ಕಮಲ ದೀಪೋತ್ಸವ







ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಎಂ.ಕೆ.ವತ್ಸಲ ಜಗನ್ನಾಥ್ ಮನೆಯಲ್ಲಿ ಇಂದು ಕಮಲ ದೀಪೋತ್ಸವ ಆಚರಿಸಲಾಯಿತು, ಅರಳುಮಲ್ಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ದೊಡ್ಡಬಳ್ಳಾಪುರ ನಗರ ಮಹಿಳಾ ಮೋರ್ಚ ಅಧ್ಯಕ್ಷೆ ಬಿ.ಎ.ಗಿರಿಜ, ಕರ್ನಾಟಕ ನೇಕಾರ ರಕ್ಷಣಾ ವೇದಿಕೆ ದೊಡ್ಡಬಳ್ಳಾಪುರ ಘಟಕ ಅಧ್ಯಕ್ಷೆ ವತ್ಸಲಾ ಸತ್ಯನಾರಾಯಣ್, ಪದ್ಮಶಾಲಿ ಮಹಿಳಾ ಸಂಘ ಅಧ್ಯಕ್ಷೆ ಗೀತಾ ಶ್ರೀನಿವಾಸ್, ಮಹಿಳಾ ಮೋರ್ಚ ಕರೇನಹಳ್ಳೀ ವಿಭಾಗದ ಸದಸ್ಯೆಯರು ಮತ್ತು ಸುತ್ತ ಮುತ್ತಲಿನ ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅರಳುಮಲ್ಲಿಗೆ ಗ್ರಾ.ಪಂ.ಅಧ್ಯಕ್ಷೆ ಪಾರ್ವತಿ ಮಾತನಾಡಿ ನಮ್ಮ ಗ್ರಾಮ ಪಂಚಾಯತಿಯಲ್ಲಿ ಬರುವ ಅನುದಾನಗಳೆಲ್ಲವೂ ಕೇಂದ್ರದಿಂದ ಬಂದಂತವುಗಳು, ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಬರುವುದಿಲ್ಲ ಆದರೆ ಇಲ್ಲಿನ ಸರ್ಕಾರ ಅದೆಲ್ಲವೂ ನಾವು ಕೊಡುತ್ತಿರುವುದು ಎಂದು ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಕಳೆದ ಐದು ವರ್ಷಗಳಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ಮಹಿಳೆಯರಿಗಾಗಿಯೇ ಇರುವ ಯೋಜನೆಗಳಾದ ಪ್ರಧಾನಮಂತ್ರಿ ಉಜ್ವಲ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಸ್ವಸ್ಥ ಭಾರತಕ್ಕಾಗಿ ಮಾಡಿರುವ ಆಯುಷ್ಮಾನ್ ಭಾರತ ವಿಮಾ ಯೋಜನೆ, ಜನೌಷಧಿ ಕೇಂದ್ರ ಸೇರಿದಂತೆ ಮತ್ತಿತರ ಯೋಜನೆಗಳ ಕಿರುಪರಿಚಯವನ್ನು ವತ್ಸಲ ಮತ್ತು ಶಾಂತ ಮಾಡಿಕೊಟ್ಟರು. ಸ್ವಸ್ಥ ಮತ್ತು ಸ್ವಚ್ಚ ಭಾರತಕ್ಕಾಗಿ ನರೇಂದ್ರ ಮೋದಿಯವರನ್ನು ಮತ್ತೊಂಮ್ಮೆ ಪ್ರಧಾನಮಂತ್ರಿ ಮಾಡಲು ಮುಂದಿನ ತಿಂಗಳು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ಬೆಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ ಸಹಕಾರ ನೀಡಲು ಕೋರಲಾಯಿತು.
Comments