ಕನ್ನಡ ಜಾಗೃತಿ ವೇದಿಕೆ ದೊಡ್ಡಬಳ್ಳಾಪುರ ಘಟಕದ ನೂತನ ಅಧ್ಯಕ್ಷರಾಗಿ ಎಂ.ನಾಗರಾಜ್

04 Mar 2019 10:20 AM |
289 Report

ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಮಂಜುನಾಥ್ ದೇವ್ ದಿನಾಂಕ ೩-೩-೨೦೧೯ ರಿಂದ ಜಾರಿಗೆ ಬರುವಂತೆ ಎಂ.ನಾಗರಾಜ್ ರವರನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಡ ಜಾಗೃತಿ ವೇದಿಕೆ ಸಂಘಟನೆಗೆ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ, ಬಹುಮುಖ ಪ್ರತಿಭೆಯಾದ ನಾಗರಾಜ್ ಈಗಾಗಲೇ ನಗರದ ಶ್ರೀ ದೇವಾಂಗ ಸಂಕಣ್ಣನವರ ಸೇವಾ ಟ್ರಸ್ಟ್ ನಲ್ಲಿ ಕಾರ್ಯದರ್ಶಿಯಾಗಿ ಮತ್ತು ಕರ್ನಾಟಕ ನೇಕಾರ ರಕ್ಷಣಾ ವೇದಿಕೆ ದೊಡ್ಡಬಳ್ಳಾಪುರ ಘಟಕದ ಉಪಾಧ್ಯಕ್ಷರಾಗಿ, ತಮ್ಮ ಬಿಡುವಿನ ವೇಳೆಯಲ್ಲಿ ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ್ ರವರನ್ನು ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್ ಮತ್ತು ಕಾರ್ಯದರ್ಶಿ ಆರೂಡಿ ರಮೇಶ್ ಅಭಿನಂದಿಸಿದ್ದಾರೆ.

Edited By

Ramesh

Reported By

Ramesh

Comments