ಮತದಾನದ ದಿನ ಮನೆಯಿಂದ ಹೊರಗೆ ಬಂದು ಮತದಾನ ಮಾಡಿ ನಮ್ಮ ಕರ್ತವ್ಯ ನಿರ್ವಹಿಸೋಣ

04 Apr 2019 7:22 AM |
933 Report

ಊಟಕ್ಕೆ ಅಂತ ಹೊರಗಡೆ ಬಂದಿದ್ವಿ, ಆಫೀಸ್ ನಿಂದ ಕಾರಿಗೆ ಐದು ನಿಮಿಷ, ಆಮೇಲೆ ಕಾರಿನಿಂದ ಹೋಟೆಲ್ ಹವಾನಿಯಂತ್ರಿತ ಕೊಠಡಿಗೆ ಮತ್ತೈದು ನಿಮಿಷ. ಉರಿ ಬಿಸಿಲಿಗೆ ಸಾಕಾಗಿ ಹೋಯಿತು. ಇನ್ನೊಂದು ಅರ್ಧ ಗಂಟೆ ಅಲ್ಲಿ ನಿಂತರೆ ಜೀವವೇ ಹೋಗುತ್ತದೆಯೇನೋ ಅಂತ ಮಾತಾಡಿ ಕೊಂಡ್ವಿ. ಅಷ್ಟಕ್ಕೇ ಮೋದಿಯವರು ಭಾಷಣ ಮಾಡುತ್ತಿರುವುದು ಟಿವಿಯಲ್ಲಿ ಕಂಡಿತು. ಈ ಮನುಷ್ಯನಿಗೆ 68 ವರ್ಷ ವಯಸ್ಸು. ಅವರು ಭಾಷಣ ಮಾಡುತ್ತಿದ್ದ ಪ್ರದೇಶದಲ್ಲಿ ಆಗ 42° ಸೆಂಟಿಗ್ರೇಡ್. ಆ ತಾಪಮಾನದಲ್ಲಿ ತಾಸುಗಟ್ಟಲೆ ನಿಂತು ಮಾತಾಡುತ್ತಾರೆ. ದೇಶವಿಡಿ ಸುತ್ತಿ ಪ್ರಚಾರ ಮಾಡುತ್ತಾರೆ. ಊಟ, ತಿಂಡಿ, ನಿದ್ದೆ ಯಾವಾಗ ಅಂತ ಕೇಳುವುದಕ್ಕೂ ಒಂದು ಸಂಸಾರ ಇಲ್ಲ, ದೇಶದ ಜನರೇ ನನ್ನ ಸಂಸಾರ ಎನ್ನುತ್ತಾರೆ.

ಒಮ್ಮೆ ವಿಚಾರ ಮಾಡಿ, ಯಾರಿಗೆ ಅಂತ ಅವರು ಇಷ್ಟು ಕಷ್ಟ ಪಡಬೇಕು? ಮುಖ್ಯಮಂತ್ರಿ ಆದರು, ಪ್ರಧಾನ ಮಂತ್ರಿ ಆದರು ಮತ್ತೇನು ಬೇಕು ಬದುಕಲ್ಲಿ? ಮಕ್ಕಳಿಲ್ಲ, ಮೊಮ್ಮಕ್ಕಳಿಲ್ಲ ಆಸ್ತಿ ಪಾಸ್ತಿ ಯಾರಿಗೆ ಅಂತ ಮಾಡಿಡಬೇಕು? ಚುನಾವಣೆಯಲ್ಲಿ ಗೆಲ್ಲಲಿ, ಬಿಡಲಿ ಅವರದ್ದು ಏನು ಹೋಗುತ್ತದೆ? ನೆನಪಿರಲಿ, ಈ‌ ಮನುಷ್ಯ ಇಷ್ಟು ಕಷ್ಟ ಪಡುತ್ತಿರುವುದು ತನಗಾಗಿ ಅಲ್ಲ, ದೇಶಕ್ಕಾಗಿ, ನಮಗಾಗಿ, ನಮ್ಮ ಮಕ್ಕಳ ಭವಿಷ್ಯಕ್ಕಾಗಿ.

ನೀವು ಏನೇ ಹೇಳಿ, ರಾಜಕೀಯ, ಪಕ್ಷ, ಅದು ಇದು ಮಣ್ಣು ಮಸಿ...ಆದರೆ ಇವರು ಸೋತರೆ ನಾವು ಸೋತಂತೆ. ಅವರ ಸೋಲು ನಮ್ಮ ನಷ್ಟ. ನಮಗಾಗಿ ಹಗಲು, ರಾತ್ರಿ, ಮಳೆ,‌ಚಳಿ, ಉರಿ ಬಿಸಿಲು ಎನ್ನದೆ ಒಂದು ಜೀವ ಕಳೆದ ಇಪ್ಪತ್ತು ವರ್ಷಗಳಿಂದ,‌ ಒಂದು ದಿನವೂ ರಜೆ ತಗೆದುಕೊಳ್ಳದೆ, ಅವರಿತ ದುಡಿಯುತ್ತಿದೆ. ದೇವರು ಇವರಿಗೆ ಆರೋಗ್ಯ ಕೊಡಲಿ, ನಮ್ಮನ್ನು ನಮ್ಮ ದೇಶವನ್ನು ಮುಂದೆ ತರಲು ಅವಕಾಶ ಕೊಡಲಿ!

ಮತದಾನದ ದಿನ ಈ ವಿಷಯ ನೆನಪಿರಲಿ. ತಿಂಗಳುಗಟ್ಟಲೆ ಇವರು ನಮಗಾಗಿ ಸುಡುವ ಉರಿ ಬಿಸಿಲಿನಲ್ಲಿ ಕೆಲಸ ಮಾಡಿದ್ದಾರಲ್ಲ, ನಾವು ಮತದಾನದ ದಿನ ಮನೆಯಿಂದ ಹೊರಗೆ ಬಂದು ಹತ್ತು ಗಂಟೆಯೊಳಗೆ ಮತದಾನ ಮಾಡಿ ಬಂದು ನಮ್ಮ ಕರ್ತವ್ಯ ನಿರ್ವಹಿಸೋಣ. At least this much we can do for this man!


#ಸಂಸಾರಿ_ಬಾಬ

Edited By

Ramesh

Reported By

Ramesh

Comments