ಬಿಗ್ ಬ್ರೇಕಿಂಗ್: CM ಕೊಲೆಯ ಸಂಚು ನಡೆಸಲಾಗಿದೆ..!! ಶಾಕಿಂಗ್ ಹೇಳಿಕೆ ಕೊಟ್ಟ ‘ದೋಸ್ತಿ’ ನಾಯಕ​..!!

03 Apr 2019 3:27 PM |
6574 Report

ಲೋಕಸಮರ ಹತ್ತಿರ ಬರುತ್ತಿದ್ದಂತೆ ಒಳಜಗಳಗಳು ಎದ್ದು ಕಾಣುತ್ತಿವೆ.. ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.. ದೋಸ್ತಿಗಳ ಮಧ್ಯೆ ಈಗಾಗಲೇ ಒಡಕು ಪ್ರಾರಂಭವಾಗುತ್ತಿದೆ ಎಂಬುದು ವಿರೋಧ ಪಕ್ಷಗಳ ಮಾತಾಗಿದೆ. ಆದರೂ ಕೂಡ ಮಂಡ್ಯ ಲೋಕಸಭಾ ಸಮರದಿಂದಾಗಿ ಎಲ್ಲಾ ರಾಜಕೀಯ ಗಣ್ಯರು ನಾಲಿಗೆಯನ್ನು ಹರಿಬಿಡುತ್ತಿದ್ದಾರೆ.. ಈ ವಿಷಯವಾಗಿಯೇ ಸಾಕಷ್ಟು ಚರ್ಚೆಗಳು ಆಗುತ್ತಿವೆ.

ಈಗಾಗಲೇ ಈಶ್ವರಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ನೆಗೆದು ಬೀಳ್ತಾರೆ ಎಂಬ ಹೇಳಿಕೆ ಸಿಎಂ ಕೊಲೆಗೆ ನಡೆಸಿರುವ ಸಂಚು ಅಂತಾ ಸಚಿವ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ.  ಶಿವಮೊಗ್ಗದ ಹೆಲಿಪ್ಯಾಡ್​ನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ , ಈಶ್ವರಪ್ಪ ಅವರ ಕೊಳಚೆ ನಾಲಿಗೆಗೆ ಅಂತ್ಯವನ್ನು ಯಡಿಯೂರಪ್ಪನವರೇ ಹಾಡುತ್ತಾರೆ. ಈಶ್ವರಪ್ಪ ಹೇಳಿಕೆಯೇ ಬಿಜೆಪಿ ಸಂಸ್ಕೃತಿಯನ್ನ ತೋರುತ್ತದೆ. ಇದೇನಾ ಬಿಜೆಪಿ, ಆರ್​ಎಸ್​ಎಸ್​ ಸಂಸ್ಕೃತಿ. ಈಶ್ವರಪ್ಪರ ಆಚಾರ ವಿಚಾರ ಅವರ ನಾಲಿಗೆಯಲ್ಲಿ ಪ್ರಚಾರವಾಗುತ್ತಿದೆ. ಅವರ ಹೇಳಿಕೆಯಲ್ಲಿ ಒಂದು ದೊಡ್ಡ ಸಂಚು ಎದ್ದು ಕಾಣುತ್ತಿದೆ. ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಈಶ್ವರಪ್ಪ ಹೇಳಿರುವ ಒಂದೆ ಒಂದು ಮಾತಿಗೆ ರಾಜ್ಯ ರಾಜಕಾರಣ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

Edited By

hdk fans

Reported By

hdk fans

Comments