ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ ಸ್ಯಾಂಡಲ್ವುಡ್’ನ ಈ ಸ್ಟಾರ್ ನಟಿ..!!

20 Mar 2019 1:32 PM |
6703 Report

ಲೋಕ ಸಮರದ ಪ್ರಚಾರದ ಕಾವು ಈಗಾಗಲೇ ರಂಗೇರುತ್ತಿದೆ.. ಎಲ್ಲೆಡೆ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ. ಎಲ್ಲಾ ಕ್ಷೇತ್ರಗಳಿಗೂ ಕೂಡ ಪ್ರಬಲ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಈ ಬಾರಿಯೂ ಕೂಡ ಸ್ಯಾಂಡಲ್ ವುಡ್ ಸ್ಟಾರ್ ನಟ ನಟಿಯರು ಅಭ್ಯರ್ಥಿಗಳ ಪರ ಪ್ರಚಾರವನ್ನು ಮಾಡುತ್ತಿದ್ದಾರೆ. ಸುಲಮತಾ ಪರವಾಗಿ ಯಶ್ ಮತ್ತು ದರ್ಶನ್ ಈಗಾಗಲೇ ಪ್ರಚಾರ ಶುರುಮಾಡಿದ್ದಾರೆ.

ಶಿವಮೊಗ್ಗದ ಜೆಡಿಎಸ್ ಅಭ್ಯರ್ಥಿಯಾದ  ಮಧುಬಂಗಾರಪ್ಪ ಪರವಾಗಿಯೂ ಕೂಡ ನಟಿ ಪೂಜಾಗಾಂಧಿ ಪ್ರಚಾರವನ್ನು ಕೈಗೊಳ್ಳಲಿದ್ದಾರೆ.. ನಟಿ ಪೂಜಾಗಾಂಧಿ ಈಗಾಗಲೇ ಜೆಡಿಎಸ್​ ಪರ ಪ್ರಚಾರಕ್ಕೆ ಭರ್ಜರಿ ತಯಾರಿ ನಡೆಸಿದ್ದು ಏಪ್ರಿಲ್.1 ರಿಂದ ಶಿವಮೊಗ್ಗದಲ್ಲಿ ಮಧುಬಂಗಾರಪ್ಪ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಬಳಿಕ ರಾಜ್ಯಾದ್ಯಂತ ನಡೆಯೋ ಜೆಡಿಎಸ್ ಯಾತ್ರೆಯಲ್ಲಿ ಮಳೆಹುಡುಗಿ ಭಾಗವಹಿಸಲಿದ್ದಾರೆ ಈಗಾಗಲೇ ಎಲ್ಲೆಡೆ ಚುನಾವಣಾ ಕಾವು ಜೋರಾಗಿದ್ದು ಪೂಜಾಗಾಂಧಿ ಎಂಟ್ರಿ ಶಿವಮೊಗ್ಗ ಚುನಾವಣಾ ಪ್ರಚಾರವನ್ನು ಇನ್ನಷ್ಟು ರಂಗೇರಿಸಲಿದೆ.

 

Edited By

hdk fans

Reported By

hdk fans

Comments