ಅಂತೂ ಇಂತೂ ಫೈನಲ್ ಆಯ್ತು ದೊಡ್ಡಗೌಡರ ಲೋಕಸಭಾ ಅಖಾಡ..!!

23 Mar 2019 3:22 PM |
91 Report

ಮುಂಬರುವ ಲೋಕಸಭಾ ಚುನಾವಣೆಯ ರಂಗು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಸ್ಪರ್ಧಿಸಲಿದ್ದಾರೆಯೇ ಇಲ್ಲವೇ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ. ದೇವೇಗೌಡರು ಎಲ್ಲಾ ಲೆಕ್ಕಚಾರವನ್ನು ಹಾಕಿಕೊಂಡು ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿರುವ ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು.. ಇದೀಗ ದೇವೆಗೌಡರು  ತುಮಕೂರಿನಿಂದ ಕಣಕ್ಕಿಳಿಯಲಿದ್ದು, ಮಾರ್ಚ್ 25 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಬೆಂಗಳೂರು ಉತ್ತರಕ್ಕಿಂತ ತುಮಕೂರು ಕ್ಷೇತ್ರ ಸೇಫ್ ಎಂದು ಹೇಳಲಾಗಿದೆ. ಪಕ್ಷದ ಎಲ್ಲಾ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ತುಮಕೂರಿನಿಂದ ಸ್ಪರ್ಧಿಸಲು ದೇವೇಗೌಡರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Edited By

hdk fans

Reported By

hdk fans

Comments