ದೊಡ್ಡಬಳ್ಳಾಪುರಕ್ಕೆ ನೇಕಾರ ಕಪ್...ಡೈಮಂಡ್ ಕ್ರಿಕೆಟ್ ಕ್ಲಬ್ ಪ್ರಥಮ.... ಗಾಯತ್ರಿಪೀಠ ತೃತೀಯ

04 Mar 2019 1:58 PM |
400 Report

ಹಾಸನದಲ್ಲಿ ನೆಡೆದ ರಾಷ್ಟ್ರ ಮಟ್ಟದ ನೇಕಾರ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಮ್ಮ ಊರಿನ ಮೂರು ತಂಡಗಳು ಭಾಗವಹಿಸಿದ್ದು ಅದರಲ್ಲಿ ದೊಡ್ಡಬಳ್ಳಾಪುರದ ಅನಿಲಕುಮಾರ್ ನೇತೃತ್ವದ ಡೈಮಂಡ್ ಕ್ರಿಕೆಟ್ ಕ್ಲಬ್ ತಂಡವು ಪಾರಿತೋಷಕ ಮತ್ತು ರೂ.50,000/- [ಐವತ್ತುಸಾವಿರ] ನಗದು ಹಣದೊಂದಿಗೆ ಮೊದಲನೆ ಸ್ಥಾನ ಪಡೆದರೆ, ಸ್ಥಳೀಯ ಹಾಸನ ಯುವ ಬ್ರಿಗೇಡ್ ತಂಡವು ಪಾರಿತೋಷಕ ಮತ್ತು ರೂ.2೦,೦೦೦/- ನಗದು ಪಡೆದು ರನ್ನರ್ ಅಪ್ ಸ್ಥಾನ ಪಡೆಯಿತು, ಲಾರ ವೆಂಕಟೇಶ್ ನೇತೃತ್ವದ ಗಾಯತ್ರಿಪೀಠ ತಂಡವು ಪಾರಿತೋಷಕ ಮತ್ತು ರೂ. 10,000 [ಹತ್ತು ಸಾವಿರ] ನಗದು ಹಣದೊಂದಿಗೆ ಮೂರನೇ ಸ್ಥಾನ ಗಳಿಸಿದ್ದಾರೆ.

ದಿನಾಂಕ 2 ಮತ್ತು 3 ಶನಿವಾರ, ಭಾನುವಾರದಂದು ಹಾಸನದಲ್ಲಿ ರಾಷ್ಟ್ರ ಮಟ್ಟದ ನೇಕಾರ ಕಪ್ ಕ್ರಿಕೆಟ್ ಪಂದ್ಯಾವಳಿಗಳನ್ನು ರಾಜ್ಯ ನೇಕಾರ ಯುವ ಬ್ರಿಗೇಡ್ [ರಿ.] ಉದ್ಘಾಟನೆಯ ಅಂಗವಾಗಿ, ನೇಕಾರವಾಣಿ ಮತ್ತು ನೇಕಾರ ಸಂಪದ ಪತ್ರಿಕೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು, ಹಾಸನ ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಸರ್ಕಾರಿ ವಾಣಿಜ್ಯ ಮತ್ತು ಕಲಾ ಕಾಲೇಜಿನ ಮೈದಾನಗಳಲ್ಲಿ ನೆಡೆದ ಪಂದ್ಯಗಳಲ್ಲಿ ದೊಡ್ಡಬಳ್ಳಾಪುರದ ಎರಡು ತಂಡಗಳು ಪ್ರಥಮ ಮತ್ತು ತೃತೀಯ ಸ್ಥಾನ ಗಳಿಸಿ ಊರಿನ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ನಗರದ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ವತಿಯಿಂದ ಗಾಯತ್ರಿಪೀಠ ತಂಡವನ್ನು ಕಳುಹಿಸಿ ಕೊಡಲಾಗಿತ್ತು, ಗೆದ್ದ ತಂಡಗಳನ್ನು ನಗರದ ಹಿರಿಯ ವಾಣಿಜ್ಯೋದ್ಯಮಿ ಹೆಚ್.ಪಿ. ಶಂಕರ್ ದೇವಾಂಗ ಮಂಡಲಿ ಮಾಜಿ ಅಧ್ಯಕ್ಷ ವಿ.ತಿಮ್ಮಶೆಟ್ಟಪ್ಪ, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ಆರೂಡಿ ರಮೇಶ್, ಖಜಾಂಚಿ ದೇ.ರಾ.ನರಸಿಂಹಮೂರ್ತಿ ಮತ್ತು ಶ್ರೀ ಶಿರಡಿ ಸಾಯಿ ಮಂದಿರ ಸೇವಾ ಟ್ರಸ್ಟ್ ಖಜಾಂಚಿ ಕೆ.ಎನ್.ದೇವರಾಜ್ ಅಭಿನಂದಿಸಿದ್ದಾರೆ.

Edited By

Ramesh

Reported By

Ramesh

Comments