ಮಂಡ್ಯ ಅಖಾಡಕ್ಕೆ ಈ ಅಭ್ಯರ್ಥಿಯೇ ಬೇಕಂತೆ…!! ಜೆಡಿಎಸ್ ಮುಖಂಡರ ಒತ್ತಡ ಯಾರ ಮೇಲೆ..!!!

26 Feb 2019 5:53 PM |
4604 Report

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಾಕಷ್ಟು ಗೊಂದಲಗಳು ಪ್ರಾರಂಭವಾಗುತ್ತಿವೆ. ಮಂಡ್ಯ ಅಖಾಡಕ್ಕೆ ಯಾರನ್ನು ನಿಲ್ಲಿಸಬೇಕು ಎಂಬುದೆ ದೊಡ್ಡ ಪ್ರಶ್ನೆಯಾಗಿ ಬಿಟ್ಟಿದೆ..  ಸ್ಥಳೀಯ ಜೆಡಿಎಸ್ ಮುಖಂಡರು ನನ್ನನ್ನೇ ಅಭ್ಯರ್ಥಿ ಮಾಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಹಾಗಾಗಿ, ಪಕ್ಷ ಯಾವುದೇ ತೀರ್ಮಾನ ಕೈಗೊಂಡರೂ ನಾನು ಬದ್ಧನಾಗಿರುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ತಿಳಿಸಿದ್ದಾರೆ..

ಮಾಧ್ಯಮದವರೊಂದಿಗೆ  ಮಾತನಾಡಿದ ನಿಖಿಲ್ ಸ್ಥಳೀಯ ಜೆಡಿಎಸ್ ಮುಖಂಡರು ನನ್ನನ್ನೇ ಅಭ್ಯರ್ಥಿ ಮಾಡಬೇಕೆಂದು ಒತ್ತಡ ಹೇರುತ್ತಿದ್ದಾರೆ ಇಲ್ಲಿನ ಶಾಸಕರು, ಸಂಸದರು ಹಾಗೂ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದು, ನಂತರ ನಮ್ಮ ಪಕ್ಷದ ನಾಯಕರು ಲೋಕಸಭೆ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತಾರೆ ಎಂದು ಕುಮಾರಸ್ವಾಮಿ ಪುತ್ರ ನಿಖಿಲ್​ ಕುಮಾರ್​ ಹೇಳಿದ್ದಾರೆ.ಮಂಡ್ಯ ಅಖಾಡದ ಟಿಕೇಟ್ ನಿಖಿಲ್’ಗೋ ಸುಮಲತಾ ಗೋ ಗೊತ್ತಿಲ್ಲ.. ಇನ್ನೂ ಸ್ವಲ್ಪ ದಿನದಲ್ಲೆ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

Edited By

hdk fans

Reported By

hdk fans

Comments