ಯುದ್ಧ ಬೇಡ! ಶಾಂತಿ ಬೇಕು!... ಸಿದ್ದೂ ಎಂಬ ಅವಿವೇಕಿ!

02 Mar 2019 6:32 PM |
317 Report

ಹೌದು, ಯಾರಿಗೆ ಬೇಕಿದೆ ಯುದ್ಧ? ಆದರೆ ಯುದ್ಧ ಬೇಡ ಎನ್ನುವವರೇ ತಮ್ಮ ಕೈಗಳನ್ನು ರಕ್ತದ ಮಡುವಿನಲ್ಲಿ ಅದ್ದಿ ಕೂತಿರಬಾರದಲ್ಲ? ಸಿದ್ದು ಎಂಬ ಜೋಕರ್, ತನ್ನ ಜಾಲತಾಣದ ಪ್ರೊಫೈಲ್ ಚಿತ್ರವಾಗಿ ಇಬ್ಬರು ಘಂಡಿಗಳ ಫೋಟೋ ಹಾಕಿದ್ದಾನೆ. ಬೂಟು ನೆಕ್ಕಬೇಕಾದ ಗುಲಾಮಗಿರಿತನದಲ್ಲಿ ಇದೆಲ್ಲ ಸಹಜ ಎನ್ನೋಣ! ಆದರೆ ಆತ ಅಲ್ಲಿ ಹೇಳುತ್ತಿರುವುದೇನು ಗೊತ್ತೆ? ಯುದ್ಧ ಬೇಡ! ಯುದ್ಧೋನ್ಮಾದದಿಂದ ಕುಣಿಯುತ್ತಿರುವ ನಾಯಕನಿಗೆ ಬಲಿ ಬೀಳಬೇಡಿ! - ಎಂದು.

ಸರಿ, ಸ್ವಲ್ಪ ಇತಿಹಾಸದ ಪುಟಗಳನ್ನು ತಿರುವಿಹಾಕೋಣವೇ? ಬಾಂಗ್ಲಾ ದೇಶದ ಉದಯವಾಯಿತು. ಅದೇನೂ ಶಾಂತಿ ಮಾತುಕತೆಯಿಂದ ಹುಟ್ಟಿದ ದೇಶವಲ್ಲ. ಪಾಕಿಸ್ತಾನದ ಜೊತೆ ಯುದ್ಧ ಮಾಡಿ ಪಡೆದುಕೊಂಡ ಸ್ವಾತಂತ್ರ್ಯ ಅದು. ಬಾಂಗ್ಲಾದಲ್ಲಿ ಕಷ್ಟ ಅನುಭವಿಸುತ್ತಿದ್ದವರು ಅಲ್ಲಿಯ ಬೆಂಗಾಲಿಗಳು. ಬಹುತೇಕ ಬೆಂಗಾಲಿ ಮುಸ್ಲಿಮರು. ಭಾರತದೊಡನೆ ಅವರ ತಕರಾರೇನೂ ಇರಲಿಲ್ಲ. ಆದರೂ ನಾವೇ ಮುಂದಾಗಿ (ಗಮನಿಸಿ: ಬಾಂಗ್ಲಾ ಯುದ್ಧದ ಪ್ರಸ್ತಾಪ ಬಂದಾಗ ಗುಲಾಮರ ಇಡೀ ಗುಂಪೇ ಇಂದಿರಾ ಘಂಡಿಯ ಭಜನೆ ಮಾಡುತ್ತದೆ. ಆಗ ಜನರಲ್ ಆಗಿದ್ದವರು ಯಾರು ಎಂಬುದೂ ಇವಕ್ಕೆ ಗೊತ್ತಿಲ್ಲ) ಯುದ್ಧ ಮಾಡಿ, ಪಾಕಿಸ್ತಾನದ ಜೊತೆ ಹೋರಿ ಒಂದು ಹೊಸ ದೇಶ ಹುಟ್ಟಿಸಿದೆವು. ಬೆಂಗಾಲಿಗಳಿಗೆ ಒಂದು ಹೊಸ ರಾಷ್ಟ್ರ ಕಟ್ಟಿ ಕೊಟ್ಟೆವು. ಇದರಿಂದ ಭಾರತ ಕಳೆದುಕೊಂಡದ್ದು ಏನು ಗೊತ್ತೆ? ಬರೋಬ್ಬರಿ ೩೮೦೦ ಮಂದಿ ಯೋಧರನ್ನು. ಈ ಯುದ್ಧದಿಂದಾಗಿ ನಾವು ೪೫ ಅಮೂಲ್ಯ ಯುದ್ಧ ವಿಮಾನಗಳನ್ನು ಕಳೆದುಕೊಂಡೆವು. ತಮಾಷೆ ಎಂದರೆ ಈ ಯುದ್ಧ ಬೇಡವಾಗಿತ್ತು ಎಂದು ಒಬ್ಬನೇ ಒಬ್ಬ ಕಾಂಗಿ, ಗುಲಾಮ ಹೇಳಲಿಲ್ಲ.

