ಬಿಗ್ ಬ್ರೇಕಿಂಗ್: ಗೌಡರ ಮೊಮ್ಮಗನ ಕ್ಷೇತ್ರದಲ್ಲಿ `ಜೆಡಿಎಸ್' ಸೇರಲಿದ್ದಾರೆ `ಕಮಲ' ನಾಯಕರು..!

26 Mar 2019 3:20 PM |
11867 Report

ಲೋಕಸಭಾ ಚುನಾವಣೆಯ ಕಾವು ಬಿಸಿಲಿನ ಬೇಗೆಗಿಂತ ಹೆಚ್ಚಾಗುತ್ತಿದೆ…  ಈಗಾಗಲೇ ಅನೇಕರು ಬಿಜೆಪಿಯಿಂದ ಜೆಡಿಎಸ್ ಗೆ, ಜೆಡಿಎಸ್ ನಿಂದ ಬಿಜೆಪಿ ಗೆ ಹಾರಾಟ ಮಾಡುತ್ತಿದ್ದಾರೆ. ಇದೀಗ ಹಾಸನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಜ್ವಲ್ ರೇವಣ್ಣ ಬಲ ಹೆಚ್ಚಾಗಿದ್ದು, ನಾಳೆ ಜಿಲ್ಲಾ ಬಿಜೆಪಿ ನಾಯಕರು ಜೆಡಿಎಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಈ ವಿಷಯವಾಗಿ ಸುದ್ದಿ ಗೋಷ್ಠಿ ನಡೆಸಿದ ಮಾಜಿ ಶಾಸಕ ಕರೀಗೌಡ ಹಾಗೂ ಕಟ್ಟಾಯ್ಯ ಅಶೋಕ್, ನಾಳೆ ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆಯಾಗಲಿದ್ದೇವೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಜಿ ಶಾಸಕ ಕರೀಗೌಡ ಹಾಗೂ ಬಿಜೆಪಿ ಕಾರ್ಯಕರ್ತರು ನಾಳೆ ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆಯಾಗಲಿದ್ದಾರೆ. ಒಂದು ವರ್ಷದಿಂದ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ಕಟ್ಟಾಯ್ಯ ಅಶೋಕ್ ಕೂಡ ಜೆಡಿಎಸ್ ಗೆ ಸೇರ್ಪಡೆಯಾಗಲಿದ್ದಾರೆ. ಒಟ್ಟಾರೆ ಮೊಮ್ಮಗನ ಗೆಲುವಿಗಾಗಿ ಗೌಡರು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ.

Edited By

hdk fans

Reported By

hdk fans

Comments