ಕರ್ನಾಟಕ ಛಾಯಾಗ್ರಾಹಕರ ಸಂಘಕ್ಕೆ ದೊಡ್ಡಬಳ್ಳಾಪುರದ ನಾಲ್ವರ ಆಯ್ಕೆ

29 Mar 2019 5:38 PM |
236 Report

ದಿನಾಂಕ 28-3-2019 ಗುರುವಾರ 2019-21 ನೇ ಸಾಲಿಗೆ ರಾಜ್ಯ ಮಟ್ಟದಲ್ಲಿ ನೆಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದೊಡ್ಡಬಳ್ಳಾಪುರದ ನಾಲ್ವರು ಛಾಯಾಗ್ರಾಹಕರಾದಂತ ಕೆ.ಸಂಪತ್ ಕುಮಾರ್, ಹೆಚ್.ಎಸ್.ನಾಗೇಶ್, ಬಿ.ಎನ್.ಉಮಾಶಂಕರ್ ಮತ್ತು ಬಿ.ಎನ್.ರವಿಕುಮಾರ್ ನಿರ್ದೆಶಕರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಮೂವತ್ತೈದು ಮಂದಿ ನಿರ್ದೇಶಕರ ಸ್ಥಾನಕ್ಕೆ ಒಟ್ಟು 77 ಮಂದಿ ಆಕಾಂಕ್ಷಿಗಳು ಸ್ಪರ್ಧಿಸಿದ್ದರು, ಇವರಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಲು 35 ಮಂದಿಗೆ ಮಾತ್ರ ಅವಕಾಶ ಇರುತ್ತದೆ.

ಗೆದ್ದ ಅಭ್ಯರ್ಥಿಗಳ ಕಿರು ಪರಿಚಯ

ಬಿ.ಎನ್.ರವಿಕುಮಾರ್ ಹಾಲೀ ದೊಡ್ಡಬಳ್ಳಾಪುರ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿದ್ದು ಕೆ.ಪಿ.ಎ. ಗೆ ಮೊದಲನೇ ಬಾರಿ ಆಯ್ಕೆಯಾಗಿದ್ದರೆ, ಬಿ.ಎನ್. ಉಮಾಶಂಕರ್ ದೊಡ್ಡಬಳ್ಳಾಪುರ ತಾಲ್ಲೂಕು ಛಾಯಾಗ್ರಾಹಕರ ಸಂಘದಲ್ಲಿ ಕಾರ್ಯದರ್ಶಿಯಾಗಿ, ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದು ಕಳೆದ 9 ವರ್ಷಗಳಿಂದ ಕೆ.ಪಿ.ಎ. ಯಲ್ಲಿ ನಿರ್ದೇಶಕರಾಗಿದ್ದು ಸತತ ನಾಲ್ಕನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ, ದೊಡ್ಡಬಳ್ಳಾಪುರ ತಾಲ್ಲೂಕು ಛಾಯಾಗ್ರಾಹಕರ ಸಂಘವನ್ನು ಕಟ್ಟಿ ಕಾರ್ಯದರ್ಶಿ, ಅಧ್ಯಕ್ಷ ಹಾಗೂ ಸಲಹೆಗಾರನಾಗಿ ಸಂಘವನ್ನು ಮುನ್ನೆಡೆಸಿದ್ದ, ಹಾಲಿ ಕೆ.ಪಿ.ಎ ಯಲ್ಲಿ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್.ಎಸ್. ನಾಗೇಶ್ ಸತತ ಆರನೇ ಬಾರಿಗೆ ಆಯ್ಕೆಯಾಗಿದ್ದಾರೆ, ಊರಿನ ಹಿರಿಯ ಛಾಯಾಗ್ರಾಹಕರೂ, ದೊಡ್ಡಬಳ್ಳಾಪುರ ತಾಲ್ಲೂಕು ಛಾಯಾಗ್ರಾಹಕರ ಸಂಘ ಕಟ್ಟಲು ನಾಗೇಶ್ ಜೊತೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾರ್ಯದರ್ಶಿ, ಅಧ್ಯಕ್ಷ ಹಾಗೂ ಸಲಹೆಗಾರನಾಗಿ ಸಂಘವನ್ನು ಮುನ್ನೆಡೆಸಿದ್ದ, ಛಾಯಾ ರತ್ನ ಬಿರುದಾಂಕಿತ ಕೆ. ಸಂಪತ್ ಕುಮಾರ್ ಸತತವಾಗಿ ಕಳೆದ 28 ವರ್ಷಗಳಿಂದ ಕೆ.ಪಿ.ಎ ಯಲ್ಲಿ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

ಜಯಶಾಲಿಯಾದ ಎಲ್ಲರಿಗೂ  ದೊಡ್ಡಬಳ್ಳಾಪುರ ತಾಲ್ಲೂಕು ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷರುಗಳಾದ ವಿ.ಎಸ್. ರವಿಕುಮಾರ್, ಎಸ್.ಎ.ಭಾಸ್ಕರ್, ಅಂಜನಗೌಡ, ರಾಜು, ವಿರೂಪಾಕ್ಷ ಮತ್ತಿತರರು ಅಭಿನಂದಿಸಿದ್ದಾರೆ

Edited By

Ramesh

Reported By

Ramesh

Comments