೧೯೮೭ರಲ್ಲಿ ನಮ್ಮ ದೇಶ ಶ್ರೀಲಂಕೆಗೆ ಪೀಸ್ ಕೀಪಿಂಗ್ ಫೋರ್ಸ್ ಎಂಬ ಶಾಂತಿಪಡೆಯನ್ನು ಕಳಿಸಿಕೊಟ್ಟಿತು. ಈ ಶಾಂತಿಪಡೆಗೆ ಮೊದಲು ಯುದ್ಧ ಮಾಡುವ ಯೋಜನೆಯೇ ಇರಲಿಲ್ಲ. ಆದರೆ ಲಂಕೆ ಸೇರಿದ ಕೆಲವೇ ವಾರಗಳಲ್ಲಿ ಅದು ಯುದ್ಧದ ಭಾಗವಾಯಿತು. ೨ ವರ್ಷ ೭ ತಿಂಗಳು ಈ ಶಾಂತಿಪಡೆ ಲಂಕೆಯಲ್ಲಿ ಯುದ್ಧದಲ್ಲಿ ತೊಡಗಿಸಿಕೊಂಡಿತ್ತು. ಲಂಕೆಯಲ್ಲಿ ನಡೆಯುತ್ತಿದ್ದ ಯುದ್ಧ. ನಡೆಯುತ್ತಿದ್ದದ್ದು ಲಂಕೆಯ ಸರಕಾರ ಮತ್ತು ಒಂದು ಬಂಡುಕೋರ ಪಡೆಗೆ. ಇದರಲ್ಲಿ ಭಾರತ ಮೂಗು ತೂರಿಸುವ ಅಗತ್ಯವೇ ಇರಲಿಲ್ಲ. ಆದರೂ ಮೂಗು ತೂರಿಸಿತು ಮತ್ತು ಕೊನೆಗೆ ಆ ಮೂಗನ್ನು ಭೀಕರವಾಗಿ ಕುಯ್ದುಕೊಂಡಿತು. ಲಂಕೆಯ ದಂಗೆಯಲ್ಲಿ ಇಂಡಿಯನ್ ಪೀಸ್ ಕೀಪಿಂಗ್ ಫೋರ್ಸ್ ಕಳೆದುಕೊಂಡ ಭಾರತೀಯ ಯೋಧರ ಸಂಖ್ಯೆ ಎಷ್ಟು ಗೊತ್ತೆ? ೧೭೩೮! ಹಾಗೆಯೇ ೩೦೦೦ ಯೋಧರು ಗಂಭೀರವಾಗಿ ಗಾಯಗೊಂಡರು. ಕೆಲವರು ಗಾಯಗಳ ಕಾರಣದಿಂದ ತಮ್ಮ ವೃತ್ತಿಯಿಂದ ನಿವೃತ್ತರಾಗಬೇಕಾಗಿ ಬಂತು. ಈ ಯುದ್ಧ ಬೇಡವಾಗಿತ್ತು ಎಂದು ಒಬ್ಬನೇ ಒಬ್ಬ ಕಾಂಗಿ, ಗುಲಾಮ ಹೇಳಲಿಲ್ಲ.

