ಆರ್.ಎಂ.ಸಿ. ಯಾರ್ಡ್ ನಲ್ಲಿ ಬಚ್ಚೇಗೌಡರ ಪರ ಪ್ರಚಾರ….ಮತ ಯಾಚನೆ







ಈ ದಿನ ಬೆಳ್ಳಿಗ್ಗೆ RMC ಮಾರುಕಟ್ಟೆಯಲ್ಲಿ ಪ್ರಧಾನ ಮಂತ್ರಿ ಮೋದಿ ಯವರ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತ ಕರಪತ್ರಗಳನ್ನು ಹಂಚುವ ಮೂಲಕ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಜಪ ಅಭ್ಯರ್ಥಿ ಬಚ್ಚೇಗೌಡರ ಪರವಾಗಿ ಮತ ಯಾಚಿಸಲಾಯಿತು, ವಿಶೇಷವಾಗಿ ಬೆಳಿಗ್ಗೆಯೇ ಮಾರುಕಟ್ಟೆಗೆ ಬಂದಿದ್ದ ಮಹಿಳೆಯರಿಗೆ ಮೊದಿಯವರ ಜನಪರ ಕಾರ್ಯಗಳನ್ನು ತಿಳಿಸಿಕೊಡುವುದರ ಮೂಲಕ ಈ ಕ್ಷೇತ್ರದಲ್ಲಿ ಬಚ್ಚೇಗೌಡರಿಗೆ ಮತ ನೀಡುವುದರೊಂದಿಗೆ ಮೋದಿಯವರ ಕೈ ಬಲಪಡಿಸುವಂತೆ ಕೇಳಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ನಗರಸಭಾಧ್ಯಕ್ಷ ಮುದ್ದಪ್ಪ, ಬೆಂ.ಗ್ರಾ.ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷ ಶಿವು, ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಷ್ಪ ಶಿವಶಂಕರ್, ಖಜಾಂಚಿ ಕಮಲ ಶ್ರೀನಿವಾಸ್, ಜನಪರ ಮಂಜು, ರಾಂಕಿಟ್ಟಿ, ಗೋಪಿ, ಮಂಜುನಾಥ್, ವೆಂಕಟಾಚಲಯ್ಯ, ಶಿವು ಹಿಂದ್ರಿಯ ಮತ್ತಿತರ ಪದಾಧಿಕಾರಿಗಳು ಕಾರ್ಯಕರ್ತರು ಆಗಮಿಸಿದ್ದರು.
Comments