತ್ಸಲಾ ಸತ್ಯನಾರಾಯಣ್, ನಗರಸಭಾ ಸದಸ್ಯ ಬಿ.ಕೆ.ಮುದ್ದಪ್ಪ, ಡಿ,ಎಂ.ಚಂದ್ರಶೇಖರ್, ರೋಡ್ ಶೋ ಕಾರ್ಯಕ್ರಮದಲ್ಲಿ ಮಂಡಲದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ವಿವಿಧ ಮೋರ್ಚಾದ ಎಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು,ಬೂತ್ ಮಟ್ಟದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಬೂತ್ ಸದಸ್ಯರು,ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Edited By

Ramesh

Reported By

Ramesh

Comments