೨೦೦೪ರಿಂದ ೨೦೧೪ರವರೆಗೆ ದೇಶದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿತ್ತಲ್ಲವೆ? ಆಗ, ಭಾರತದಲ್ಲಿ - ಕೇವಲ ಜಮ್ಮು & ಕಾಶ್ಮೀರದಲ್ಲಿ ಮಾತ್ರ - ಉಗ್ರರ ದಾಳಿಗೆ ಸಿಕ್ಕಿ ತೀರಿಕೊಂಡ ನಾಗರಿಕರ ಸಂಖ್ಯೆ ಎಷ್ಟು ಗೊತ್ತೆ? ೨೦೮೪! ಕಳೆದ ೨೭ ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದ ಸತ್ತವರ ಒಟ್ಟು ಸಂಖ್ಯೆ ೪೪,೫೬೭ನ್ನು ಮೀರುತ್ತದೆ. ಇವರಲ್ಲಿ ೧೪,೦೦೦ ಮಂದಿ ನಮ್ಮ ನಿಮ್ಮಂಥ ನಾಗರಿಕರು. ಪ್ರವಾಸಿಗಳು. ಈ ಸಮಯದಲ್ಲಿ ನಾವು ೫೧೩೧ ಮಂದಿ ಯೋಧರನ್ನು ಕೇವಲ ಗಡಿರೇಖೆಯ ಮೇಲಿನ ಚಕಮಕಿಯಲ್ಲೇ ಕಳೆದುಕೊಂಡಿದ್ದೇವೆ. ಈ ಕಾಶ್ಮೀರದ ಗಲಾಟೆಯ ಹೊರತಾಗಿಯೂ ನಮ್ಮ ದೇಶದ ಅಲ್ಲಲ್ಲಿ ಉಗ್ರ ಕೃತ್ಯಗಳಾಗುತ್ತಲೇ ಇರುತ್ತವೆ ತಾನೆ? ಇಂಥ ಸಂದರ್ಭಗಳಲ್ಲಿ ಎನ್ಕೌಂಟರ್ ಮೂಲಕ ಹೊಡೆದು ಹಾಕಿದ ಉಗ್ರರ ಸಂಖ್ಯೆ - ೨೦೦೪ರಿಂದ ೨೦೧೪ರ ಅವಧಿಯಲ್ಲಿ - ಒಟ್ಟು ೧೬೫೪. ಈ ಯುಪಿಎ ಅವಧಿಯಲ್ಲಿ, ನಮ್ಮ ದೇಶ ಒಂದು ಯುದ್ಧವನ್ನೂ ಮಾಡಲಿಲ್ಲ. ಪಾಕಿಸ್ತಾನದ ಉಗ್ರರೇ ಮುಂಬಯಿಯಂಥ ನಗರವನ್ನು ಮೂರು ದಿನ ತಮ್ಮ ಮುಷ್ಟಿಯಲ್ಲಿಟ್ಟುಕೊಂಡು ನಡುಗಿಸಿದರೂ ಯುದ್ಧ ಮಾಡಲಿಲ್ಲ! ೧೬೦ಕ್ಕೂ ಹೆಚ್ಚು ನಾಗರಿಕರು ಆ ಮೂರು ದಿನಗಳಲ್ಲಿ ಹೆಣವಾಗಿ ಬಿದ್ದರೂ ನಾವು ಯುದ್ಧ ಮಾಡಲಿಲ್ಲ. ಈ ಹತ್ತು ವರ್ಷಗಳಲ್ಲಿ, ದೇಶದೊಳಗಿನ ಉಗ್ರವಾದಕ್ಕೆ, ಪ್ರತಿ ಮೂರು ದಿನಕ್ಕೊಬ್ಬ ಯೋಧ ಸತ್ತಿದ್ದಾನೆ. ಆದರೂ ನಾವು ಯುದ್ಧ ಮಾಡಲಿಲ್ಲ! ದೇಶದ ಹೊರಗಿನ ಎರಡು ಕಡೆ ಯುದ್ಧ ಮಾಡಿದ ನಾವು ನಮ್ಮದೇ ದೇಶದ ಮೇಲೆ ಆಗುತ್ತಿರುವ ಭಯೋತ್ಪಾದನೆಯ ದಾಳಿಗೆ ಪ್ರತೀಕಾರ ಯಾಕೆ ತೋರಿಸುತ್ತಿಲ್ಲ ಎಂದು ಒಬ್ಬನೇ ಒಬ್ಬ ಕಾಂಗಿ, ಗುಲಾಮ ಕೇಳಲಿಲ್ಲ.

ಮುಂದಿನ ಸಲ, ಯುದ್ಧ ಬೇಡ ಎಂದು ನಿಮ್ಮೊಡನೆ ವಾದಕ್ಕಿಳಿಯುವ ಹುಂಬನ ಜೊತೆ ಈ ಮೇಲಿನ ಸಂಗತಿಗಳನ್ನು ಹೇಳಿ ವಿವರಣೆ ಕೇಳಿ. ತನ್ನ ಅಜ್ಜಿ, ತನ್ನ ತಂದೆ ಮಾಡಿದ ಅನಗತ್ಯ ಯುದ್ಧಗಳ ವಿವರಗಳೇ ಗೊತ್ತಿಲ್ಲದ ಯುವರಾಜ ಈಗ ಯುದ್ಧ ಬೇಡ ಎನ್ನುತ್ತಿರುವುದು ಯಾಕೆ? ಎಂಬ ವಾಪಸ್ ಪ್ರಶ್ನೆಯನ್ನು ಹುಂಬರ ಮುಂದೆ ಇಡಿ.

ಕೃಪೆ- ರೋಹಿತ್ ಚಕ್ರತೀರ್ಥ

 

 

 

Edited By

Ramesh

Reported By

Ramesh

Comments