ನನ್ನನ್ನು ಯಾರಿಂದಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದ ಜೆಡಿಎಸ್ ನಾಯಕ..!! ಯಾರ್ ಗೊತ್ತಾ..?

15 Mar 2019 11:03 AM |
2362 Report

ಈಗಾಗಲೇ ಲೋಕಸಭಾ ಚುನಾವಣೆಯ ದಿನಾಂಕ ನಿಗಧಿಯಾಗಿರುವ ಹಿನ್ನಲೆಯಲ್ಲಿಯೇ ಟಿಕೆಟ್ ವಿಚಾರವಾಗಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಇದೇ ಹಿನ್ನಲೆಯಲ್ಲಿ ಜೆಡಿಎಸ್ ಸಂಸದರ ಮಾತೊಂದು ತೀವ್ರ ಚರ್ಚೆಗೆ ಒಳ ಪಡುತ್ತಿದೆ. ಮಂಡ್ಯದಲ್ಲಿ ಗುರುವಾರ ಜೆಡಿಎಸ್‌ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ 'ದೇವೇಗೌಡರನ್ನು ನಂಬಿ ಯಾರೂ ಬದುಕಿಲ್ಲ' ಎಂದು ಸಂಸದ ಶಿವರಾಮೇಗೌಡರು ಮಾತಿನ ಭರದಲ್ಲಿ ಹೇಳಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.. ಆದರೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಈ ರೀತಿಯಾಗಿ ಬಾಯಿ ತಪ್ಪಿ ಹೇಳಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಬಿಜೆಪಿಯವರ ಜೊತೆ ಸೇರಿಕೊಂಡಿದ್ದಾರ ಎಂಬ ಮಾಧ್ಯಮದವರ ಪ್ರಶ್ನೆಗೆ ನನ್ನನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ನಾನು ಜೆಡಿಎಸ್‌ ಕುಟುಂಬದವನಾಗಿದ್ದೇನೆ' ಎಂದು ಹೇಳಿದವನಾಗಿದ್ದಾನೆ.. ಬಾಯಿತಪ್ಪಿ ಜೆಡಿಎಸ್‌ಗೆ ನನ್ನ ಮಾರಿಕೊಂಡಿದ್ದೇನೆ. ದೇವೇಗೌಡರನ್ನು ನಂಬಿ ಯಾರೂ ಬದುಕಿಲ್ಲ ಎಂದು ಬಾಯಿತಪ್ಪಿ ಶಿವರಾಮಗೌಡರು ಹೇಳಿದರು. ಇದೇ ಸಮಯದಲ್ಲಿ ಕುಮಾರಸ್ವಾಮಿಯವರು ತಮ್ಮ ಭಾಷಣದ ಸಮಯದಲ್ಲಿ ಸ್ಪಷ್ಟನೆ ನೀಡಿ, 'ನಮ್ಮ ಶಿವರಾಮೇಗೌಡರು ಏನೋ ಹೇಳಿದ್ರು ಅಂಥ ಮಾಧ್ಯಮಗಳಲ್ಲಿ ಬರ್ತಿದೆ. ಅವರು ಉದ್ವೇಗದಲ್ಲಿ ಏನು ಮಾತಾಡ್ತಾ ಇದೀನಿ ಅಂತಾ ಗೊತ್ತಾಗದೇ ತೊದಲ್ತಾರೆ. ದೇವೇಗೌಡರನ್ನು ನಂಬಿದವರು ಉದ್ಧಾರ ಆಗಿಲ್ಲ ಅಂತಾ ಮಾತು ತಪ್ಪಿ ಹೇಳಿದ್ರು. ಅಷ್ಟೇ ಸಾಕಲ್ಲ ನಮ್ಮ ಮಾಧ್ಯಮದವರಿಗೆ. ಅದನ್ನೇ ದೊಡ್ಡದು ಮಾಡ್ತಾ ಇದೀರಾ' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಿಳಿಸಿದರು.

Edited By

hdk fans

Reported By

hdk fans

Comments