ಅರ್ಕಾವತಿ ತೀರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಪ್ರಥಮ ವರ್ಷದ ಬ್ರಹ್ಮರಥೋತ್ಸವ

21 Mar 2019 2:52 PM |
227 Report

ದೊಡ್ಡಬಳ್ಳಾಪುರ ತಾಲ್ಲೂಕಿನ ಶಿವಪುರ ಗ್ರಾಮ ಅರ್ಕಾವತಿ ತೀರದಲ್ಲಿ ವಿರಾಜಮಾನವಾಗಿ ನೆಲೆಸಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಪ್ರಥಮ ವರ್ಷದ ಬ್ರಹ್ಮರಥೋತ್ಸವವು ಇಂದು ಮಧ್ಯಾನ್ಹ 12 ಘಂಟೆಗೆ ವಿಜೃಂಭಣೆಯಿಂದ ನೆಡೆಯಿತು. ಸಾವಿರಾರು ಮಂದಿ ನಗರದ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಆಗಮಿಸಿ ಸ್ವಾಮಿಯವರ ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಹೂ ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ದಿನಂಕ 18-3-2019 ರಿಂದ 22-3-2019 ರವರೆಗೂ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು, ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಇತಿಹಾಸ ಪ್ರಸಿದ್ಧವಾದ ಈ ದೇವಾಲಯ ಭಕ್ತಾದಿಗಳ ಸಹಕಾರದೊಂದಿಗೆ ಹೊಸದಾಗಿ ನವೀಕರಣಗೊಳಿಸಿದ್ದರು, ಹಾಗೂ ಹೊಸದಾಗಿ ರಥವನ್ನು ನಿರ್ಮಿಸಿ ಅದರಲ್ಲಿ ಶ್ರೀ ಸ್ವಾಮಿಯವರ ರಥೋತ್ಸವ ನೆಡೆಸಲಾಯಿತು.

Edited By

Ramesh

Reported By

Ramesh

Comments