ನಾಲ್ಕು ಚಿನ್ನದ ಪದಕ ಪಡೆದ ಜೆ.ಆರ್.ಮೇಘಶ್ರೀ

01 Mar 2019 8:16 AM |
388 Report

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ನಡೆದ 8 ನೇ ಘಟಿಕೋತ್ಸವದಲ್ಲಿ ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆ ನಿವಾಸಿಗಳಾದ, ಜಗನ್ನಾಥ್ ಮತ್ತು ರಾಜಮ್ಮ ದಂಪತಿಗಳ ಪುತ್ರಿ [ಇಬ್ಬರೂ ಶಿಕ್ಷಕರು] ಜೆ.ಆರ್.ಮೇಘಶ್ರೀ ತರಕಾರಿ ವಿಜ್ಞಾನ ವಿಷಯದಲ್ಲಿ ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ. ಮೇಘಶ್ರೀ ಚಿನ್ನದ ಪದಕ ಪಡೆದದ್ದಕ್ಕೆ ಸಂತೋಷ ವ್ಯಕ್ತಪಡಿಸಿ ತರಕಾರಿ ವಿಜ್ಞಾನ ವಿಷಯದಲ್ಲಿಯೇ ಹೆಚ್ಚಿನ ಸಂಶೋಧನೆಗಾಗಿ ಪಿಎಚ್ ಡಿ ಪದವಿಗೆ ದಾಖಲಾಗಿದ್ದೇನೆ. ನಮ್ಮದು ಕೃಷಿ ಹಿನ್ನೆಲೆ ಇರುವ ಕುಟುಂಬ ಅಲ್ಲದಿದ್ದರು ಸಹ ಕೃಷಿಯಲ್ಲಿ ಆಸಕ್ತಿ ಇತ್ತು. ಪ್ರಾಥಮಿಕ ವಿದ್ಯಾಭ್ಯಾಸವನ್ನು ದೊಡ್ಡಬಳ್ಳಾಪುರದ ಎಂಎಬಿಎಲ್ ಶಾಲೆಯಲ್ಲಿ ಮಾಡಿದ್ದು, ಪಿಯು ತುಮಕೂರಿನಲ್ಲಿ, ಪದವಿ ಕೋಲಾರದಲ್ಲಿ ಹಾಗೂ ಸ್ನಾತಕೋತ್ತರ ಪದವಿಯನ್ನು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಪಡೆದೆ ಎಂದು ತಿಳಿಸಿದರು.

Edited By

Ramesh

Reported By

Ramesh

Comments