ನೇಕಾರಿಕೆ ಮಾಡುವ ಎಲ್ಲಾ ಸಮಾಜಗಳ ಮಹಿಳೆಯರ ಸಂಘಟನೆಗೆ ಕರೆ

21 Mar 2019 7:04 AM |
807 Report

ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ (ರಿ) ವತಿಯಿಂದ ದೊಡ್ಡಬಳ್ಳಾಪುರ ನಗರದಲ್ಲಿ ದಿನಾಂಕ18/3/2019 ರಂದು ಅಧ್ಯಕ್ಷರಾದ ವತ್ಸಲಾ ಸತ್ಯನಾರಾಯಣ್ ಸ್ವಗೃಹದಲ್ಲಿ ನೇಕಾರರ ಸಭೆ ಆಯೋಜಿಸಲಾಗಿತ್ತು. ಮಹಿಳಾ ಘಟಕದ ವತಿಯಿಂದ ಮುಂದಿನ ದಿನಗಳಲ್ಲಿ ನೇಕಾರ ಸಮಾಜದ ಹಾಗೂ ನೇಕಾರಿಕೆ ಮಾಡುವಂತಹ ಎಲ್ಲಾ ಸಮಾಜಗಳ ಮಹಿಳೆಯರನ್ನು ನಮ್ಮ ಸಂಘಟನೆಗೆ ಬರಮಾಡಿಕೊಂಡು ಮಹಿಳಾ ಘಟಕವನ್ನು ಬಲಿಷ್ಠಗೊಳಿಸುವ ಮೂಲಕ ಸಂಘಟನೆಗೆ ದುಡಿಯುವ ಕೆಲಸ ಮಾಡಬೇಕು, ಹಾಗೂ ಸಾಕಷ್ಟು ಬಡ ನೇಕಾರರ ಸಮಸ್ಯೆಗಳಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಸಿಗುವಂತಹ ಎಲ್ಲಾ ರೀತಿಯ ಸವಲತ್ತುಗಳನ್ನು ಆಯಾ ವಿಭಾಗಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ನೇಕಾರರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಮಹಿಳೆಯರು ಈ ಸಂಘಟನೆ ವತಿಯಿಂದ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಮುಂದುವರೆಯಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಎಲ್ಲಾ ಪದಾಧಿಕಾರಿಗಳು ರಾಜ್ಯಾಧ್ಯಕ್ಷ ಎಚ್ ಎಸ್ ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದಕ್ಕೆ ಸ್ಪಂದಿಸಿದ ಮಾತನಾಡಿದ ರಾಜ್ಯಾಧ್ಯಕ್ಷ H.S.ಕುಮಾರಸ್ವಾಮಿ ಮಹಿಳಾ ಘಟಕಕ್ಕೆ ಬೇಕಾದಂತಹ ಎಲ್ಲಾ ರೀತಿಯ ಸಹಕಾರ ಪ್ರೋತ್ಸಾಹವನ್ನು ಕೊಟ್ಟು ಮಹಿಳಾ ಘಟಕವನ್ನು ಬಲಶಾಲಿಯಾಗಿ ಬಲಿಷ್ಠ ಗೊಳಿಸುವುದಕ್ಕೆ ಹೋರಾಡಲು ಸದಾ ಸಿದ್ಧ ಎಂದು ಮಹಿಳಾ ಘಟಕಕ್ಕೆ ಶುಭ ಹಾರೈಸಿದರು. ಈಗಾಗಲೇ ರಾಜ್ಯದಾದ್ಯಂತ ಮಹಿಳಾ ಸದಸ್ಯರುಗಳ ಅಭಿಯಾನ ಆರಂಭವಾಗಿದೆ ಆಸಕ್ತರು ಮಹಿಳಾ ಘಟಕದ ಪದಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸದಸ್ಯತ್ವನ್ನು ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.  ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಮಹಿಳಾ ಘಟಕ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು

 

Edited By

Ramesh

Reported By

Ramesh

Comments