ಬಿಜೆಪಿ ಗೆ ಬಿಗ್ ಶಾಕ್: ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ ಮುಖಂಡರು….!

26 Mar 2019 10:48 AM |
12354 Report

ಲೋಕ ಸಮರ ಪ್ರಾರಂಭವಾದ ದಿನದಿಂದಲೂ ಕೂಡ ಚುನಾವಣೆ ಕಾವು ಹೆಚ್ಚಾಗಿಯೇ ಇದೆ… ಆದರೆ ಇದೇ ಹೊತ್ತಲೇ ಪಕ್ಷದಿಂದ ಪಕ್ಷಕ್ಕೆ ಹಾರಾಟಗಳು ಕೂಡ  ಪ್ರಾರಂಭವಾಗಿವೆ…  ಲೋಕಸಭೆ ಚುನಾವಣೆ ಹೊತ್ತಲ್ಲೇ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಗೆ ಶಾಕ್ ತಟ್ಟಿದೆ. ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಎಸ್‌ಸಿ ಎಸ್ಟಿ ಮೋರ್ಚಾ ಅಧ್ಯಕ್ಷ ಕೆಂಪ ಓಬಳಯ್ಯ ಸೇರಿದಂತೆ ನೂರಾರು ಮುಖಂಡರು ಜೆಡಿಎಸ್‌ ಸೇರಿಕೊಂಡಿದ್ದಾರೆ. 

ದಾಸರಹಳ್ಳಿ ಶಾಸಕ ಮಂಜುನಾಥ್ಅವರ ಸಮ್ಮುಖದಲ್ಲಿ ಬಿಜೆಪಿ ಮುಖಂಡರು ಜೆಡಿಎಸ್ ಸೇರಿದರು. ಶಾಸಕ ಮಂಜುನಾಥ್ ಪಕ್ಷದ ಶಾಲು ಹೊದಿಸಿ, ಧ್ವಜ ನೀಡಿ ಪಕ್ಷಕ್ಕೆ ಸ್ವಾಗತಿಸಿದ್ರು. ಇನ್ನು ಇದೇ ವೇಳೆ ಮಾತ್ನಾಡಿದ ದಾಸರಹಳ್ಳಿ ಶಾಸಕ ಮಂಜುನಾಥ್​, ಸರ್ಕಾರದ ಅಭಿವೃದ್ಧಿ ಕಾರ್ಯ ಹಾಗೂ ನಮ್ಮ ಪಕ್ಷಾತೀತ ನಿಲುವಿನ ಕಾರಣದಿಂದ ಇಂದು ಬಿಜೆಪಿ ಕಾರ್ಯಕರ್ತರು ಜೆಡಿಎಸ್ಗೆ ಸೇರ್ಪಡೆಯಾಗಿದ್ದಾರೆ ಎಂದಿದ್ದಾರೆ. ಒಟ್ಟಾರೆಯಾಗಿ ಲೋಕಸಭಾ ಚುನಾವಣೆ ಮುಗಿಯುವ ವೇಳೆಗೆ ಯಾರು ಯಾವ ಪಕ್ಷದಲ್ಲಿ ಇರುತ್ತಾರೋ ಗೊತ್ತಿಲ್ಲ.. ಒಟ್ಟಿನಲ್ಲಿ ರಾಜಕೀಯ ಎಂಬ ದೊಂಬರಾಟದಲ್ಲಿ ಯಾರು ಯಾವಾಗ ಎಲ್ಲಿ ಹೇಗೆ ಇರುತ್ತಾರೋ ಗೊತ್ತಿಲ್ಲ..  

Edited By

hdk fans

Reported By

hdk fans

Comments