ಚಿಕ್ಕಬಳ್ಳಾಪುರ ಕ್ಷೇತ್ರದ ಲೋಕಸಭಾ ಸ್ಥಾನಕ್ಕೆ 15 ಮಂದಿ ಅಭ್ಯರ್ಥಿಗಳು

30 Mar 2019 11:16 AM |
232 Report

ಸಲ್ಲಿಕೆಯಾಗಿದ್ದ ಒಟ್ಟು 18 ಅಭ್ಯರ್ಥಿಗಳ ನಾಮಪತ್ರಗಳಲ್ಲಿ ಮೂವರು ನಾಮಪತ್ರ ಹಿಂಪಡೆದಿದ್ದು ಉಳಿದ 15 ಮಂದಿ ಚುನಾವಣಾ ಕಣದಲ್ಲಿ ಇದ್ದಾರೆ ಎಂದು ಜಿಲ್ಲಾಧಿಕಾರಿ ಕರೀಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಒಟ್ಟು 25 ಮಂದಿ ಅಭ್ಯರ್ಥಿಗಳು 32 ನಾಮಪತ್ರ ಸಲ್ಲಿಸಿದ್ದು, ಇವುಗಳ ಪರಿಶೀಲನೆ ಬುಧವಾರ ನಡೆಯಿತು. ಇವುಗಳಲ್ಲಿ 18 ನಾಮಪತ್ರಗಳು ಕ್ರಮಬದ್ಧವಾಗಿದ್ದು, 7 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿವರ.

ಡಾ.ಎಂ.ವೀರಪ್ಪ ಮೊಯ್ಲಿ (ಕಾಂಗ್ರೆಸ್)

ಬಿ.ಎನ್‌.ಬಚ್ಚೇಗೌಡ(ಬಿಜೆಪಿ),

ಡಾ. ಸಿ.ಎಸ್‌. ದ್ವಾರಕಾನಾಥ್‌ (ಬಿಎಸ್‌ಪಿ),

ಎಸ್‌.ವರಲಕ್ಷ್ಮೀ(ಸಿಪಿಐಎಂ),

ಜಿ. ಮುನಿರಾಜು (ಉತ್ತಮ ಪ್ರಜಾಕೀಯ ಪಾರ್ಟಿ),

ಖಾದರ್‌ ಸುಬಾನ್‌ ಖಾನ್‌ (ಸಮಾಜವಾದಿ ಜನತಾ ಪಾರ್ಟಿ),

ನಜೀರ್‌ ಅಹಮದ್‌ (ಕರ್ನಾಟಕ ಕಾರ್ಮಿಕರ ಪಕ್ಷ),

ಎನ್‌.ಆರ್‌.ನಾಗೇಶ್‌ರೆಡ್ಡಿ (ಅಂಬೇಡ್ಕರ್‌ ಸಮಾಜ ಪಾರ್ಟಿ),

ನಾಗೇಂದ್ರರಾವ್‌ ಶಿಂದೆ (ಕರ್ನಾಟಕ ಜನತಾ ಪಕ್ಷ),

ಕನಕಲಕ್ಷ್ಮಿ (ಪಕ್ಷೇತರ),

ಎಲ್‌. ನಾಗರಾಜ್‌ (ಪಕ್ಷೇತರ),

ನಸುರುಲ್ಲಾ (ಪಕ್ಷೇತರ),

ಕೆ.ಎಸ್‌.ನಳಿನ (ಪಕ್ಷೇತರ),

ಎಸ್‌. ಪಣಿರಾಜು (ಪಕ್ಷೇತರ),

ಅಬ್ದುಲ್‌ ಕರೀಂ ದೇಸಾಯಿ (ಪಕ್ಷೇತರ)

ಇವರು ಅಧಿಕೃತವಾಗಿ ಕಣದಲ್ಲಿದ್ದಾರೆ.

Edited By

Ramesh

Reported By

Ramesh

Comments