ಇದೊಂದು ಒಳ್ಳೆಯ ಮಾಹಿತಿ!

ನಗರಗಳಲ್ಲಿರುವ ಬಹುಪಾಲು ಜನರು ಪ್ಲಾಸ್ಟಿಕ್ ಪ್ಯಾಕಿಲ್ಲಿರುವ ಹಾಲನ್ನು ಮತ್ತು ಮೊಸರನ್ನು ಖರೀದಿಸುತ್ತಾರಷ್ಟೆ. ಆ ಪ್ಲಾಸ್ಟಿಕ್ ಕವರನ್ನು ಹೆಚ್ಚಿನ ಜನರು ಅದರ ಒಂದು ತುದಿಯನ್ನು ಕತ್ತರಿಯಿಂದ ಕತ್ತರಿಸಿ, ಅಂದರೆ ತುದಿಯ ತುಣುಕನ್ನು ಪ್ರತ್ಯೇಕ ಮಾಡಿ, ಓಪನ್ ಮಾಡುತ್ತಾರೆ. ಕವರಿನ ಮುಖ್ಯ ಭಾಗ ರಿಸೈಕ್ಲಿಂಗ್ ಪ್ರಕ್ರಿಯೆಗೆ ಹೋಗಿ ಸೇರುವ ಸಾಧ್ಯತೆ ಹೆಚ್ಚಿರುತ್ತದೆ, ನಿಜ. ಆದರೆ ಕತ್ತರಿಸಲ್ಪಟ್ಟಿರುವ ಸಣ್ಣ ತುಣುಕು ಮಾತ್ರ ಕಸದಲ್ಲಿ ಸೇರುತ್ತದೆ; ಅದು ರಿಸೈಕ್ಲಿಂಗ್ ಪ್ರಕ್ರಿಯೆಗೆ ಸಿಗದೆ ಶಾಶ್ವತವಾಗಿ ಭೂಮಿಯ ಮೇಲೆ ಅದೇ ರೂಪದಲ್ಲಿ ಉಳಿಯುತ್ತದೆ.
ದಿನವೊಂದಕ್ಕೆ ಇಂಥ ತುಣುಕುಗಳು ಬೆಂಗಳೂರೊಂದರಲ್ಲಿಯೇ ಲಕ್ಷಗಟ್ಟಲೆ ಪ್ರಮಾಣದಲ್ಲಿ ಪ್ಲಾಸ್ಟಿಕ್ ಕಸವಾಗಿ ಸೇರಿ ಪರಿಸರಮಾಲಿನ್ಯಕ್ಕೆ ಪ್ರಧಾನ ಕಾರಣವಾಗುತ್ತಿದೆ. ನಾವು ಮನಸ್ಸು ಮಾಡಿದರೆ ಇದನ್ನು ಸುಲಭವಾಗಿ ತಪ್ಪಿಸಬಹುದು. ಹಾಲಿನ ಪ್ಲಾಸ್ಟಿಕ್ ಕವರನ್ನು ಸೂಜಿ/ಪಿನ್ ಮೂಲಕ ರಂಧ್ರ ಮಾಡಿ ಹಾಲನ್ನು ಪಾತ್ರೆಗೆ ಸುರಿದುಕೊಳ್ಳಬಹುದು; ಅಥವಾ ತುಣುಕನ್ನು ಬೇರ್ಪಡಿಸದೆಯೇ ಕವರನ್ನು ಕೊಯ್ಯಬಹುದು. ಆಗ ಪ್ಲಾಸ್ಟಿಕ್ ತುಣುಕಿನ ಪ್ರಶ್ನೆಯೇ ಹುಟ್ಟುವುದಿಲ್ಲ. ಈಗಾಗಲೇ ಹಲವರು ಹೀಗೆ ಮಾಡುತ್ತಿರಬಹುದು. ಉಳಿದವರೂ ಈ ಕ್ರಮವನ್ನು ಅನುಸರಿಸಿದರೆ ಒಳ್ಳೆಯದು ಎಂದು ವಿನಮ್ರ ಸಲಹೆ. ಸಣ್ಣ ಸಣ್ಣ ಸಂಗತಿಗಳಿಂದಲೇ ಅಲ್ಲವೆ ಕ್ರಾಂತಿಗೆ ನಾಂದಿ ಮೊಳಗುವುದು. ಹಾಲಿನ ಪ್ಯಾಕೇಟ್ ಒಂದೇ ಅಲ್ಲದೆ chips,snacks, ನಾವು ಪ್ರತಿ ತಿಂಗಳು ತರುವ ದಿನಸಿ ಸಾಮಾನು, ಹುಡುಕ್ತಾ ಹೋದ್ರೆ ಪ್ಲಾಸ್ಟಿಕ್ ಪ್ಯಾಕೇಟ್ ಬಳಕೆ ಎಲ್ಲೆಲ್ಲಿ ಮಾಡ್ತೀವೋ ಅಲ್ಲೇಲ್ಲಾ ಇದೇ ಕ್ರಮ ಅನುಸರಿಸಿದ್ರೆ ಒಳ್ಳೆಯದು
Comments